ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗಾಗಿ ಮತ್ತೊಮ್ಮೆ ನನಗೆ ಆಶೀರ್ವದಿಸಿ ಎಂದು ಅಬಕಾರಿ ಸಚಿವ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಮನವಿ ಮಾಡಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಮಾಕ್ಷಿಪಾಳ್ಯದ ಎನ್.ವಿ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ನೇಕಾರ ಸಮುದಾಯದರವ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ಸಮುದಾಯದೊಂದಿಗೆ ಸದಾ ಇರುತ್ತೇನೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಯಾವಾಗಲೂ ನಾನು ಸ್ಪಂದಿಸುತ್ತೇನೆ. ಅತ್ಯುತ್ತಮ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಅವರಿಗೆ ಉಚಿತವಾದ ಶಿಕ್ಷಣವನ್ನು ಕೊಡುವಂತಹ ಕೆಲಸವನ್ನು ಮಾಡುತ್ತೇವೆ ಕಳೆದ ಚುನಾವಣೆಯಲ್ಲಿ ಬೆಂಬಲಿಸಿ ಹೆಚ್ಚಿನ ಮತದೊಂದಿಗೆ ಗೆಲ್ಲಿಸಿದ್ದೀರಿ. ಅದೇ ರೀತಿ ಈ ಬಾರಿಯೂ ಹೆಚ್ಚಿನ ಮತದೊಂದಿಗೆ ಬೆಂಬಲ ನೀಡಿ ಎಂದು ಹೇಳಿದರು.
ಆರೋಗ್ಯವಂತ ಜೀವನಕ್ಕೆ ‘ನಮ್ಮ ಕ್ಲಿನಿಕ್‘
ಜನರಿಗೆ ಅನುಕೂಲವಾಗಬೇಕು. ಅವರ ಆರೋಗ್ಯ ಉತ್ತಮ ರೀತಿಯಲ್ಲಿ ಇರಬೇಕು ಎಂಬ ಮೂಲ ಉದ್ದೇಶದಿಂದ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಮ್ಮ ಕ್ಲಿನಿಕ್ ಅನ್ನು ಪ್ರಾರಂಭಿಸಿ ಕಾರ್ಯರೂಪಕ್ಕೆ ತರಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಆರೋಗ್ಯವಂತ ಜೀವನ ನಡೆಸಲು ಮುಂದಾಗಿ ಎಂದು ಕೆ.ಗೋಪಾಲಯ್ಯ ಸಲಹೆ ನೀಡಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕುರುಬರಹಳ್ಳಿಯ ವಿಜಯ ಕಲ್ಯಾಣ ಮಂಟಪದಲ್ಲಿಂದು, ಕೊಡವ ಸಮಾಜದವರೊಡನೆ
ಸಮಾಲೋಚನೆ ನಡೆಸಿ ಮತ ಯಾಚನೆ ಮಾಡಲಾಯಿತು.ಭುವಯ್ಯ, ಅರ್ಜುನ್, ನರಸಿಂಹ, ಜೋಗಪ್ಪ, ಅಜಿಂದ್, ರಾಘವೇಂದ್ರ ಶೆಟ್ಟಿ, ಕೊಡವ ಸಮಾಜದ ಮುಖಂಡರು ಉಪಸ್ಥಿತರಿದ್ದರು.@BJP4Karnataka pic.twitter.com/VAJDexp9K7
— K Gopalaiah (@GopalaiahK) May 1, 2023
ಇದನ್ನೂ ಓದಿ : ಕರ್ನಾಟಕವನ್ನು ನಂ.1 ಮಾಡುವ ಬ್ಲೂ ಪ್ರಿಂಟ್ ರೆಡಿ : ಪ್ರಧಾನಿ ಮೋದಿ
‘ನವ ನಂದಿನಿ‘ ಉದ್ಯಾನವನ ನಿರ್ಮಾಣ
ಕ್ಷೇತ್ರದ ಜನತೆಯ ಕುಂದು ಕೊರತೆಗಳನ್ನು ಬಗೆಹರಿಸುತ್ತೇನೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡುತ್ತಾ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ. ಕುಡಿಯುವ ನೀರಿನ ಘಟಕ, ನವ ನಂದಿನಿ ಪಾರ್ಕ್, ಆರೋಗ್ಯದ ಕಾಳಜಿಯಿಂದ ಉತ್ತಮ ಆಸ್ಪತ್ರೆಗಳು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆ, ಮಹಾನಗರ ಪಾಲಿಕೆ ಶಾಲೆಗಳು, ನವ ನಂದಿನಿ ಉದ್ಯಾನವನ ನಿರ್ಮಾಣ ಹಾಗೂ ಕೋವಿಡ್ ಅವಧಿಯಲ್ಲಿ 350ಕ್ಕೂ ಹೆಚ್ಚಿನ ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಿ ಕ್ಷೇತ್ರದ ಜನತೆಯ ಉಳಿವಿಗಾಗಿ ಶ್ರಮವಹಿಸಿ ಕಾರ್ಯನಿರ್ವಹಣೆ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ನಾಗರತ್ನಮ್ಮ ಲೋಕೇಶ್, ನಾಗರಾಜ್ , ನಾಗಜ್ಯೋತಿ, ಅಶೋಕ್, ಪ್ರತಾಪ್, ಮಾಜಿ ನಗರ ಪಾಲಿಕೆ ಸದಸ್ಯರಾದ ನಾಗಣ್ಣ, ರುದ್ರೇಶ್, ನಾಗರಾಜು, ರಾಜಣ್ಣ, ರಾಘವೇಂದ್ರ, ಲೋಕೇಶ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.