ತುಮಕೂರು : ನನ್ನ ಸಹೋದರ ಡಿ.ಸಿ ಗೌರಿಶಂಕರ್ ಐದು ವರ್ಷ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜನತೆಯ ಕಷ್ಟ ಸುಖಕ್ಕೆ ಸ್ಪಂದಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಿ ಅವರು ಡಿ.ಸಿ ಗೌರಿಶಂಕರ್ ಅವರ ಪರ ಮತಯಾಚಿಸಿದರು.
ಈ ವೇಳೆ ಮಾತನಾಡಿರುವ ಅವರು, ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಪರವಾಗಿ ಪ್ರಚಾರ ಮಾಡಲು ಉತ್ತರ ಭಾರತದ ಘಟಾನುಘಟಿಗಳು ಇಲ್ಲೇ ಬಿಡು ಬಿಟ್ಟಿದ್ದಾರೆ. ಪ್ರಧಾನಿ, ಗೃಹ ಸಚಿವರು, ಮಂತ್ರಿಗಳು ಬಿಡು ಬಿಟ್ಟಿದ್ದಾರೆ. ಕಾಂಗ್ರೆಸ್ ಹಲವಾರ ಮುಖ್ಯಮಂತ್ರಿ ಬೇರೆ ಬೇರೆ ಕಂಡೆ ಇಂದ ಬಂದು ಬೀಡು ಬಿಟ್ಟಿದ್ದಾರೆ ಎಂದು ಕುಟುಕಿದರು.
ಜೆಡಿಎಸ್ ಏಕಾಂಗಿಯಾಗಿ ಹೋರಾಟ ಮಾಡ್ತಿದೆ
ಜೆಡಿಎಸ್ ಪಕ್ಷ ಏಕಾಂಗಿಯಾಗಿ ಹೋರಾಟ ಮಾಡ್ತಾ ಇರೋದು. ನಿಮ್ಮ ಕುಟುಂಬದಲ್ಲಿ ಅಣ್ಣ-ತಮ್ಮನ ಸ್ಥಾನ ಕೊಟ್ಟಿದ್ದೀರಿ. ಕಳೆದ ಐದು ತಿಂಗಳಲ್ಲಿ ಪಂಚರತ್ನ ಯೋಜನೆಯ ಮೂಲಕ ಪ್ರತಿ ಕುಟುಂಬ ತಲುಪಿದೆ. ಈ ಕಾರ್ಯಕ್ರಮಗಳೆಲ್ಲವೂ ಬಡ ಜನರಿಗೆ ತಲುಪುವ ಕಾರ್ಯಕ್ರಮಗಳು ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ : ಜನರ ಹಣ ಲೂಟಿ ತಡೆಗಟ್ಟಿ ಪಂಚರತ್ನ ಯೋಜನೆ ಜಾರಿ : ಎಚ್.ಡಿ.ಕುಮಾರಸ್ವಾಮಿ
ಗೌರಿಶಂಕರ್ ಅವರ ಪರವಾಗಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರಲ್ಲಿ ಇಷ್ಟೋದು ಜನ ಸೇರಿ ಆಶೀರ್ವಾದ ಮಾಡೋಕೆ ಬಂದಿದ್ದೀರಿ. ಎಲ್ಲರಿಗೂ ನನ್ನ ಗೌರವ ಪೂರ್ವಕ ವಂದನೆಗಳು ಎಂದರು.
ಸಿದ್ಧಗಂಗಾ ಶ್ರೀಗಳ ಹಾದಿಯಲ್ಲಿ ಸಾಗುತ್ತಿದ್ದೇವೆ
ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಹಾಗೂ ಅಭ್ಯರ್ಥಿ ಡಿ.ಸಿ.ಗೌರಿಶಂಕರ್ ಮಾತನಾಡಿ, ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳು ಹಾಕಿಕೊಟ್ಟ ಹಾದಿಯಲ್ಲಿ ಚನ್ನಿಗಪ್ಪ ಕುಟುಂಬ ಸಾಗುತ್ತಿದೆ. ನನ್ನ ಜನಕ್ಕಾಗಿ ಸತ್ತೇ ನಾನು ಅನ್ನೋ ತೃಪ್ತಿ ನನಗೆ ಸಿಗುತ್ತೆ ಅಂತಾ ಕರೋನಾದಲ್ಲಿ ಅವರ ಜೊತೆಯಾಗಿದ್ದೆ. ನನ್ನ ಅಕ್ಕ, ತಂಗಿ, ತಾಯಂದಿರ ಪ್ರೀತಿಯೇ ನಾನು ಮನೆ ಮಗನಾಗೋಕೆ ಕಾರಣ ಎಂದು ತಿಳಿಸಿದರು.