Saturday, December 21, 2024

ಮಧ್ಯವರ್ತಿ ಮೂಲಕ ಶಾಸಕನನ್ನು ಭೇಟಿಯಾಗಬೇಕೇ? : ನಾಪಂಡ ಮುತ್ತಪ್ಪ

ಮಡಿಕೇರಿ : ಮಧ್ಯವರ್ತಿ ಮೂಲಕ ಶಾಸಕನನ್ನು ಭೇಟಿಯಾಗಬೇಕಾಗಿದೆ. ಇದು ಮುಂದುವರಿಯಬೇಕೇ? ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಹೇಳಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ತಮ್ಮ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮೂರ್ನಾಡು ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಪವರ್ ಟಿವಿ ಜೊತೆಗೆ ಅವರು ಮಾತನಾಡಿದರು.

ಕಳೆದ ಎರಡುವರೆ ದಶಕಗಳಿಂದ ಒಬ್ಬನೇ ಶಾಸಕನನ್ನು ನೋಡಿಕೊಂಡು ಬಂದಿದ್ದೇವೆ. ಆದ್ರೆ, ಯಾವುದೇ ಅಭಿವೃದ್ಧಿ ಆಗಿಲ್ಲ. ಒಂದು ವೇಳೆ ಭೇಟಿಗೆ ಹೋದ್ರೂ ಮಧ್ಯವರ್ತಿ ಮೂಲಕ ಶಾಸಕನನ್ನು ಭೇಟಿಯಾಗಬೇಕಾಗಿದೆ. ಹೀಗಿರುವಾಗ ಜನ ಸಮಾನ್ಯರ ಸಮಸ್ಯೆಗಳು ಪರಿಹಾರ ಆಗೋದು ಹೇಗೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ನಮ್ಮ ಪಕ್ಷದ ಕಾರ್ಯಕರ್ತರೇ ‘ನಮ್ಮ ಸ್ಟಾರ್ ಪ್ರಚಾರಕರು’ : ಡಿ.ಸಿ ಗೌರಿಶಂಕರ್

ಜನ ಬದಲಾವಣೆ ಬಯಸಿದ್ದಾರೆ

ಮಡಿಕೇರಿ ಜನರು ಇವರ ಆಡಳಿತದಿಂದ ಬೇಸತ್ತಿದ್ದಾರೆ. ಹೀಗಾಗಿ, ಪ್ರಚಾರರಕ್ಕೆ ಹೋದ ಎಲ್ಲಾ ಕಡೆ ಬದಲಾವಣೆ ಕೇಳುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ಬದಗೊದ್ದು ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಈ ಬಾರಿ ಮಡಿಕೇರಿಯಲ್ಲಿ ಜೆಡಿಎಸ್ ಪಕ್ಷ ಗೆಲುವುದು ನಿಶ್ಚಿತ ಎಂದು ಏಳನೇ ಹೊಸ ಕೋಟೆಯಲ್ಲಿ ಮತಯಾಚನೆ ಮಾಡಿದರು.

ಜೆಡಿಎಸ್ ಪರ ಜನರ ಒಲವು

ರೋಡ್ ಶೋನಲ್ಲಿ ಭಾಗಿಯಾಗಿದ್ದ ಸಾವಿರಾರು ಮಂದಿ ಬೆಂಬಲಿಗರು, ಕಾರ್ಯಕರ್ತರು, ಬದಲಾವಣೆಗಾಗಿ ಈ ಸಲ ಜೆಡಿಎಸ್ ಗೆ ಮತ ಹಾಕಬೇಕು ಅಂತಾ ನಾಪಂಡ ಪರ ಘೋಷಣೆ ಕೂಗಿದರು. ಇನ್ನೂ ಕೆಲವರು ಡಾನ್ಸ್ ಮೂಲಕ ನಾಪಂಡ ಮುತ್ತಪ್ಪಗೆ ಬೆಂಬಲ ಸೂಚಿಸಿದರು.

ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಆಗಬೇಕಿದೆ. ರೈತರಿಗೆ ಮತ್ತು ಮಹಿಳೆಯರಿಗೆ ವಿಶೇಷ ಯೋಜನೆಗಳು ಕೇವಲ ಜೆಡಿಎಸ್ ನಿಂದ ಮಾತ್ರ ಸಾಧ್ಯ. ಈ ಬಾರಿ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಪವರ್ ಟಿವಿ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES