Wednesday, January 22, 2025

ಯುವ ನಾಯಕ ‘ಧೀರ’ಜ್ ಪ್ರಚಾರಕ್ಕೆ ಎದುರಾಳಿಗಳು ಧೂಳಿಪಟ

ಬೆಂಗಳೂರು ಗ್ರಾಮಾಂತರ : ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಇಷ್ಟೂ ದಿನ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಮುಗಿಸಿ ಇದೀಗ ದೊಡ್ಡಬಳ್ಳಾಪುರ ನಗರದಲ್ಲಿ ಪ್ರಚಾರ ಪ್ರಾರಂಭ ಮಾಡಿದ್ದಾರೆ.

ಗ್ರಾಮಾಂತರ ಪ್ರದೇಶಲ್ಲಿ ಬಿಜೆಪಿ ಅಭ್ಯರ್ಥಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಪ್ರತಿ ಹಳ್ಳಿಯಲ್ಲಿ ಧೀರಜ್ ಮುನಿರಾಜ್ ಗೆ ಬಹುಪಾರಕ್ ಹೇಳಿ ಚುನಾವಣೆಯಲ್ಲಿ ಗೆಲ್ಲಲ್ಲು ಹರಸಿ ಆರೈಸಿದ್ದರು. ಅದರಂತೆಯೇ ದೊಡ್ಡಬಳ್ಳಾಪುರ ನಗರದಲ್ಲಿಯೂ ಅಭೂರಪೂರ್ವ ಬೆಂಬಲ ವ್ಯಕ್ತವಾಗಿದೆ.

ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ದೊಡ್ಡಬಳ್ಳಾಪುರ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಲ್ಲಿ ಕಳೆದ ಐದಿನೈದು ದಿನಗಳಿಂದ ಪ್ರಚಾರ ಕಾರ್ಯ ಪೂರ್ಣಗೊಳಿಸಿದ್ದಾರೆ. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಧೀಜರ್ ಮುನಿರಾಜ್ ಗೆ ಪ್ರೀತಿ ವಿಶ್ವಾಸದಿಂದ ಸ್ವಾಗತ ಕೋರಿ ಗುರು ಹಿರಿಯರು ಆಶೀರ್ವಾದ ನೀಡಿ ಚುನಾವಣೆಯಲ್ಲಿ ಗೆಲ್ಲುವಂತೆ ಬಲ ನೀಡಿದ್ದರು.

ಇದನ್ನೂ ಓದಿ : ಧೀರಜ್ ಗೆ ವೋಟು ನೀಡಿದ್ರೆ ‘ಪ್ರಧಾನಿ ಮೋದಿಗೇ ಮತ’ ನೀಡಿದಂತೆ : ಆರ್. ಅಶೋಕ್

ಅಭಿವೃದ್ಧಿಗೆ ಒಂದು ಅವಕಾಶ ಕೊಡಿ

ಇದೀಗ ಧೀರಜ್ ಮುನಿರಾಜು ದೊಡ್ಡಬಳ್ಳಾಪುರ ನಗರದಲ್ಲಿ ಚುನಾವಣೆ ಪ್ರಚಾರ ಪ್ರಾರಂಭ ಮಾಡಿದ್ದಾರೆ. ಇಂದು ನಗರದ ಕರೇನಹಳ್ಳಿ ವಾರ್ಡ್ ನಿಂದ ಪ್ರಚಾರ ಪ್ರಾರಂಭಿಸಿ ವಾರ್ಡ್ ನಂಬರ್ 19,18,20,12 ನೇ ವಾರ್ಡ್ ಗಳಲ್ಲಿ ಮಿಂಚಿನ ಪ್ರಚಾರ ಮಾಡಿದರು. ಮುಖ್ಯವಾಗಿ ದೊಡ್ಡಬಳ್ಳಾಪುರ ನಗರದಲ್ಲಿ ನೇಕಾರ ಸಮುದಾಯದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಅವರ ಸರ್ವಾಂಗೀಣ ಅಭಿವೃದ್ದಿಗೆ ಮುಂದಿನ ಚುನಾವಣೆಯಲ್ಲಿ ಒಂದು ಅವಕಾಶ ಮಾಡಿಕೊಡಲು ಇಂದು ಧೀರಜ್ ಮುನಿರಾಜು ಚುನಾವಣಾ ಪ್ರಚಾರದ ಮೂಲಕ ಮತಯಾಚನೆ ಮಾಡಿದರು.

ಧೀರಜ್ ಗೆ ಮತದಾರರಿಂದ ಜೈಹೋ

ಇನ್ನೂ ಧೀರಜ್ ಮುನಿರಾಜು ಅವರ ಮಿಂಚಿನ ಓಟಕ್ಕೆ ಎದುರಾಳಿ ಪಕ್ಷದ ಅಭ್ಯರ್ಥಿಗಳು ಕಕ್ಕಬಿಕ್ಕಿಯಾಗಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರೀಯ ಪಕ್ಷದಲ್ಲಿ ಟಿಕೇಟ್ ಗಿಟ್ಟಿಸಿಕೊಂಡು ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿ ಮಾಡುತ್ತಿರುವ ಧೀರಜ್ ಮುನಿರಾಜ್ ಗೆ ಮತದಾರರು ಜೈಹೋ ಎನ್ನುತ್ತಿದ್ದಾರೆ.

ಒಟ್ಟಾರೆ, ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಾರಿ ಗೆದ್ದಿರುವ ಹಾಲಿ ಶಾಸಕರು ಮತ್ತು ಜೆಡಿಎಸ್ ನಿಂದ ಎರಡು ಬಾರಿ ಸ್ಪರ್ಧೆ ನಡೆಸಿರುವ ಅಭ್ಯರ್ಥಿಯ ರಾಜಕೀಯ ಅನುಭವದ ನಡುವೆ ಅತಿ ಚಿಕ್ಕ ವಯಸ್ಸಿಗೆ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡು ಕ್ಷೇತ್ರದ ಮತದಾರರ ಕೈಯಲ್ಲಿ ಸೈ ಎನ್ನಿಸಿಕೊಳ್ಳುತ್ತಿರುವ ಧೀರಜ್ ಮುನಿರಾಜು ಕಾರ್ಯ ಶ್ಲಾಘನೀಯ.

RELATED ARTICLES

Related Articles

TRENDING ARTICLES