ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಷ್ಟ್ರೀಯ ಪಕ್ಷಗಳು ಅಬ್ಬರದ ಪ್ರಚಾರದ ಮೂಲಕ ಮತದಾರರನ್ನು ಸೆಳೆಯುತ್ತಿವೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬಹುದೊಡ್ಡ ಸಂಚಲನ ಸೃಷ್ಟಿಸಿದೆ.
ಜನತಾ ಜಲಧಾರೆ, ಪಂಚರತ್ನ, ಕಾರ್ಯಕ್ರಮದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ಮಾಡಿದ್ದಾರೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಮತ ಬೇಟೆ ಆರಂಭಿಸಿದ್ದ ದಳಪತಿಗೆ ರಾಜ್ಯದ ಜನತೆ ಮನಸೋತಿದ್ದಾರೆ. ಇದೀಗ, ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೆಚ್ಚಿನ ಪ್ರಾದೇಶಿಕ ಪಕ್ಷಕ್ಕೆ ಮತ ಹಾಕಿ, ಕನ್ನಡಿಗರ ಅಸ್ಮಿತೆ ಉಳಿಸಿ ಎಂದು ಪೋಸ್ಟ್ ಮಾಡುತ್ತಿದ್ದಾರೆ.
ಕನ್ನಡಿಗರ ಬಳಿಯೇ ಅಧಿಕಾರ ಉಳಿಸಿ
ಕರ್ನಾಟಕದ ಜನತೆಯ ಮಾತನ್ನು ಕೇಳಿ ಆಡಳಿತ ನಡೆಸುವ ಪಕ್ಷ ರಾಜ್ಯದಲ್ಲಿ ಅದು ಜೆಡಿಎಸ್ ಪಕ್ಷ ಮಾತ್ರ. ಈ ಬಾರಿ ಕನ್ನಡಿಗರು, ಕರ್ನಾಟಕದ ಆಡಳಿತವನ್ನು ರಾಜ್ಯದಲ್ಲೇ ನಿರ್ಧರಿಸುವ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕು. ಆ ಮೂಲಕ ಶಾಸನರಾಗಿ ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸಬೇಕು. ಅಧಿಕಾರವನ್ನು ಕನ್ನಡಿಗರ ಬಳಿಯೇ ಉಳಿಸಿ ಕರ್ನಾಟಕವನ್ನು ರಕ್ಷಿಸಿ ಎಂದು ಜೆಡಿಎಸ್ ಪರ ಪೋಸ್ಟ್ ಮಾಡುತ್ತಿದ್ದಾರೆ.
ರಾಷ್ಟ್ರೀಯ ಪಕ್ಷಗಳ ಬಗ್ಗೆ ಕನ್ನಡಿಗರು ಅದೇಷ್ಟು ಬೇಸತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಇದು. ಕನ್ನಡಿಗರ ಅಸ್ಮಿತೆಗೆ ಟೊಂಕ ಕಟ್ಟಿ ನಿಂತಿರುವ ಜೆಡಿಎಸ್ ಬಗ್ಗೆ ಎಲ್ಲೆಡೆ ಒಲವು ಕಾಣುತ್ತಿದೆ. ಹಾಗಾಗಿ, ಜೆಡಿಎಸ್ ಗೆ ಮತ ಹಾಕುವುದು ಕನ್ನಡಿಗರನ್ನು ಗೆಲ್ಲಿಸಿದಂತೆ ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ದೊಡ್ಡದಾಗಿ ಟ್ರೆಂಡ್ ಆಗುತ್ತಿದೆ.1/2 pic.twitter.com/wNEC8HuAiE
— Janata Dal Secular (@JanataDal_S) May 3, 2023
ಇದನ್ನೂ ಓದಿ : ‘ನುಡಿದಂತೆ ನಡೆಯುವ ಯಾವನಾದ್ರು ಸಿಎಂ’ ಇದ್ರೆ ಅದು ನನ್ನ ಮಗ : ಎಚ್.ಡಿ ದೇವೇಗೌಡ
ಕನ್ನಡಿಗರು ಬೇಸತ್ತಿರುವುದಕ್ಕೆ ಇದೇ ಸಾಕ್ಷಿ
ಈ ಕುರಿತು ಜೆಡಿಎಸ್ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸಿದೆ. ರಾಷ್ಟ್ರೀಯ ಪಕ್ಷಗಳ ಬಗ್ಗೆ ಕನ್ನಡಿಗರು ಅದೇಷ್ಟು ಬೇಸತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಇದು. ಕನ್ನಡಿಗರ ಅಸ್ಮಿತೆಗೆ ಟೊಂಕ ಕಟ್ಟಿ ನಿಂತಿರುವ ಜೆಡಿಎಸ್ ಬಗ್ಗೆ ಎಲ್ಲೆಡೆ ಒಲವು ಕಾಣುತ್ತಿದೆ. ಹಾಗಾಗಿ, ಜೆಡಿಎಸ್ ಗೆ ಮತ ಹಾಕುವುದು ಕನ್ನಡಿಗರನ್ನು ಗೆಲ್ಲಿಸಿದಂತೆ (#Vote4JDSisVote4Kannadigas)ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ದೊಡ್ಡದಾಗಿ ಟ್ರೆಂಡ್ ಆಗುತ್ತಿದೆ ಎಂದು ಹೇಳಿದೆ.
ಈ ಸಲದ ಚುನಾವಣೆಯಲ್ಲಿ ಪಂಚರತ್ನ ಎಂಬ ವಿನೂತನ ಕಾರ್ಯಕ್ರಮದಿಂದ ಜನತೆಯ ಮನ ಗೆಲ್ಲಲಾಗಿದೆ. ರಾಜ್ಯ ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ಚುನಾವಣೆಯಲ್ಲಿ ಸೋಲಿಸಲು ಜನರು ನಿರ್ಧರಿಸಿದ್ದಾರೆ. @hd_kumaraswamy ಅವರನ್ನು ಮತ್ತೆ ಸಿಎಂ ಸ್ಥಾನದಲ್ಲಿ ನೋಡಲು ರಾಜ್ಯ ಕಾಯುತ್ತಿದೆ. ಕನ್ನಡಿಗರ ಸರ್ಕಾರಕ್ಕಾಗಿ.2/2#Vote4JDSisVote4Kannadigas
— Janata Dal Secular (@JanataDal_S) May 3, 2023
ಈ ಬಾರಿಯ ಚುನಾವಣೆಯಲ್ಲಿ ಪಂಚರತ್ನ ಎಂಬ ವಿನೂತನ ಕಾರ್ಯಕ್ರಮದಿಂದ ರಾಜ್ಯದ ಜನತೆಯ ಮನ ಗೆಲ್ಲಲಾಗಿದೆ. ರಾಜ್ಯದ ಜನರು ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ಚುನಾವಣೆಯಲ್ಲಿ ಸೋಲಿಸಲು ನಿರ್ಧರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಸ್ಥಾನದಲ್ಲಿ ನೋಡಲು ರಾಜ್ಯ ಕಾಯುತ್ತಿದೆ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಿದೆ.