Monday, December 23, 2024

ಶಿಡ್ಲಘಟ್ಟ ನಗರದಲ್ಲಿ ಸೀಕಲ್ ರಾಮಚಂದ್ರಗೌಡ ಭರ್ಜರಿ ಪ್ರಚಾರ

ಬೆಂಗಳೂರು : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರ ಪ್ರಚಾರಕ್ಕೆ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.

ಸೀಕಲ್ ರಾಮಚಂದ್ರಗೌಡ ಅವರ ಮತ ಬೇಟೆಗೆ ಸಿಗುತ್ತಿರುವ ರೆಸ್ಪಾನ್ಸ್ ಗೆ ಎದುರಾಳಿ ಪಕ್ಷಗಳಿಗೆ ಸೋಲಿನ ಭೀತಿ ಶುರುವಾಗಿದೆ. ಎಂದಿನಂತೆ ಇಂದು ಸಹ ಅಬ್ಬರದ ಪ್ರಚಾರ ನಡೆಸಿ, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ಶಿಡ್ಲಘಟ್ಟ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.1, 2, 3, 4 ಮತ್ತು 5ರಲ್ಲಿ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರು ಭರ್ಜರಿ ಪ್ರಚಾರ ನಡೆಸಿದರು. ಮಾಜಿ ಶಾಸಕರಾದ ಎಂ. ರಾಜಣ್ಣ ಮತ್ತು ಡಾ. ಸತ್ಯನಾರಾಯಣ ಅವರು ಸಾಥ್ ನೀಡಿದರು.

ಇದನ್ನೂ ಓದಿ : ಸೀಕಲ್ ರಾಮಚಂದ್ರಗೌಡರ ಪರ ಪತ್ನಿ ‘ರಾಣಿ ಮತ ಬೇಟೆ’

ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿ ಮನೆ ಮತ್ತು ವ್ಯಾಪಾರ ಮಳಿಗೆಗಳಿಗೆ ಭೇಟಿ ಕೊಟ್ಟು, ಪ್ರತಿಯೊಬ್ಬರನ್ನು ಮಾತನಾಡಿಸಿ ಬಿಜೆಪಿಗೆ ಮತ ನೀಡುವಂತೆ ವಿನಂತಿಸಿಕೊಂಡರು. ರಾಮಚಂದ್ರಗೌಡರನ್ನು ಪ್ರತಿ ಮನೆ ಮನೆಯಲ್ಲೂ ಆರತಿ ಬೆಳಗಿ, ಹೂವಿನ ಹಾರ ಹಾಕಿ, ಹೂ ಮಳೆ ಗರೆದು ಸ್ವಾಗತಿಸಿದರು.

ರಸ್ತೆಯ ಇಕ್ಕೆಲಗಳಲ್ಲೂ ಸಾವಿರಾರು ಕಾರ್ಯಕರ್ತರು ಬಿಜೆಪಿ ಪರವಾಗಿ ಮತ ಯಾಚನೆ ಮಾಡಿದರು. ಬಿಜೆಪಿ ಅಭಿವೃದ್ಧಿಯ ಕಾರ್ಯಗಳನ್ನು ತಿಳಿಸುವ ಟ್ಯಾಬ್ಲೋಗಳು ರಸ್ತೆಗಳಲ್ಲಿ ಸಂಚರಿಸುತ್ತಿದ್ದವು. ಈ ವೇಳ ಮಾತನಾಡಿದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರು, ಶಿಡ್ಲಘಟ್ಟ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಕೋರಿದರು.

RELATED ARTICLES

Related Articles

TRENDING ARTICLES