Monday, December 23, 2024

ಮಂಡ್ಯದಲ್ಲಿ ಈ ಬಾರಿ ‘ಬಿಜೆಪಿಗೆ ಗೆಲುವು ಸುಲಭ’ : ಆರ್. ಅಶೋಕ್

ಬೆಂಗಳೂರು : ರಾಜ್ಯದಲ್ಲಿ ಚುನಾವಣಾ ರಣಕಣ ರಂಗೇರುತ್ತಿದ್ದು, ಅಭ್ಯರ್ಥಿಗಳ ಪರ ಪಕ್ಷದ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿ ಅಭ್ಯರ್ಥಿಗಳಿಗೆ ಸಾಥ್ ನೀಡುತ್ತಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಪರ ಸಚಿವ ಆರ್.ಅಶೋಕ್ ಮತ ಪ್ರಚಾರಕ್ಕೆ ಆಗಮಿಸಿದ್ದರು. ಮಂಡ್ಯ ಮತಕ್ಷೇತ್ರದ ಸಾತನೂರು ಗ್ರಾಮ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಆರ್.ಅಶೋಕ್ ಅವರು ಅಶೋಕ್ ಜಯರಾಮ್ ಪರ ಮತಬೇಟೆ ನಡೆಸಿದರು.

ಪ್ರಚಾರದ ವೇಳೆ ಪವರ್ ವಿತ್ ಲೀಡರ್ ತಂಡದ ಜೊತೆ ಮಾತನಾಡಿದ ಆರ್​​. ಅಶೋಕ್ ಅವರು, ಮಂಡ್ಯದಲ್ಲಿ ಬಿಜೆಪಿ ಪಕ್ಷ ಈ ಬಾರಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

​​​​​ಇದನ್ನೂ ಓದಿ : ಯೋಗಿ ಆದಿತ್ಯನಾಥ್ ‘ಭಾರತದ ಮುಂದಿನ ಪ್ರಧಾನಿ’ : ಅಶೋಕ್ ಜಯರಾಮ್ ಬಣ್ಣನೆ

ಜೆಡಿಎಸ್ ಮತ್ತು ಕಾಂಗ್ರೆಸ್​​​ನಲ್ಲಿ ಒಳಜಗಳ ಇದೆ. ಬಿಜೆಪಿಯ ಅಭಿವೃದ್ಧಿ ಯೋಜನೆಗಳು ಮತ್ತು ಅಶೋಕ್ ಜಯರಾಮ್ ತಂದೆ ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ಜನ ಈಗಲೂ ನೆನೆಯುತ್ತಾರೆ. ಹಾಗಾಗಿ, ಈ ಬಾರಿ ಅಶೋಕ್ ಜಯರಾಮ್ ಗೆಲುವು ಸುಲಭ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮಂಡ್ಯ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಮಾತನಾಡಿ, ನಮ್ಮ ತಂದೆ ಎಸ್.ಟಿ. ಜಯರಾಮ್ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಈಗಲೂ ತಾವುಗಳು ನೆನಪಿಸಿಕೊಳ್ಳುತ್ತೀರಿ ಅಂದ್ರೆ, ಅದೇ ನನ್ನ ಸೌಭಾಗ್ಯ ಎಂದು ಹೇಳಿದ್ದಾರೆ.

ನಮ್ಮ ತಂದೆಯ ಮಾರ್ಗದಲ್ಲಿ ನಾನು ಕೂಡ ಮುನ್ನಡೆಯಬೇಕಿದೆ. ಹಾಗಾಗಿ ಈ ಸಲದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗುರುತಿಗೆ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮತಯಾಚಿಸಿದರು.

RELATED ARTICLES

Related Articles

TRENDING ARTICLES