ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಚುನಾವಣೆ ಹೊತ್ತಿನಲ್ಲೇ ರಾಜ್ಯದ ಮತದಾರರನ್ನು ಸೆಲೆಯುವ ಪ್ರಯತ್ನ ಮಾಡಿದ್ದಾರೆ. ಇಬ್ಬರೂ ಸಹ ತಮ್ಮ ಮನದಾಳದ ಮಾತು ಹಂಚಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಉಭಯ ಕುಶಲೋಪರಿ, ರಾಜ್ಯ ರಾಜಕೀಯದ ಆಗು-ಹೋಗುಗಳು, ಕಾಂಗ್ರೆಸ್ ಗ್ಯಾರಂಟಿಗಳ ಅನುಷ್ಠಾನ, ಜನರಿಗೆ ಕಾಂಗ್ರೆಸ್ ಮೇಲಿರುವ ನಂಬಿಕೆಯ ಕುರಿತು ಸಿದ್ದು-ಡಿಕೆಶಿ ಮಾತು ಮಂಥನ ನಡೆಸಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ಇತ್ತೀಚೆಗೆ ಸಂಭವಿಸಿದ ಹೆಲಿಕಾಫ್ಟರ್ ಅವಘಡದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯ ಪ್ರವಾಸದ ಬಗ್ಗೆ ಮಾತುಕತೆ ನಡೆಸಿದ ಕೈ ನಾಯಕರು, ಮಂಡ್ಯ ಕನಿಷ್ಠ 5 ಕ್ಷೇತ್ರ ಗೆಲ್ಲುತ್ತೇವೆ. ನಮ್ಮ ಪ್ರಣಾಳಿಕೆ ಬಜೆಟ್ ಗೃಹಿಣಿಯರ ಮನಸ್ಸು ಗೆದ್ದಿದೆ ಎಂದು ಬಜೆಟ್ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.
ಉಭಯ ಕುಶಲೋಪರಿ, ರಾಜ್ಯ ರಾಜಕೀಯದ ಆಗು-ಹೋಗುಗಳು, ಕಾಂಗ್ರೆಸ್ ಗ್ಯಾರಂಟಿಗಳ ಅನುಷ್ಠಾನ, ಜನರಿಗೆ ಕಾಂಗ್ರೆಸ್ ಮೇಲಿರುವ ನಂಬಿಕೆಯ ಕುರಿತಾಗಿ ಉಭಯ ನಾಯಕರ ಮಾತು ಮಂಥನ..
ತಪ್ಪದೆ ವೀಕ್ಷಿಸಿ#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ pic.twitter.com/OtoXT2GudX
— Karnataka Congress (@INCKarnataka) May 7, 2023
ಇದನ್ನೂ ಓದಿ : ಲಿಂಗಾಯತರು ‘ಕಾಂಗ್ರೆಸ್ಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ’ : ಪ್ರಧಾನಿ ನರೇಂದ್ರ ಮೋದಿ
ಹೀಗಿತ್ತು ಸಿದ್ದು–ಡಿಕೆಶಿ ಮಂಥನ
ಸಿದ್ದು : ಹೈ ಕರ್ನಾಟಕ ಕೂಡ ಕಳೆದಭಾರಿಗಿಂತ ಹೆಚ್ಚಿಗೆ ಗೆಲ್ಲುತ್ತೇವೆ
ಡಿಕೆಶಿ : ನಾವು 13ನೇ ತಾರೀಕು ರಿಸಲ್ಟ್ ಬಂದ ತಕ್ಷಣ ಜಾರಿಗೊಳಿಸಬೇಕು. ಖಂಡಿತವಾಗಿಯು ನಾವು ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕು. ಬಿಜೆಪಿಯವರ ರೀತಿ ಈಗ,ನಾಳೆ ನಾಡಿದ್ದು ಎಂದು ಹೇಳುವುದಕ್ಕಾಗುವುದಿಲ್ಲ. ನಾವು ಬಂದ ತಕ್ಷಣ ಮೊದಲ ಕ್ಯಾಬಿನೆಟ್ನಲ್ಲಿಯೇ ಒಪ್ಪಿಗೆ ಪಡೆದು
ಸಿದ್ದು : ನಮ್ಮ 5 ಗ್ಯಾರಂಟಿಗಳನ್ನು ಜಾರಿಗೊಳಿಸಬೇಕು. ಏಕೆಂದರೆ ನಾನು ಮತ್ತು ನೀವು ಜನರಿಗೆ ಮಾತು ಕೊಟ್ಟಿದ್ದೇನೆ.
ಡಿಕೆಶಿ : ನಾವೇನಾದರೂ ಜಾರಿಗೊಳಿಸದಿದ್ದರೆ ಓಟು ಕೇಳುವುದಿಲ್ಲ ಎಂದಿದ್ದೇನೆ.
ಸಿದ್ದು : ಹೌದು, ನಾನು ಕೂಡ ಹೇಳಿದ್ದೇನೆ ಕೊಟ್ಟ ಮಾತು ಈಡೇರಿಸದಿದ್ದರೆ, ಅಧಿಕಾರದಲ್ಲಿ ಒಂದು ಸೆಕೆಂಡ್ ಕೂರುವುದಿಲ್ಲ ಎಂದು ಹೇಳಿದ್ದೇನೆ. ನರೇಂದ್ರ ಮೋದಿಯವರು ನಮ್ಮ ಗ್ಯಾರಂಟಿ ಬಗ್ಗೆ ಇದರ ಬಗ್ಗೆ ಚರ್ಚಿಸಿದ್ದಾರೆ.