Sunday, January 19, 2025

ಅಂಬರೀಶ್ ಸತ್ತಾಗ ನಾನು ಯಾಕೆ ಬರಲಿಲ್ಲ ಅಂದ್ರೆ..! : ರಮ್ಯಾ ಕೊಟ್ಟ ಉತ್ತರ ಇದು

ಬೆಂಗಳೂರು : ನಟ ಅಂಬರೀಶ್ ನಿಧನರಾದಾಗ ಬಾರದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಅಂಬರೀಶ್ ಅವರು ತೀರಿಕೊಂಡಾಗ ನನಗೆ ಟ್ಯೂಮರ್ ಬಂದಿತ್ತು ಸರ್ಜರಿ ಮಾಡಿಸಿಕೊಂಡಿದ್ದೆ. ಸೋ ಅದರಿಂದ ನಾನು ಅವರ ನಿಧನಕ್ಕೆ ಬರಲಾಗಲಿಲ್ಲ ಎಂದು ಹೇಳಿದ್ದಾರೆ.

ನನ್ನ ಸ್ವಭಾವ ಎಲ್ಲವನ್ನು ಹಂಚುಕೊಳ್ಳುವುದಲ್ಲ. ಬೇರೆಯವರು ಕ್ಯಾಮರಾ ಮುಂದೆ ಬಂದು ಎಲ್ಲಾ ಹೇಳ್ತಾರೆ. ನಾನು ಚಿಕ್ಕವಳಿದ್ದಾಗಿನಿಂದ ನನ್ನ ಕೆಲಸವನ್ನಷ್ಟೇ ಮಾತನಾಡ್ತಿನಿ. ಯಾವುದೇ ವೈಯಕ್ತಿಕ ವಿಚಾರ ಮಾತನಾಡಲ್ಲ. ಆದ್ರೆ, ಇದರ ಬಗ್ಗೆ ಕೆಲವರು ಅಪಪ್ರಚಾರ ಮಾಡ್ತಾರೆ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ  ಓದಿ : ರಮ್ಯಾರನ್ನು ಆಹ್ವಾನಿಸುವಷ್ಟು ‘ಬಿಜೆಪಿ ಬರಗೆಟ್ಟಿಲ್ಲ’ : ಆರ್ ಅಶೋಕ್

ಸರ್ಜರಿ ಆದ ಬಳಿಕ ನನಗೆ ಆಟೋ ಇಮ್ಯೂನ್ ಕಂಡಿಷನ್ ಕೂಡ ಆಯ್ತು. ಇದನ್ನೆಲ್ಲ ಹೇಳಿ ಸಿಂಪತಿ ಪಡೆಯಲು ನಂಗಿಷ್ಟ ಇಲ್ಲಾ. ಸದ್ಯಕ್ಕೆ ನಾನು ಸಕ್ರಿಯ ರಾಜಕಾರಣಕ್ಕೆ ಬರುವ ಚಿಂತನೆ ಮಾಡಿಲ್ಲ ಎಂದು ಇದೇ ವೇಳೆ ನಟಿ ರಮ್ಯಾ ಹೇಳಿದ್ದಾರೆ.

ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿಲ್ಲ

ನಾನು ಮಂಡ್ಯಕ್ಕೆ ಹಾಗಾಗ್ಗೆ ಬಂದು ಹೋಗ್ತಿದ್ದೆ. ಮೊನ್ನೆ ನಿಮಿಷಾಂಭ ದೇವಸ್ಥಾನಕ್ಕೂ ಸಹ ಬಂದಿದ್ದೆ. ಕ್ಯಾಮರಾ ಮುಂದೆ ಕಾಣಿಸಿಕೊಂಡಿಲ್ಲ. ಅದಕ್ಕೆ ನೀವು ಪ್ರಶ್ನೆ ಮಾಡ್ತಿದ್ದೀರಾ. ಇವತ್ತು ನಾನು ಸ್ಟಾರ್ ಪ್ರಚಾರಕಿ ಆಗಿ ನಮ್ಮ ಅಭ್ಯರ್ಥಿಗಳಿಗೆ ಸಪೋರ್ಟ್ ಮಾಡಲು ಇಲ್ಲಿಗೆ ಬಂದಿದ್ದೇನೆ. ಚುನಾವಣೆಗೆ ನಿಲ್ಲುವ ಯಾವುದೇ ನಿರ್ಧಾರ ನಾನು ಮಾಡಿಲ್ಲ ಎಂದು ನಟಿ ರಮ್ಯಾ ತಿಳಿಸಿದ್ದಾರೆ.

ನಟಿ ರಮ್ಯಾ ಅವರು 2014ರ ಲೋಕಸಭಾ‌ ಚುನಾವಣೆಯಲ್ಲಿ ಸೋತ ನಂತರ ಮಂಡ್ಯ ಜಿಲ್ಲೆಯಿಂದ ದೂರ ಉಳಿದಿದ್ದರು. ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಹಿನ್ನೆಲೆ ಇಂದು ಮಂಡ್ಯಗೆ ಆಗಮಿಸಿದ್ದಾರೆ. ಎಐಸಿಸಿ‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ‌ಅಭ್ಯರ್ಥಿ ರವಿಕುಮಾರ್ ಗೌಡ ಪರ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ, ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿರುವ ರಮ್ಯಾ ಸಹ ಮಂಡ್ಯಗೆ ಬಂದಿದ್ದಾರೆ.

RELATED ARTICLES

Related Articles

TRENDING ARTICLES