Monday, December 23, 2024

ಸಚಿವ ಸುಧಾಕರ್ ಪರ ಅಮಿತ್ ಶಾ ಬೃಹತ್ ರೋಡ್ ಶೋ

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಲಿದ್ದಾರೆ ಎಂದು ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಅವರು ಹೇಳಿದರು.

ಈ ಕುರಿತು ಮಾತನಾಡಿರುವ ಅವರು, ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2.45 ರಿಂದ 3.45ರ ವರೆಗೂ ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಯಲ್ಲಿ ಅಮಿತ್ ಶಾ ಅವರ ರೋಡ್ ಶೋ ನಡೆಸಲಿದ್ದಾರೆ ಎಂದರು.

ಒಕ್ಕಲಿಗರ ಕಲ್ಯಾಣ ಮಂಟಪದಿಂದ ಅಮಿತ್ ಶಾ ಅವರ ರೋಡ್ ಶೋ ಆರಂಭವಾಗಲಿದೆ. ಬಲಮುರಿ ಸರ್ಕಲ್(ವೃತ್ತ), ಶಿಡ್ಲಘಟ್ಟ ಸರ್ಕಲ್, ಶ್ರೀ ಮರಳು ಸಿದ್ಧೇಶ್ವರ ದೇವಸ್ಥಾನದವರೆಗೂ ರೋಡ್ ಶೋ ನಡೆಯಲಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.

ಇದನ್ನೂ ಓದಿ : ಸುಧಾಕರ್ ‘ಚಿಕ್ಕಬಳ್ಳಾಪುರ ಕ್ಷೇತ್ರವನ್ನು ದೊಡ್ಡಬಳ್ಳಾಪುರ ‘ಮಾಡಿದ್ದಾರೆ : ನಟ ಸುದೀಪ್

50 ಸಾವಿರಕ್ಕೂ ಅಧಿಕ ಮತಗಳ ಗೆಲುವು

50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ತಮ್ಮನ್ನು ಗೆಲ್ಲಿಸುವ ವಿಶ್ವಾಸ ಇದೆ. ಜವಾಬ್ದಾರಿಯಿಂದ ಚಿಕ್ಕಬಳ್ಳಾಪುರದ ಅಭಿವೃದ್ಧಿಯ ರಥವನ್ನು ಮುಂದೆ ಕೊಂಡೊಯ್ಯಲಾಗುವುದು. ಅಭಿವೃದ್ಧಿಯ ರಥ ಹಿಂದೆ ಹೋಗದೆ ಮುಂದೆ ಸಾಗಲು ಸಹಕರಿಸುವಂತೆ ಸಚಿವ ಸುಧಾಕರ್ ಮತದಾರರಲ್ಲಿ ಮನವಿ ಮಾಡಿದರು.

ನಾಳೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಉಳಿದ ಎರಡು ದಿನ ಪ್ರತಿಯೊಬ್ಬರೂ ತಮ್ಮ ಪರವಾಗಿ ಪ್ರಚಾರ ನಡೆಸುವ ಮೂಲಕ ಮತ ಹಾಕಿಸಲು ಕಾರ್ಯಕರ್ತರಿಗೆ ಕರೆ ನೀಡಿದರು.

ನಟನಟಿಯರಿಗೆ ಸುಧಾಕರ್ ಅಭಿನಂದನೆ

ಚುನಾವಣೆಯ ಒತ್ತಡದ ಕಾರಣ ಕ್ಷೇತ್ರದ ಪ್ರತಿ ಹಳ್ಳಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ, ಕನ್ನಡ ಚಿತ್ರರಂಗದ ನಟ-ನಟಿಯರು ಪ್ರತಿ ಗ್ರಾಮದ ಪ್ರತಿ ಮನೆಗೆ ತೆರಳಿ ತಮ್ಮ ಪರ ಮತ ಯಾಚನೆ ಮಾಡಿದ್ದಾರೆ. ಅವರೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES