Thursday, January 23, 2025

ಟಾಸ್ ಗೆದ್ದ ಕೋಲ್ಕತ್ತಾ ಬ್ಯಾಟಿಂಗ್ ಆಯ್ಕೆ : ಇಂದಿನ ಪಂದ್ಯದಲ್ಲಿ ಯಾರಿಗೆ ಜಯ?

ಬೆಂಗಳೂರು : ಇಂದಿನ ಐಪಿಎಲ್ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಟಾಸ್ ಗೆದ್ದ ಕೆಕೆಆರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಹೈದರಾಬಾದ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳಿಗೂ ಗೆಲುವು ಅತ್ಯಂತ ಮಹತ್ವದ್ದಾಗಿದೆ. ಹೈದರಾಬಾದ್ ಮತ್ತು ಕೋಲ್ಕತ್ತಾ ಈವರೆಗೆ ತಲಾ 3 ಪಂದ್ಯಗಳನ್ನು ಮಾತ್ರ ಗೆದ್ದಿವೆ.

ಹೈದರಾಬಾದ್ ತಂಡ ಆಡಿರುವ 8 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕೋಲ್ಕತ್ತಾ ಆಡಿರುವ 9 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಕೆಕೆಆರ್ ಹಾಗೂ ಹೈದರಾಬಾದ್ ನಡುವೆ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಹೈದರಾಬಾದ್​ ಗೆಲುವು ದಾಖಲಿಸಿತ್ತು.

ಇದನ್ನೂ ಓದಿ : ಎರಡು ವಿಶೇಷ ದಾಖಲೆ ಹೊಸ್ತಿಲಿನಲ್ಲಿ ‘ಕಿಂಗ್ ಕೊಹ್ಲಿ’

ಕೋಲ್ಕತ್ತಾ ತಂಡ

ನಿತೀಶ್ ರಾಣಾ (ನಾಯಕ), ಜೇಸನ್ ರಾಯ್, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಿಂಕು ಸಿಂಗ್, ವೈಭವ್ ಅರೋರಾ, ಶಾರ್ದೂಲ್ ಠಾಕೂರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

ಹೈದರಾಬಾದ್ ತಂಡ 

ಏಡನ್ ಮಾರ್ಕ್ರಾಮ್ (ನಾಯಕ), ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಹ್ಯಾರಿ ಬ್ರೂಕ್, ಅಬ್ದುಲ್ ಸಮದ್, ಮಾರ್ಕೊ ಯಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಕಾರ್ತಿಕ್ ತ್ಯಾಗಿ ಮತ್ತು ಟಿ ನಟರಾಜನ್

RELATED ARTICLES

Related Articles

TRENDING ARTICLES