ಬೆಂಗಳೂರು : ಲಿಂಗಾಯತ ಸಮುದಾಯ ನನಗೆ ಆಶೀರ್ವಾದ ಮಾಡಿದೆ ಎಂದು ಮಾಜಿ ಶಾಸಕ ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತುಮಕೂರು ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದ ವೀರಶೈವ ಲಿಂಗಾಯತ ಸಮುದಾಯ ನನ್ನ ಜೊತೆಯಿದೆ. ನನಗೆ ಈ ಬಾರಿ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಣ್ಣೀರಲ್ಲೇ ಬಿಜೆಪಿ ಕೊಚ್ಚಿ ಹೋಗುತ್ತೆ
ಬಿಜೆಪಿಯವರಿಗೆ ಇಂದು ಲಿಂಗಾಯತ ಸಮುದಾಯದ ಅವಶ್ಯಕತೆ ಇಲ್ಲ ಎಂದು ಅವರದೇ ಪಕ್ಷದ ಬಿ.ಎಲ್.ಸಂತೋಷ್ ಹೇಳ್ತಾ ಇದ್ದಾರೆ. ಯಡಿಯೂರಪ್ಪನಿಗೆ ಕಣ್ಣೀರು ಹಾಕಿಸಿ ಕೆಳಗಿಳಿಸಿದ್ರು. ಅವರ ಕಣ್ಣೀರಲ್ಲೇ ಬಿಜೆಪಿ ಪಕ್ಷ ಕೊಚ್ಚಿ ಹೋಗುತ್ತೆ ಎಂದು ಕೆ.ಎನ್ ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ‘ನನಗೆ ಅಧಿಕಾರ ಮುಖ್ಯವಲ್ಲ’, ಕ್ಷೇತ್ರದ ಜನ ಸದಾ ನನ್ನ ಜೊತೆ ಇರ್ತಾರೆ : ಕೆ.ಎನ್ ರಾಜಣ್ಣ
ಜೆಡಿಎಸ್ ವಚನಭ್ರಷ್ಟ ಎಂದ ರಾಜಣ್ಣ
ಜೆಡಿಎಸ್ ಪಕ್ಷದವರು ಯಡಿಯೂರಪ್ಪ ಅವರಿಗೆ 20 ತಿಂಗಳ ಅಧಿಕಾರ ಕೊಡದೇ ವಚನಭ್ರಷ್ಟ ಅನ್ನಿಸಿಕೊಂಡಿದೆ. ಹಾಗಾಗಿ, ಈ ಬಾರಿ ಕಾಂಗ್ರೆಸ್ ಪಕ್ಷ ಹಾಗೂ ನನ್ನ ಜೊತೆಗೆ ವೀರಶೈವ ಲಿಂಗಾಯತ ಸಮುದಾಯ ಇದೆ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷ ಲಿಂಗಾಯತ ಸಮುದಾಯವನ್ನು ಕಡೆಗಣಿಸುತ್ತಿದೆ. ಇದು ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಈ ಬಾರೀ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ನನಗೆ ಆಶೀರ್ವಾದ ಮಾಡ್ತಾರೆ. ನಾನು ಅವರಿಗೆ ಋಣಿಯಾಗಿರುತ್ತೇನೆ ಎಂದು ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.