ಬೆಂಗಳೂರು : ಕಾಂಗ್ರೆಸ್ ನವರು ಒಂದು ಮಾತು ಹೇಳ್ತಾರೆ. ಸ್ಲಂ ನವರಿಗೆ ಹಣ ಬಿಸಾಕಿ ವೋಟ್ ಬರುತ್ತೆ ಅಂತಾರೆ. ಆ ಹಣ ನಿಮಗೆ ಬೇಕಾ? ಎಂದು ಸಚಿವ ಹಾಗೂ ಆರ್. ಆರ್. ನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸಚಿವ ಮುನಿರತ್ನ ಅವರು ಇಂದು ಪ್ರಚಾರ ನಡೆಸಿದರು. ಸ್ಲಂಮ್ ನಿವಾಸಿಗಳು ಮುನಿರತ್ನಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಪ್ರಚಾರದ ವೇಳೆ ಪವರ್ ವಿತ್ ಲೀಡರ್ ಕಾರ್ಯಕ್ರದಲ್ಲಿ ಅವರು ಮಾತನಾಡಿದ್ದಾರೆ.
ಕಾಂಗ್ರೆಸ್ ನವರಿಗೆ ಬಡವರಿಗೆ ಮನೆ ಕಟ್ಟಬೇಕು ಅನ್ನೋ ಉದ್ದೇಶ ಇಲ್ಲ. ಕೊರೋನಾ ಸಂದರ್ಭದಲ್ಲಿ ಯಾರಾದರೂ ನಿಮ್ಮ ಕಷ್ಟ ಕೇಳಿದ್ರಾ? ಅದನ್ನು ನೋಡಿ ಮೇ 10 ರಂದು ತೀರ್ಮಾನ ಮಾಡಿ ಎಂದು ಸಚಿವ ಮುನಿರತ್ನ ಬಿಜೆಪಿಗೆ ಮತ ನೀಡುವಂತೆ ಸ್ಲಮ್ ನಿವಾಸಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ ವಿಶ್ವಗುರು, ಅದಕ್ಕೆ ‘ಕಾಂಗ್ರೆಸ್ ಗೆ ಭಯ’ : ಸಚಿವ ಡಾ.ಕೆ ಸುಧಾಕರ್
ಭೂಗಳ್ಳ ಕಾಂಗ್ರೆಸ್ ಗೆ ಮತ ನೀಡಬೇಡಿ
ಮುನಿರತ್ನ ಇಲ್ಲ ಅಂದ್ರೆ ಬಡವರ ಮನೆ ದೀಪ ಉರಿಯುರತ್ತೆ. ಮುನಿರತ್ನ ಇಲ್ಲ ಅಂದ್ರೆ ಇಲ್ಲಿ ದೀಪ ಆರುತ್ತೆ. ಇಲ್ಲಿ ಸೂರ್ಯ ಹೇಗೆ ಬೆಳಗುತ್ತಾನೊ ಅದೇ ರೀತಿ ನಾನು ಶಾಸಕನಾಗಿದ್ರೆ ಸದಾ ದೀಪ ಉರಿಯುತ್ತಿದೆ. ಇದ್ರಿಂದ ಚುನಾವಣೆಯಲ್ಲಿ ಭೂಗಳ್ಳ ಕಾಂಗ್ರೆಸ್ ಗೆ ಮತ ನೀಡಬೇಡಿ. ಬಿಜೆಪಿಗೆ ಮತ ನೀಡಿ, ಕಷ್ಟ ಕಾಲ ಅಂದಾಗ 5 ನಿಮಿಷಗಳಲ್ಲಿ ಮುನಿರತ್ನ ನಿಮ್ಮ ಮನೆ ಮುಂದೆ ಇರ್ತಾರೆ ಎಂದು ಮುನಿರತ್ನ ಹೇಳಿದ್ದಾರೆ.
ನಟ ಹಾಗೂ ಹೋರಾಟಗಾರ ಮೂರ್ತಿ ಅವರು ಮಾತನಾಡಿ, ಬಿಎಲ್ ಸರ್ಕಲ್ ನಿಂದ ಆರ್ ಆರ್. ನಗರ ಎಂಡ್ ವರೆಗೂ ಸಾಕಷ್ಟು ಅಭಿವೃದ್ಧಿಯಾಗಿದೆ. ಅದಕ್ಕೆ ಕಾರಣ ಶಾಸಕ ಮುನಿರತ್ನ. ಕಾಂಗ್ರೆಸ್ ನವರು ಅಂಬೇಡ್ಕರ್ ಸತ್ತಾಗ ಮಣ್ಣು ಮಾಡಲು ಜಾಗ ನೀಡಿಲ್ಲ. ಅದಕ್ಕೆ ಅವಕಾಶ ಕೊಟ್ಟಿದ್ದು ಬಿಜೆಪಿ. ನಮ್ಮ ಜೊತೆ ಸದಾ ಶಾಸಕರು ಸದಾ ಇರ್ತಾರೆ, ನಿಷ್ಠಾವಂತ ನಾಯಕ ಮುನಿರತ್ನ ಗೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.