Wednesday, January 22, 2025

ಅಂಬೇಡ್ಕರ್ ಪ್ರತಿಮೆಗೆ ಸಮೃದ್ಧಿ ಮಂಜುನಾಥ್ ಕ್ಷೀರಾಭಿಷೇಕ

ಬೆಂಗಳೂರು : ಕೋಲಾರದ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಕ್ಷೇತ್ರದ ತಾಯಲೂರು ಗ್ರಾಮದ ಡಾ.ಅಂಬೇಡ್ಕರ್ ಪ್ರತಿಮೆಗೆ ಸಮೃದ್ಧಿ ಮಂಜುನಾಥ್ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿದ್ದಾರೆ‌.

ಗ್ರಾಮದಲ್ಲಿ ಮತ ಕೇಳಲು ಮನೆಗಳಿಗೆ ತೆರಳಿದ ಸಮೃದ್ಧಿ ಮಂಜುನಾಥ್ ಅವರಿಗೆ ಅಭೂತಪೂರ್ವ ಸ್ವಾಗತ ದೊರೆತಿದೆ. ಊರಿನ ಪ್ರತಿ ಮನೆಯವರೂ ಸಮೃದ್ಧಿ ಮಂಜುನಾಥ್ ಅವರಿಗೆ ಮತ ಹಾಕುವ ಭರವಸೆ ಕೊಟ್ಟಿದ್ದಾರೆ‌.

ಮುಳಬಾಗಿಲು ತಾಲ್ಲೂಕು ಆವನಿ ಪಂಚಾಯಿತಿ ವ್ಯಾಪ್ತಿಯ ವಿ.ಗುಟ್ಟಹಳ್ಳಿ ಗ್ರಾಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜಣ್ಣನವರ ಅಧ್ಯಕ್ಷತೆಯಲ್ಲಿ ‘ನಮ್ಮ ನಡೆ ನಿಮ್ಮ ಮನೆಯ ಕಡೆ’ ಕಾರ್ಯಕ್ರಮದ ಮೂಲಕ ಸಮೃದ್ಧಿ ಮಂಜುನಾಥ್ ಮತ ಬೇಟೆ ನಡೆಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಮುಖಂಡರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಸಮೃದ್ಧಿ ಮಂಜುನಾಥ್ ಪರ ಪತ್ನಿ ಪದ್ಮ ಪ್ರಚಾರ

ಬಳಿಕ, ವಿರೂಪಾಕ್ಷ ಗ್ರಾಮ, ರಾಮಸಂದ್ರ ಗ್ರಾಮ ಸೆರಿದಂತೆ ವಿವಿಧ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಮೃದ್ಧಿ ಮಂಜುನಾಥ್ ಅವರಿಗೆ ಹೂಮಳೆಗೈದು ಅದ್ಧೂರಿ ಸ್ವಾಗತ ಕೋರಿದರು. ಈ ವೇಳೆ ಪತ್ನಿ ಪದ್ಮ ಮಂಜುನಾಥ್ ಸೇರಿದಂತೆ ನೂರಾರು ಮಹಿಳೆಯರು ಸಾಥ್ ನೀಡಿದರು.

ಇಂದು ಬೈರಕೂರಲ್ಲಿ ಬಹಿರಂಗ ಸಭೆ

ಮುಳಬಾಗಿಲು ತಾಲ್ಲೂಕಿನ ಬೈರಕೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ 2.30 ಗಂಟೆಗೆ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಬೈರಕೂರು ಹೋಬಳಿಯ ಎಲ್ಲಾ ಮುಖಂಡರು, ಕಾರ್ಯಕರ್ತರು, ಮತಬಾಂಧವರು, ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಮೃದ್ಧಿ ಮಂಜುನಾಥ್ ಮನವಿ ಮಾಡಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ಆವನಿ ಪಂಚಾಯಿತಿಯ ವಿರೂಪಾಕ್ಷ ಗ್ರಾಮದಲ್ಲಿ ನಡೆದ ‘ನಮ್ಮ ನಡೆ ನಿಮ್ಮ ಮನೆಯ ಕಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು.

RELATED ARTICLES

Related Articles

TRENDING ARTICLES