Wednesday, January 22, 2025

‘ಕೈಯಲ್ಲಿ ಕೆಂಪು, ಹೆಗಲ ಮೇಲೆ ಕೇಸರಿ ಶಾಲು’ ಇದೆ.. : ‘ಬಜರಂಗದಳ ಬ್ಯಾನ್’ ಎಂದವರಿಗೆ ನಟಿ ಶೃತಿ ವಾರ್ನಿಂಗ್

ಬೆಂಗಳೂರು : ಕೈಯಲ್ಲಿ ಕೆಂಪು ಶಾಲು ಇದೆ, ಹೆಗಲ ಮೇಲೆ ಕೇಸರಿ ಶಾಲು ಇದೆ. ಯಾರನ್ನೂ ಸುಮ್ಮನೆ ಬಿಡೋ ಮಾತೇ ಇಲ್ಲ ಎಂದು ನಟಿ ಶೃತಿ ಬಜರಂಗದಳ ಬ್ಯಾನ್ ಎಂದವರಿಗೆ ಖಡಕ್ ವಾರ್ನಿಂಗ್ ಕೊಟ್ಟರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರವಾಗಿ ದೊಡ್ಡಬಳ್ಳಾಪುರದ ನಗರದಾದ್ಯಂತ ನಟಿ ಶೃತಿ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು.

ಪ್ರಚಾರದ ಸಂದರ್ಭದಲ್ಲಿ ಅಬ್ಬರದ ಭಾಷಣ ಮಾಡಿದ ನಟಿ ಶೃತಿ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಅಣ್ಣಾ.. ನಮಗೆ ಹೆಮ್ಮೆ ಇದೆ. ನಾವು ಕನ್ನಡಿಗರು ಅನ್ನೋದಕ್ಕೆ ಎಷ್ಟು ಹೆಮ್ಮೆ ಇದೆಯೋ ಅದರಷ್ಟೇ ಹೆಮ್ಮೆ ಈ ಭೂಮಿಯಲ್ಲಿ ಆಂಜನೇಯ ಹುಟ್ಟಿದ ಅಂತ ನಮಗೆ ಹೆಮ್ಮೆಯೂ ಇದೆ ಎಂದು ಹೇಳಿದರು.

ರಾಮ ಮಂದಿರ  ನಮ್ಮ ಕನಸು, ಗೌರವ

ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿ ಆದಮೇಲೆ ಭಾರತದಲ್ಲಿ ನಾವು ಯಾರು ಕಂಡಿರದಂತಹ, ಯಾರೂ ಕಲ್ಪನೆ ಮಾಡಿಕೊಳ್ಳಲು ಆಗದಂತಹ ಅಭಿವೃದ್ಧಿಯಾಗಿದೆ. ನಾವು ಕನಸಲ್ಲಿ ಮಾತ್ರ ಅಂದುಕೊಳ್ಳುತ್ತಿದ್ವಿ, ಇದು ನನಸಾಗಲಿ ಅಂತಾ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬ ಹಿಂದೂಗಳ ಆಸೆಯಾಗಿತ್ತು, ಕನಸಾಗಿತ್ತು, ಗೌರವವಾಗಿತ್ತು ಎಂದು ತಿಳಿಸಿದರು.

ಇದನ್ನೂ ಓದಿ : ‘ನನ್ನ ತಮ್ಮ ಧೀರಜ್’ ಶಾಸಕನಾಗುವುದು ನಿಶ್ಚಿತ : ಸಿ.ಟಿ ರವಿ ವಿಶ್ವಾಸ

ಧೀರಜ್ ಮುನಿರಾಜು ಗೆಲ್ಲಬೇಕು

ನಮ್ಮ ಈ ಕನಸನ್ನು ನನಸು ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುವುದಷ್ಟೇ ಅಲ್ಲ ನಮ್ಮ ಕರ್ತವ್ಯ. ನೀವೆಲ್ಲರೂ ನಿಮ್ಮ ಅಭ್ಯರ್ಥಿ ಧೀರಜ್ ಮುನಿರಾಜು ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು. ಆ ಮೂಲಕ ರಾಜ್ಯದಲ್ಲಿ ರಾಮರಾಜ್ಯ ನಿರ್ಮಿಸಬೇಕು ಅಂತಾ ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದರು.

ನಾವು ಬಜರಂಗದಳದವರು

ನಾವೆಲ್ಲಾ ಸ್ವಾಭಿಮಾನಿಗಳು. ನಾವು ಪೂಜಿಸುವ ದೇವರು, ನಾವು ಪಾಲಿಸುವ ವಿಚಾರಗಳನ್ನು ಯಾರಾದರೂ ಅಡ್ಡಿಪಡಿಸಲು ಬಂದರೆ ಸುಮ್ಮನೆ ಬಿಡಲ್ಲ. ನಿಮ್ಮೆಲ್ಲರ ಕೈಯಲ್ಲೂ ಕೆಂಪು ಶಾಲು ಇದೆ, ಹೆಗಲ ಮೇಲೆ ಕೇಸರಿ ಶಾಲು ಇದೆ. ನಾವು ಇವತ್ತು ಹನುಮಂತನ ಭಕ್ತರು, ಬಜರಂಗದಳದವರು ಎಂದು ಶೃತಿ ಆರ್ಭಟಿಸಿದರು.

ನಾವು ನಮ್ಮತನವನ್ನು ಗೌರವಿಸುವವರು, ರಾಮನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವವರು. ಹನುಮಂತ ಹುಟ್ಟಿದ ಭೂಮಿಯವರು. ನಾವು ಯಾರಿಗೂ ಎದರುವ ಪ್ರಶ್ನೆಯೇ ಇಲ್ಲ ಎಂದು ಜೈ ಶ್ರೀರಾಮ್ ಘೋಷಣೆ ಕೂಗಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

RELATED ARTICLES

Related Articles

TRENDING ARTICLES