Saturday, January 11, 2025

ಇದು ರೋಡ್ ಶೋ ಅಲ್ಲ.. ಗೋಪಾಲಯ್ಯನವರ ವಿಜಯೋತ್ಸವ : ಅಣ್ಣಾಮಲೈ

ಬೆಂಗಳೂರು : ಈ ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ನೋಡಿದರೆ ಇದು ರೋಡ್ ಶೋ ಅಲ್ಲ. ಗೋಪಾಲಯ್ಯ ಅವರ ವಿಜಯೋತ್ಸವದಂತೆ ಕಾಣುತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಕೆ.ಅಣ್ಣಾಮಲೈ ಅವರು ತಿಳಿಸಿದರು.

ರೋಡ್ ಶೋನಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಕ್ಷೇತ್ರದ ಜನತೆ ಬಿಜೆಪಿಗೆ ಹಾಗೂ ಗೋಪಾಲಯ್ಯನವರಿಗೆ ಹೆಚ್ಚಿನ ಮತ ನೀಡಿ ಅವರನ್ನು ವಿಜಯಶಾಲಿಯನ್ನಾಗಿ ಮಾಡಬೇಕು ಎಂದರು.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಈ ರೋಡ್ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಆಗಮಿಸಿ ಎರಡು ಗಂಟೆಗಳ ಕಾಲ ನಮ್ಮ ಜೊತೆಗೆ ರೋಡ್ ಶೋನಲ್ಲಿ ಪಾಲ್ಗೊಂಡಿದ್ದಾರೆ. ನಿಮ್ಮ ಹೆಚ್ಚಿನ ಬೆಂಬಲವನ್ನು ನೀಡುತ್ತಿರುವುದು ಬಹಳ ಸಂತಸವಾಗಿದೆ ಎಂದು ಕೆ.ಅಣ್ಣಾಮಲೈ ಹೇಳಿದರು.

ಇದನ್ನೂ ಓದಿ : ಮಂಡ್ಯದಲ್ಲಿ ಈ ಬಾರಿ ‘ಕಮಲ ಅರಳಲಿದೆ’ : ಸಿಎಂ ಬೊಮ್ಮಾಯಿ

ರೋಡ್ ಶೋ ಕಾರ್ಯಕ್ರಮವು ಡಾ.ರಾಜಕುಮಾರ್ ಪ್ರತಿಮೆ ಬಳಿಯಿಂದ ಜೆಸಿ ನಗರ,  ಕುರುಬರಹಳ್ಳಿ ಸರ್ಕಲ್ ಮಾರ್ಗವಾಗಿ ಸತ್ಯನಾರಾಯಣ ಚೌಲ್ಟ್ರಿ ಸರ್ಕಲ್ ವರೆಗೆ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಉಪಮೇಯ ಎಸ್. ಹರೀಶ್, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಶಿವಾನಂದಮೂರ್ತಿ ನಾಗರಾಜ್, ಜಯರಾಮ್, ಶ್ರೀನಿವಾಸ್, ಮಹದೇವು, ಡಾ. ಗಿರೀಶ್ ನಾಶಿ ಸೇರಿದಂತೆ ಬಿಜೆಪಿಯ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES