Sunday, December 22, 2024

ಮಲ್ಲೇಶ್ವರದ ಮನೆ ಮನೆಯಲ್ಲೂ ‘ಕಮಲ ಅರಳಲಿದೆ’ : ಅಶ್ವತ್ಥನಾರಾಯಣ

ಬೆಂಗಳೂರು : ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಲು ರಾಜ್ಯದ ಜನತೆ ತೀರ್ಮಾನಿಸಿದ್ದಾರೆ ಎಂದು ಸಚಿವ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಆರ್.ಎಂ.ವಿ ಬಡಾವಣೆಯ ಪೂರ್ವಿ ಏಟ್ರಿಯಾ ಮತ್ತು ಪೂರ್ವ ಪ್ಲಾಟಿನಾ ಅಪಾರ್ಟ್‌ಮೆಂಟ್ ಮತ್ತು ಸಿಪಿಆರ್ ಐ ಸಿಬ್ಬಂದಿಯ ವಸತಿ ಪ್ರದೇಶಗಳಿಗೆ ಭೇಟಿ ನೀಡಿ, ಮತ ಕೋರಿದರು.

ಮತ ಪ್ರಚಾರದ ವೇಳೆ ಮಾತನಾಡಿದ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು, ಮಲ್ಲೇಶ್ವರದ ಮನೆ ಮನೆಯಲ್ಲೂ ಕಮಲ ಅರಳಲಿದ್ದು, ಈ ಬಾರಿ ಪೂರ್ಣ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ : ಬಿಜೆಪಿಗೆ ‘ಜನ ಸೇವೆಯೇ ರಾಷ್ಟ್ರಸೇವೆ’ : ಪ್ರಧಾನಿ ಮೋದಿ

ಮಾದರಿ ಮಲ್ಲೇಶ್ವರ ನಿರ್ಮಾಣಕ್ಕೆ ಕೈಗೊಂಡಿರುವ ಕ್ರಮಗಳು ಹಾಗೂ ಡಬಲ್‌ ಇಂಜಿನ್‌ ಸರ್ಕಾರದಡಿ ಬೆಂಗಳೂರು ಹಾಗೂ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಜನಮನ ಸೆಳೆದಿದೆ. ಡಬಲ್ ಎಂಜಿನ್ ಬಿಜೆಪಿ ಸರಕಾರವು ಅಭಿವೃದ್ಧಿ ಕೇಂದ್ರಿತ ಆಡಳಿತವನ್ನು ನಡೆಸುತ್ತಿದೆ. ಇದರಿಂದ ಎಲ್ಲರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಬೆಂಗಳೂರು ನಗರದ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಪರವಾಗಿ ಜನಾದೇಶ ನೀಡುವಂತೆ ಕೋರಿದರು.

ಸದಾಶಿವನಗರದಲ್ಲೂ ಅಲ್ಲಿನ‌ ನಿವಾಸಿಗಳ ಜತೆ ಸಭೆ ನಡೆಸಿ ಮತಯಾಚನೆ‌ ಮಾಡಿದರು. ಸ್ಯಾಂಕಿ ಕೆರೆ ಅಭಿವೃದ್ಧಿ ಬಗ್ಗೆ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಮಲ್ಲೇಶ್ವರದ ಭುವನೇಶ್ವರಿನಗರ, ವೈಯಾಲಿಕಾವಲ್‌ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿ, ಬಿಜೆಪಿಗೆ ಮತ ನೀಡುವಂತೆ ಮತದಾರರಿಗೆ ಸಚಿವ ಅಶ್ವತ್ಥನಾರಾಯಣ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಲ್ಲೇಶ್ವರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

RELATED ARTICLES

Related Articles

TRENDING ARTICLES