Friday, November 22, 2024

ಕೋಟೆನಾಡು ‘ಚಿತ್ರದುರ್ಗ’ದಲ್ಲಿ ಪ್ರಧಾನಿ ಮೇನಿಯಾ : ಇಲ್ಲಿದೆ ‘ಮೋದಿ, ರಾಗಾ’ ಪ್ರಚಾರದ ವೇಳಾಪಟ್ಟಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಚುನಾವಣೆಗೆ ಕೌಂಟ್​ ಡೌನ್ ಶುರುವಾಗಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಿಡುವಿಲ್ಲದೆ ಪ್ರಚಾರ ಮಾಡುತ್ತಿದ್ದಾರೆ.

ಕಾಂಗ್ರೆಸ್, ಬಿಜೆಪಿ ರಾಷ್ಟ್ರ ನಾಯಕರು ರಾಜ್ಯದಲ್ಲೇ ವಾಸ್ತವ್ಯ ಹೂಡಿದ್ದಾರೆ. ರಾಜ್ಯದಲ್ಲಿ ಈ ಬಾರಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಹಠಕ್ಕೆ ಬಿದ್ದು ಅಬ್ಬರದ ಪ್ರಚಾರ, ರೋಡ್​ ಶೋಗಳನ್ನು ನಡೆಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೆ ರಾಜ್ಯಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಇಂದು, ನಾಳೆ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 10.25ಕ್ಕೆ ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಬೆಳಗ್ಗೆ 11 ಗಂಟೆಗೆ ಚಳ್ಳಕೆರೆಯಲ್ಲಿ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಧ್ಯಾಹ್ನ 1 ಗಂಟೆಗೆ ಹೊಸಪೇಟೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಧ್ಯಾಹ್ನ 2.45ಕ್ಕೆ ಸಿಂಧನೂರು ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಳಿಕ ಸಂಜೆ 5 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ಮ ಭೂಮಿ ಕಲಬುರಗಿಯಲ್ಲಿ ರೋಡ್​ಶೋ ನಡೆಸಲಿದ್ದಾರೆ. ಸುಮಾರು 45 ನಿಮಿಷ ರೋಡ್​ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಮತ ಬೇಟೆ ನಡೆಸಲಿದ್ದಾರೆ. ಇಂದು ರಾತ್ರಿ ಕಲಬುರಗಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಹೀಗಿರಲಿದೆ ಮೋದಿ ಮಿಂಚಿನ ಸಂಚಾರ

ಬೆಳಗ್ಗೆ 10.30ಕ್ಕೆ ಚಳ್ಳಕೆರೆ ಹೆಲಿಪ್ಯಾಡ್‌ಗೆ ಮೋದಿ ಆಗಮನ

ಹೆಲಿಕಾಪ್ಟರ್​​ ಮೂಲಕ ಚಿತ್ರದುರ್ಗಕ್ಕೆ ಪ್ರಧಾನಿ ಆಗಮನ

ಬೆಳಗ್ಗೆ 10.50ಕ್ಕೆ ಸಮಾವೇಶದಲ್ಲಿ ಭಾಗಿಯಾಗಲಿರುವ ಮೋದಿ

ಸಮಾವೇಶ ಮುಗಿಸಿ ವಿಜಯನಗರಕ್ಕೆ ‘ನಮೋ’ ಪ್ರಯಾಣ

ಮಧ್ಯಾಹ್ನ 1 ಗಂಟೆಗೆ ವಿಜಯನಗರದ ಸಮಾವೇಶದಲ್ಲಿ ಭಾಗಿ

ಮಧ್ಯಾಹ್ನ 2.15ಕ್ಕೆ ರಾಯಚೂರಿನ ಸಿಂಧನೂರಿಗೆ ಪ್ರಯಾಣ

3.30ಕ್ಕೆ ಸಿಂಧನೂರಿನ ಸಮಾವೇಶದಲ್ಲಿ ಮೋದಿ ಭಾಗಿ

ಬಳಿಕ ಸಂಜೆ 4.30ಕ್ಕೆ ಕಲಬುರಗಿಗೆ ಪ್ರಧಾನಿ ಪ್ರಯಾಣ

ಸಂಜೆ 5ಕ್ಕೆ ಕಲಬುರಗಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ

5 ಕಿ.ಮೀಟರ್​​​ವರೆಗೆ ರೋಡ್​ ಶೋ ನಡೆಸಲಿರುವ ಮೋದಿ

ಕಲಬುರಗಿಯಲ್ಲೇ ಪ್ರಧಾನಿ ಮೋದಿ ವಾಸ್ತವ್ಯ

ಇದನ್ನೂ ಓದಿ : ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ‘ಭರಪೂರ ಭರವಸೆ’ : ಹೀಗಿವೆ ಪ್ರಣಾಳಿಕೆ ಮುಖ್ಯಾಂಶಗಳು

ದಾವಣಗೆಯಲ್ಲಿ ರಾಗಾ ಪ್ರಚಾರ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಇಂದು ಪ್ರಚಾರ ನಡೆಸಲಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಬೆಳಗ್ಗೆ 11.30ಕ್ಕೆ  ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹರಿಹರದ ಗಾಂಧಿ ಮೈದಾನದಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಬಳಿಕ ಚಿಕ್ಕಮಗಳೂರು ನಗರದಲ್ಲಿ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ. ಎಚ್.ಡಿ.ತಮ್ಮಯ್ಯ ಪರ ಮತಯಾಚನೆ ಮಾಡಲಿದ್ದಾರೆ. ಕೆಇಬಿ ಸರ್ಕಲ್ ನಿಂದ ಅಜಾದ್ ಪಾರ್ಕ್ ಸರ್ಕಲ್ ವೆರೆಗೂ ರೋಡ್ ಶೋ ನಡೆಸಿ ಆಜಾದ್ ಪಾರ್ಕ್ ನಲ್ಲಿ ಬಹಿರಂಗ ಭಾಷಣ ಮಾಡಲಿದ್ದಾರೆ.

RELATED ARTICLES

Related Articles

TRENDING ARTICLES