Monday, December 23, 2024

ನಿಮ್ಮ ‘ವಿಶ್ವಾಸಕ್ಕೆ ಧಕ್ಕೆ ಆಗದ ರೀತಿ ಕೆಲಸ’ ಮಾಡುತ್ತೇನೆ : ಸೀಕಲ್ ರಾಮಚಂದ್ರ ಗೌಡ

ಬೆಂಗಳೂರು : ಶಿಡ್ಲಘಟ್ಟ ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಆಗದ ರೀತಿ ಕೆಲಸ ಮಾಡುತ್ತೇನೆ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡ ಅವರು ಹೇಳಿದರು.

ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ನ ಹಾಲಿ ಮುಖಂಡರು ಮತ್ತು ಸದಸ್ಯರುಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಳಿಕ ಅವರು ಮಾತನಾಡಿದರು.

ತಾವೆಲ್ಲ ನನ್ನ ಮೇಲೆ, ಪಕ್ಷದ ಮೇಲೆ, ನಾಯಕರ ಮೇಲೆ ವಿಶ್ವಾಸ ಇಟ್ಟು ಬಂದಿದ್ದೀರಾ ಯಾವುದೇ ಕಾರಣಕ್ಕೂ ನಿಮ್ಮ ವಿಶ್ವಾಸಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಹಳ್ಳಿ ರಾಜಕಾರಣ ಬೇರೆ, ಡೆಲ್ಲಿ ರಾಜಕಾರಣ ಬೇರೆ. ಹಳ್ಳಿ ರಾಜಕಾರಣ ಕಷ್ಟ ಎಂದು ಸೀಕಲ್ ರಾಮಚಂದ್ರ ಗೌಡ ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಕೈ ಜೋಡಿಸಿ. ಶಿಡ್ಲಘಟ್ಟ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆ ಮಾಡುವತ್ತ ಕೆಲಸ ಮಾಡೋಣ. ಜೊತೆಗೆ ನಿಮ್ಮನ್ನು ನಾಯಕತ್ವದ ಹಂತಕ್ಕೆ ತೆಗೆದುಕೊಂಡು ಹೋಗುವುದೇ ನಮ್ಮ ಗುರಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.

ಇದನ್ನೂ ಓದಿ : ಶಿಡ್ಲಘಟ್ಟ ಅಭಿವೃದ್ಧಿಯೇ ರಾಮಚಂದ್ರಗೌಡ್ರು ಕನಸು : ಸೀಕಲ್ ಆನಂದಗೌಡ

ಬಿಜೆಪಿ ಸೇರಿದಕೈಮುಖಂಡರು

ಮಳೆರಾಯ ಕೂಡ ಸ್ವಲ್ಪ ಸಮಯ ಬಂದು ಹೊರಟು ಹೋದ. ಆದರೆ, ಶಿಡ್ಲಘಟ್ಟದಲ್ಲಿ ಬಿಜೆಪಿಗೆ ಸೇರ್ತಾ ಇರೋರ ಸಂಖ್ಯೆ ಕಮ್ಮಿ ಆಗ್ತಾ ಇಲ್ಲ. ಸೀಕಲ್ ರಾಮಚಂದ್ರಗೌಡರು ಶಿಡ್ಲಘಟ್ಟದಲ್ಲಿ ಬಿಜೆಪಿ ನಾಯಕತ್ವ ವಹಿಸಿಕೊಂಡಮೇಲೆ ಶಿಡ್ಲಘಟ್ಟ ಜನ ಹೊಸ ಹುರುಪಿನೊಂದಿಗೆ ಇದ್ದಾರೆ. ಇದರ ಫಲವಾಗಿ ಪ್ರತಿದಿನ ಸಾವಿರಾರು ಜನರು ಸೇರ್ಪಡೆ ಆಗುತ್ತಲೇ ಇದ್ದಾರೆ.

ಆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಜನ ಕಾಂಗ್ರೆಸ್ ನ ಹಾಲಿ ಮುಖಂಡರು ಮತ್ತು ಸದಸ್ಯರುಗಳು ಬಿಜೆಪಿಗೆ ಸೇರ್ಪಡೆಯಾದರು. ಪ್ರಭಾಕರ್ ಬೋದನೂರು, ವಿಶ್ವಾಸ್ ಬೋದನೂರು, ಸುರೇಶ, ನಾಗೇಶ್ ಜಪ್ತಿಹೊಸ ಹಳ್ಳಿ, ಮುನಿಯಪ್ಪ ಡಬರಗಾನಹಳ್ಳಿ, ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಹಾಲಿ ಮುಖಂಡರು ಮತ್ತು ಸದಸ್ಯರು ಪಕ್ಷದ ಶಾಲು ಧರಿಸುವುದರೊಂದಿಗೆ ಬಿಜೆಪಿಗೆ ಸೇರಿದರು.

RELATED ARTICLES

Related Articles

TRENDING ARTICLES