Monday, December 23, 2024

ಹಾಡುಹಗಲೇ ಗುಂಡಿನ ಸದ್ದು, ಕಾರ್ಪೊರೇಟರ್ ಪತಿ ಬರ್ಬರ ಹತ್ಯೆ

ವಿಜಯಪುರ : ಹಾಡುಹಗಲೇ ಕಾರ್ಪೊರೇಟರ್ ಪತಿಯ ಮೇಲೆ ದುಷ್ಕರ್ಮಿಗಳು ಫೈರಿಂಗ್ ಮಾಡಿ ಹತ್ಯೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ನಗರದ ಚಾಂದಪುರ ಕಾಲೋನಿಯಲ್ಲಿ ಈ ನಡೆದಿದೆ. ವಾರ್ಡ್ ನಂ.19ರ ಪಕ್ಷೇತರ ಪಾಲಿಕೆ ಸದಸ್ಯೆ ನಿಶಾತ್ ಪತಿ ಹೈದರ್ ಅಲಿ ನದಾಫ್ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ಹೈದರ್ ನದಾಫ್ ರೌಡಿ ಶೀಟರ್ ಆಗಿದ್ದ. ದುಷ್ಕರ್ಮಿಗಳು ಗುಂಡಿನ ದಾಳಿ‌ ನಡೆಸಿದ ಪರಿಣಾಮ ಹೈದರ್ ನದಾಫ್ ಸ್ಥಳದಲ್ಲಿಯೇ ಮೃತಪಟ್ಟದ್ದಾರೆ. ವಿಜಯಪುರ ನಗರದಲ್ಲಿ ಚಾಂದಪೂರ ಕಾಲೋನಿ ಬಳಿ‌ ಇರುವ ತನ್ನ ನಿವಾಸದಿಂದ ಹೊರ ಬಂದು ಕಾರು ಹತ್ತುತ್ತಿದ್ದ ವೇಳೆ ಹೈದರ್ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು, ಗುಂಡಿನ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಗಂಡ ‘ಚಾಕೋಲೆಟ್’ ತರದಿದ್ದಕ್ಕೆ ಹೆಂಡ್ತಿ ಆತ್ಮಹತ್ಯೆ

ದಾಳಿಯಿಂದ ತಪ್ಪಿಸಿಕೊಳ್ಳಲು ಹೈದರ್ ಓಡಿ ಹೋಗಿದ್ದಾರೆ. ಬೆನ್ನಟ್ಟಿದ್ದ ದುಷ್ಕರ್ಮಿಗಳು ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಎರಡು ಗುಂಡುಗಳು ಪತ್ತೆಯಾಗಿವೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವದಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೊನ್ನೆ ನಡೆದ ಪಾಲಿಕೆ ಚುನಾವಣೆಯಲ್ಲಿ ಹೈದರ್ ನದಾಫ್ ವಾರ್ಡ್ ನಂ.19 ರಿಂದ ತಮ್ಮ ಪತ್ನಿ ನಿಶಾತ್ ನದಾಫ್ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.

RELATED ARTICLES

Related Articles

TRENDING ARTICLES