ಬೆಂಗಳೂರು : ತಂದೆ ಮಲ್ಲಿಕಾರ್ಜುನ ಖರ್ಗೆ ಬಳಿಕ ಇದೀಗ ಪುತ್ರ ಪ್ರಿಯಾಂಕ್ ಖರ್ಗೆ ಸಹ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರು, ಪ್ರಧಾನಿ ಮೋದಿಯನ್ನು ನಾಲಾಯಕ್ ಎಂದು ಹೇಳಿದ್ದಾರೆ. ಅಪ್ಪ ಮಲ್ಲಿಕಾರ್ಜುನ ಖರ್ಗೆ ಇತ್ತೀಚೇಗಷ್ಟೇ ಮೋದಿ ಅವರನ್ನು ‘ವಿಷ ಸರ್ಪ’ ಅಂದ್ರೆ ಇದೀಗ ಮಗ ‘ಮೋದಿ ನಾಲಾಯಕ್’ ಎಂದು ಮೂದಲಿಸಿದ್ದಾರೆ.
ಮೋದಿ ಮಳಖೇಡಕ್ಕೆ ಬಂದಾಗ ಬಂಜಾರಾ ಸಮಾಜದವರಿಗೆ ಏನು ಹೇಳಿದ್ರು? ಬಂಜಾರಾ ಸಮಾಜದ ಜನರ ಮಗ ದೆಹಲಿಯಲ್ಲಿದ್ದಾನೆ ಅಂತ ಮೋದಿ ಹೇಳಿದ್ದರು. ಆದ್ರೆ ಇಂತಹ ನಾಲಾಯಕ್ ಮಗನಿದ್ರೆ ಹೇಗೆ ನಡೆಯುತ್ತೆ? ದೇಶ ನಡೆಸೋನು ಮಾತ್ರವಲ್ಲ, ಮನೆಲಿ ಒಬ್ಬ ನಾಲಾಯಕ್ ಮಗನಿದ್ರೂ ಮನೆ ಸುಸೂತ್ರವಾಗಿ ನಡೆಯೋದಿಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸಮಜಾಯಿಸಿ ನೀಡಲು ಯತ್ನ
ನಲಾಯಕ್ ಬದ ಬಳಿಕೆ ಬಳಿಕ ಸುದ್ದಿಗೋಷ್ಠಿಯ ಕೊನೆಗೆ ನಾನು ಮೋದಿಗೆ ಹಾಗೆ ಅಂದಿಲ್ಲ. ನನಗೆ ವೈಯಕ್ತಿಕ ನಿಂದನೆಗಿಂತ ಅವರಿಂದ ಕೆಲವು ಪ್ರಶ್ನೆಗೆ ಉತ್ತರ ಮುಖ್ಯ ಎಂದು ಪ್ರಿಯಾಂಕ್ ಖರ್ಗೆ ಸಮಜಾಯಿಸಿ ನೀಡಲು ಯತ್ನಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ನ ‘ಗುಜರಿ ಇಂಜಿನ್’ನಿಂದ ಅಭಿವೃದ್ಧಿ ಅಸಾಧ್ಯ : ಪ್ರಧಾನಿ ಮೋದಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ್ ಪರ ಮತಯಾಚನೆ ವೇಳೆ, ಪ್ರಧಾನಿ ಮೋದಿಯನ್ನು ವಿಷದ ಸರ್ಪಕ್ಕೆ ಹೋಲಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ. ವಿಷ ಸರ್ಪ ನೆಕ್ಕಿದ್ರೆ ಸತ್ತು ಹೋಗ್ತಾರೆ. ನಿಮ್ಮ ಮನೆಯಲ್ಲಿ ದೇಶಕ್ಕಾಗಿ ಒಂದೂ ನಾಯಿ ಕೂಡ ಸತ್ತಿಲ್ಲ. ದೇಶಕ್ಕೆ ಬಿಜೆಪಿಯವರ ಕೊಡಿಗೆ ಏನು ಅಂತಾ ಹೇಳಲಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.