Monday, November 18, 2024

‘ಬೆಂಗಳೂರು ಸಮಗ್ರ ಅಭಿವೃದ್ಧಿ’ಗೆ ಪ್ರತ್ಯೇಕ ಪ್ರಣಾಳಿಕೆ : ದಳಪತಿಗಳ ‘ಭರಪೂರ ಭರವಸೆ’

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಮಾಜಿ ಪ್ರಧಾನಮಂತ್ರಿ ಎಚ್.ಡಿ ದೇವೇಗೌಡ ಅವರ ಸಮ್ಮುಖದಲ್ಲಿ ಇಂದು ಬೆಂಗಳೂರು ಮಹಾನಗರದ ಸಮಗ್ರ ಅಭಿವೃದ್ಧಿಗೆ ಸಿದ್ಧಪಡಿಸಿರುವ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಣಾಳಿಕೆ ಸಮಿತಿಯ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಕೆ.ಎನ್. ತಿಪ್ಪೇಸ್ವಾಮಿ, ಟಿ.ಎ ಶರವಣ ಹಾಗೂ ಬೆಂಗಳೂರು ನಗರದ ಅಧ್ಯಕ್ಷ ಎಚ್.ಎಂ ರಮೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಮೋದಿ ‘ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ’ ಆಡ್ತಿದ್ದಾರೆ : ಎಚ್.ಡಿ ಕುಮಾರಸ್ವಾಮಿ

ಪ್ರಣಾಳಿಕೆಯ ಪ್ರಮುಖಾಂಶಗಳು

  • ಬಡವರಿಗೆ ಮತ್ತು ಕೈಗಾರಿಕಾ ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ವಸತಿ ಸೌಲಭ್ಯ
  • ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯಧನ, ಆಟೋ ಚಾಲಕರಿಗೆ ಸೆಕ್ಯೂರಿಟಿ ಗಾರ್ಡ್ ಗಳಿಗೆ 2,000 ರೂ. ಸಹಾಯಧನ. ಬೀದಿ ಬದಿ ವ್ಯಾಪಾರಿಗಳಿಗೆ ದುಡಿಮೆ ರೂಪದಲ್ಲಿ ವೇತನ ಪಾವತಿ.
  • ಹಳೆ ಪಿಂಚಣಿ ಯೋಜನೆ ಮರು ಜಾರಿ
  • ಸ್ವಚ್ಛ ಬೆಂಗಳೂರು-ಜನಸಂದಣಿ ಪ್ರದೇಶಗಳಲ್ಲಿ 100 ಶೌಚಾಲಯ ನಿರ್ಮಾಣ
  • ಪಡಿತರ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ.
  • ಬಿಬಿಎಂಪಿಯ ಪ್ರತಿ ವಲಯವನ್ನು ಶೈಕ್ಷಣಿಕ ಜಿಲ್ಲೆಯಾಗಿ ಘೋಷಿಸಿ ಶಿಕ್ಷಣ ಪರಿಷತ್ ಸ್ಥಾಪನೆ
  • ಬಿಬಿಎಂಪಿಗೆ ಶೀಘ್ರ ಚುನಾವಣೆ. ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆ
  • ಪ್ರತಿ ಅಪಾರ್ಟಮೆಂಟ್ ನಲ್ಲೂ ಬಯೋಗ್ಯಾಸ್ ಪ್ಲಾಂಟ್ ನಿರ್ಮಾಣ
  • ಪ್ಲಾಸ್ಟಿಕ್ ಬಳಕೆ ನಿಷೇಧ
  • ರಸ್ತೆ,ಉದ್ಯಾನವನಗಳಲ್ಲಿ‌ಸೋಲಾರ್ ಲೈಟ್ ಅಳವಡಿಕೆ.
  • ಪ್ರತಿ ವಾರ್ಡ್ ನಲ್ಲೂ 30 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ.
  • ಬೆಂಗಳೂರಿಗೆ ಲೋಕಲ್ ಟ್ರೈನ್.
  • ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ಎಲೆಕ್ಟ್ರಿಕ್ ಬಸ್ ವ್ಯವಸ್ಥೆ
  • ಒಳಚರಂಡಿ, ಮಳೆನೀರು ಬಕಾಲುವೆ ಅಡೆತಡೆ ನಿವಾರಿಸಿ ಬೆಂಗಳೂರು ಪುನರ್ ನಿರ್ಮಾಣ.
  • ಮಹಿಳೆಯರ ಸುರಕ್ಷತೆಗೆ ಒನ್ ಸ್ಟಾಪ್ ಸೆಂಟರ್
  • ಕೆರೆ ಕಣಿವೆ ಮತ್ತು ಕಾಲುವೆಗಳ ಸಂರಕ್ಷಣೆ ಮತ್ತು ಪುನರ್ ನಿರ್ಮಾಣ
  • ಬೆಂಗಳೂರು ಮಹಾನಗರ ಹಸಿರೀಕರಣ ಮತ್ತು ಅರಣ್ಯೀಕರಣ.
  • ನಮ್ಮ ಮೆಟ್ರೋ 60 ಕಿ.ಮೀ ವಿಸ್ತರಣೆ.
  • ಮೆಕೆದಾಟು ಬಳಿ ಜಲಾಶಯ ನಿರ್ಮಾಣ, ಬೆಂಗಳೂರಿಗೆ 60 ಟಿಎಂಸಿ ನೀರು ಪೂರೈಕೆ
  • ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಎತ್ತಿನಹೊಳೆ ನೀರು ಪೂರೈಕೆ.

RELATED ARTICLES

Related Articles

TRENDING ARTICLES