Wednesday, January 22, 2025

ರಾಮಚಂದ್ರ ಗೌಡರನ್ನು ‘ಶಾಸಕರಾಗಿ ಮಾಡುವುದೇ ನಮ್ಮ ಗುರಿ’ : ಕೆ.ಎಸ್ ಅರುಣ್ ಕುಮಾರ್

ಬೆಂಗಳೂರು : ಸೀಕಲ್ ರಾಮಚಂದ್ರ ಗೌಡರನ್ನು ಶಾಸಕರಾಗಿ ಮಾಡುವುದೇ ನಮ್ಮ ಗುರಿ ಎಂದು ನೂತನವಾಗಿ ಬಿಜೆಪಿ ಪಕ್ಷ ಸೇರ್ಪಡೆಯಾದ ಕೆ.ಎಸ್ ಅರುಣ್ ಕುಮಾರ್ ಅವರು ಹೇಳಿದರು.

ಮಾನವ ಹಕ್ಕುಗಳು ಮತ್ತು ಮಾಧ್ಯಮ ಸಂಸ್ಥಾಪಕ ಸಂಘಟನೆಯ ರಾಜ್ಯಾಧ್ಯಕ್ಷರಾಗಿರುವ ಕೆ.ಎಸ್ ಅರುಣ್ ಕುಮಾರ್ ಅವರು ಸೀಕಲ್ ರಾಮಚಂದ್ರ ಗೌಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಬಳಿಕ ಮಾತನಾಡಿರುವ ಅವರು, ಸೀಕಲ್ ರಾಮಚಂದ್ರ ಗೌಡ ಅವರುಶಿಡ್ಲಘಟ್ಟವನ್ನು ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಾರೆ. ನಿರುದ್ಯೋಗ ಸಮಸ್ಯೆ ನೀಗಿಸುತ್ತಾರೆ ಎಂಬ ಭರವಸೆ ನಮಗಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಇಂದಿನಿಂದಲೇ ಪಕ್ಷ ಸಂಘಟನೆ

ಸೀಕಲ್ ರಾಮಚಂದ್ರಗೌಡರಂತಹ ವ್ಯಕ್ತಿಗಳು ಇನ್ನು ಹೆಚ್ಚು ಹೆಚ್ಚು ಬರಬೇಕು. ನಾನು, ನನ್ನ ಬೆಂಬಲಿಗರು ಇಂದಿನಿಂದಲೇ ಪಕ್ಷ ಸಂಘಟನೆ ಮತ್ತು ಬಿಜೆಪಿ ಪರವಾಗಿ ಮತಯಾಚನೆಗೆ ತೆರಳುತ್ತೇವೆ. ರಾಮಚಂದ್ರ ಗೌಡರನ್ನು ಶಾಸಕರಾಗಿ ಮಾಡುವುದೇ ನಮ್ಮ ಗುರಿ ಎಂದು ತಿಳಿಸಿದರು.

ಇದನ್ನೂ ಓದಿ : ಶಿಡ್ಲಘಟ್ಟದಲ್ಲಿ ಮುಂದುವರಿದ ಸೀಕಲ್ ರಾಮಚಂದ್ರಗೌಡರ ಮತ ಬೇಟೆ

ವೈಯಕ್ತಿಕ ಫಲಾಪೇಕ್ಷೆ ಇಲ್ಲ

ಮಾಜಿ ಶಾಸಕರಾದ ರಾಜಣ್ಣನವರ ಜೊತೆ ಕಳೆದ 5 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೆ ಕೇವಲ ಅವರಿಗಾಗೇ ದುಡಿದಿದ್ದೇನೆ. ನಮ್ಮ ಕ್ಷೇತ್ರದ ಹಲವಾರು ಕಡುಬಡವರಿಗೆ ಸಹಾಯ ಮಾಡಿದ ನಿದರ್ಶನಗಳಿವೆ ಎಂದರು.

ನಮ್ಮೊಂದಿಗೆ ನಮ್ಮ ಎಲ್ಲ ಕೆಲಸಗಳಿಗೂ ಬೆಂಬಲವಾಗಿ ನಿಲ್ಲುವ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ, ಕಾರ್ಮಿಕ ಘಟಕ ಮುಖಂಡರಾದ ಬಿ.ಕೆ ವೆಂಕಟೇಶ್ ಕೂಡ ಅವರ ಅಭಿಮಾನಿಗಳು ಮತ್ತು ಬೆಂಬಲಿಗರೊಂದಿಗೆ ಈ ಚುನಾವಣೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕುಂದಲಗುರ್ಕಿ ಗ್ರಾಮದಲ್ಲಿ ಕೆ.ಎಸ್ ಅರುಣ್ ಕುಮಾರ್ ಅವರು ಕಳೆದ 15 ವರ್ಷಗಳಿಂದ ವಾಸವಿದ್ದಾರೆ. ಸಂಘಟನೆಯಲ್ಲಿ ತೊಡಗಿ ಹಲವಾರು ಸಮುದಾಯಗಳಿಗೆ ಸೇವೆ ಸಲ್ಲಿಸಿದ್ದಾರೆ. ಕಳೆದ 15 ವರ್ಷದ 3 ಚುನಾವಣೆಯಲ್ಲಿ ತಮ್ಮ ಹಿತೈಷಿಗಳು ಮತ್ತು ಅಭಿಮಾನಿಗಳಿಂದ ಜೆಡಿಎಸ್ ಪಕ್ಷಕ್ಕೆ ಬೆಂಬಲವನ್ನು ನೀಡುತ್ತಾ ಬಂದಿದ್ದರು. ಈ ಬಾರಿ ಬಿಜೆಪಿ ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡುತ್ತಿದ್ದಾರೆ. ಶಿಡ್ಲಘಟ್ಟದಲ್ಲಿ ಆಗುತ್ತಿರುವ ಅಭಿವೃದ್ಧಿ ಕುಂಠಿತದಿಂದ ಇದೀಗ ಬಿಜೆಪಿಗೆ ಸೇರಿದ್ದಾರೆ.

RELATED ARTICLES

Related Articles

TRENDING ARTICLES