Wednesday, January 22, 2025

ರಾಜಕಾರಣಿ ಆಗಬೇಕಾದ್ರೆ, ‘ರಾಜಕೀಯದವ್ರ ಮಕ್ಕಳೇ ಆಗಬೇಕಿಲ್ಲ’ : ಉಮಾಪತಿ ಶ್ರೀನಿವಾಸ್ ಗೌಡ

ಬೆಂಗಳೂರು : ರಾಜಕಾರಣಿ ಆಗಬೇಕಾದರೆ, ರಾಜಕೀಯದವರ ಮಕ್ಕಳೇ ಆಗಬೇಕಾಗಿಲ್ಲ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಹೇಳಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಅವರು ಇಂದು ಪ್ರಚಾರ ನಡೆಸಿದರು. ಈ ವೇಳೆ ಪವರ್ ವಿತ್ ಲೀಡರ್ ತಂಡದ ಜೊತೆ ಅವರು ಮಾತನಾಡಿದ್ದಾರೆ.

ನಮ್ಮ ಉದ್ದೇಶ ಸರಿಯಾಗಿ ಇದ್ದರೆ ಯಾರು ತಡೆಯೋಕೆ ಆಗಲ್ಲ. ರಾಜಕೀಯ ಯಾರ ಸ್ವತ್ತು ಅಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುವ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಹದಿನೈದು ವರ್ಷ ಕಾಲಾವಕಾಶ ನೀಡದ್ದೆವು. ಆದರೆ, ಸುಧಾರಿಸಲಿಲ್ಲ. ಹಾಗಾಗಿ ಅಭಿವೃದ್ಧಿಗಾಗಿ ಈ ಸಲ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬದಲಾವಣೆ ಫಿಕ್ಸ್ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನನ್ನ ಶ್ರಮ ಕೂಡ ಫಲಿಸುತ್ತದೆ

ಕ್ಷೇತ್ರದ ಬದಲಾವಣೆಗಾಗಿ ಈ ನಡಿಗೆ ಹಮ್ಮಿಕೊಂಡಿದ್ದೇವೆ. ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಜನರ ಬೆಂಬಲ ಸಿಗುತ್ತೆ ಅಂತಾ ಭಾವಿಸಿರಲಿಲ್ಲ. ಭಾರತ್ ಜೋಡೋ ಯಾತ್ರೆ, ಮೇಕೆ ದಾಟುವಿನ ಸ್ಫೂರ್ತಿಯಿಂದ  ಸ್ವಾಭಿಮಾನದ ನಡಿಗೆ ಹುಟ್ಟು ಕೊಂಡಿದೆ. ಪಾದಯಾತ್ರೆ ನಡೆಸಿದ ಯಾರನ್ನು ಕೂಡ ಜನ ಕೈ ಬಿಟ್ಟಿಲ್ಲ. ನನ್ನ ಶ್ರಮ ಕೂಡ ಫಲಿಸುತ್ತದೆ ಎಂದು ಉಮಾಪತಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.

ಇದನ್ನೂ ಓದಿ : ನಾವು ಶಾಲೆ-ಕಾಲೇಜ್ ಮಾಡದಿದ್ರೆ ‘ಮೋದಿ, ಶಾ ಓದೋಕೆ’ ಆಗುತ್ತಿರಲಿಲ್ಲ : ಮಲ್ಲಿಕಾರ್ಜುನ ಖರ್ಗೆ

ಪ್ರಚಾರಕ್ಕೆ ಬಂದ್ರೆ ಧಮ್ಕಿ ಹಾಕ್ತಾರೆ

ಉಮಾಪತಿ ಶ್ರೀನಿವಾಸ ಗೌಡ ಅವರ ಪತ್ನಿ ಸ್ಮಿತಾ ಎಸ್ ಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದ ಜೊತೆ ಯಾರಾದರೂ ಗುರುತಿಸಿಕೊಂಡರೆ, ಪ್ರಚಾರಕ್ಕೆ ಬಂದರೆ ಅವರಿಗೆ ಧಮ್ಕಿ ಹಾಕುತ್ತಾರೆ. ಪೋಲಿಸ್ ಅಧಿಕಾರಿಗಳ ಮೂಲಕ ಪಿಟಿ ಕೇಸ್ ಗಳನ್ನು ಹಾಕಿಸಲಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದ ಜನರಲ್ಲಿ ಈ ರೀತಿಯ ಭಯದ ವಾತಾವರಣ ಹೋಗಬೇಕು. ಅದಕ್ಕಾಗಿ ಸ್ವಾಭಿಮಾನದ ನಡಿಗೆಯನ್ನು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ನಾವು ಮಾಡ್ತಿದ್ದೇವೆ. ನಮ್ಮ ಯಜಮಾನರ ವಿಷನ್ ಕೂಡ ಬೇರೆಯೇ ಇದೆ. ಅದಕ್ಕಾಗಿ ಈ ಸಲ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕು ಎಂದು ಸ್ಮಿತಾ ಉಮಾಪತಿ ತಮ್ಮ ಅಭಿಪ್ರಾಯವನ್ನು ಪವರ್ ವಿತ್ ಲೀಡರ್ ತಂಡದ ಜೊತೆ ಹಂಚಿಕೊಂಡಿದ್ದಾರೆ.

ಒಟ್ನಲ್ಲಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜರಗನಹಳ್ಳಯಿಂದ ಆರಂಭವಾದ ಸ್ವಾಭಿಮಾನದ ನಡಿಗೆ ಸುಮಾರು 12 ಕಿಮೀ ಕ್ರಮಿಸಿದ ಬಳಿಕ ಅಗರದಲ್ಲಿ ಅಂತ್ಯವಾಯಿತು. ಎದುರಾಳಿಗೆ ತಕ್ಕ ಪಾಠ ಕಲಿಸಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಅವರು ಅಬ್ಬರದ ಪ್ರಚಾರದ ಮೂಲಕ ಮತ ಬೇಟೆ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES