Monday, December 23, 2024

ಬಾಗೇಪಲ್ಲಿ ‘ಮಾದರಿ ಕ್ಷೇತ್ರಕ್ಕಾಗಿ ಸಮಗ್ರ ರೂಪುರೇಷೆ ಸಿದ್ದ : ಸಿ.ಮುನಿರಾಜು

ಬೆಂಗಳೂರು : ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಆರ್ಭಟ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಕಾಂಗ್ರೆಸ್, ಸಿಪಿಐಎಂ ಪಕ್ಷಗಳಿಗೆ ಸೆಡ್ಡು ಹೊಡೆದು ಭರದಿಂದ ಮುನ್ನುಗ್ಗುತ್ತಿರುವ ಬಿಜೆಪಿ‌ ಅಭ್ಯರ್ಥಿ ಸಿ.ಮುನಿರಾಜು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ‌.

ಬಾಗೇಪಲ್ಲಿ ತಾಲ್ಲೂಕು ತೋಳ್ಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿರುವ ಮುನಿರಾಜು, ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚಿಸಿದರು.

ಇನ್ನೂ ಬಾಗೇಪಲ್ಲಿ ವಿಧಾನಸಭಾವನ್ನ ಮಾದರಿ ಕ್ಷೇತ್ರವನ್ನಾಗಿ ಮಾಡಲು ಸಮಗ್ರವಾಗಿ ರೂಪುರೇಷೆ ಸಿದ್ದಪಡಿಸಿಕೊಂಡಿದ್ದು, ಜನ ಒಂದು  ಅವಕಾಶ ನೀಡುವಂತೆ ಮನವಿ ಮಾಡಿದರು. ಮುನಿರಾಜು ಅವರ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ನೂರಾರು ಸಂಖ್ಯೆಯಲ್ಲಿ ಜನ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಇದನ್ನೂ ಓದಿ : ಮೋದಿ ಆಡಳಿತದಿಂದ ‘ದೇಶ ಸುಭದ್ರ’ವಾಗಿದೆ : ಸೀಕಲ್ ರಾಮಚಂದ್ರಗೌಡ

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಇಂದು ಸಿ.ಮುನಿರಾಜು ಪ್ರಚಾರ ನಡೆಸಿದರು. ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತದೊಂದಿಗೆ ಬರ ಮಾಡಿಕೊಂಡರು.

ತೋಳಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಗಯಾಟದಿನ್ನೆ ಗ್ರಾಮ, ಗುಮ್ಮನಾಯಕನಪಾಳ್ಯ ಗ್ರಾಮ, ತೋಳಪಲ್ಲಿ ಏಕೆ ಕಾಲೋನಿ, ಅಗಟಮಡಕ ಗ್ರಾಮ, ಚೇಳೂರು ಗ್ರಾಮ, ಕಲ್ಲಿಪಲ್ಲಿ ಗ್ರಾಮದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತಯಾಚಿಸಿದರು.

RELATED ARTICLES

Related Articles

TRENDING ARTICLES