Monday, December 23, 2024

ಬಿಜೆಪಿ ಅಧಿಕಾರಕ್ಕೆ ಬರದಿದ್ರೆ ‘ಶಿಡ್ಲಘಟ್ಟ 50 ವರ್ಷ ಹಿಂದುಳಿಯಲಿದೆ’ : ಸೀಕಲ್ ರಾಮಚಂದ್ರಗೌಡ

ಬೆಂಗಳೂರು : ಈ ಬಾರಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರದಿದ್ದರೆ ಶಿಡ್ಲಘಟ್ಟ ಇನ್ನು 50 ವರ್ಷಗಳ ಕಾಲ ಹಿಂದುಳಿಯಲಿದೆ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್​ ರಾಮಚಂದ್ರಗೌಡ ಹೇಳಿದ್ದಾರೆ.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೀಕಲ್​ ರಾಮಚಂದ್ರಗೌಡ ಅವರ ಅಬ್ಬರ ಜೋರಾಗಿದ್ದು, ಕ್ಷೇತ್ರದ ತುಂಬೆಲ್ಲಾ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಮತದಾರರನ್ನುದ್ದೇಶಿ ಅವರು ಮಾತನಾಡಿದ್ದಾರೆ.

ಕ್ಷೇತ್ರದ ಮತದಾರರು ಯೋಚಿಸಿ ಮತ ನೀಡಿ. ಕಳೆದ ಯಾವುದೇ ಸರ್ಕಾರದ ಕಾಲದಲ್ಲೂ ಮಾಡದ ಕೆಲಸವನ್ನು ಕೇವಲ 5 ವರ್ಷಗಲ್ಲಿ ಮಾಡುತ್ತೇವೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲ ಅತ್ಯವಶ್ಯಕ ಎಂದು ಸೀಕಲ್​ ರಾಮಚಂದ್ರಗೌಡ ಅವರು ಹೇಳಿದ್ದಾರೆ.

ಮಾಜಿ ಶಾಸಕರಾದ ರಾಜಣ್ಣ ಮಾತನಾಡಿ, ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕೊಡುಗೆಗಳ ಬಗ್ಗೆ ತಿಳಿಸಿದರು. ಆಯುಷ್ಮಾನ್ ಭಾರತ್, ಪ್ರಧಾನ್ ಮಂತ್ರಿ ಕಿಸಾನ ಸಮ್ಮಾನ್ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಪೆನ್ಷನ್ ಸ್ಕೀಮ್ ಗಳ ಬಗ್ಗೆ ಇದೇ ವೇಳೆ ಮತದಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತದೆ : ಸಚಿವ ಗೋಪಾಲಯ್ಯ

2,000ಕ್ಕೂ ಹೆಚ್ಚು ಜನ ಬಿಜೆಪಿ ಸೇರ್ಪಡೆ

ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚಿಲಕಲನೆರ್ಪು ಹೋಬಳಿಯ ಏನಿಗದಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಜಿ ಶಾಸಕರಾದ ರಾಜಣ್ಣ, ಕೋನಪ್ಪ ರೆಡ್ಡಿ (ಒಕ್ಕಲಿಗರ ಸಂಘದ ಅಧ್ಯಕ್ಷರು)ವೈ ನಾರಾಯಣ ಸ್ವಾಮಿ, ಮಿಟ್ಟಹಳ್ಳಿ  ಶ್ರೀರಾಮ ರೆಡ್ಡಿ, ಬಾಲರೆಡ್ಡಿಪಳ್ಳಿ ಪ್ರಸಾದ್ ರೆಡ್ಡಿ, ಚೋಕನಹಳ್ಳಿ ಆನಂದ್ ರೆಡ್ಡಿ, ಏನಿಗದಲೆ ಆನಂದ್ ರೆಡ್ಡಿ ಯವರ ನೇತೃತ್ವದಲ್ಲಿ ಇಂದು 2000ಕ್ಕೂ ಹೆಚ್ಚು ಗ್ರಾಮಸ್ಥರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.

ಬೃಹತ್ ವೇದಿಕೆಯಲ್ಲಿ ಹತ್ತಾರು ನಾಯಕರ ಸಮ್ಮುಖದಲ್ಲಿ ಎಲ್ಲರಿಗೂ ಸಹ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಇದಕ್ಕೂ ಮುಂಚೆ ಏನಿಗದಲೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಹೂಮಾಲೆ ಹಾಕಿ, ಹೂ ಮಳೆಗರೆದು, ಗ್ರಾಮದ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ತಮ್ಮ ನೆಚ್ಚಿನ ನಾಯಕ ಸೀಕಲ್ ರಾಮಚಂದ್ರಗೌಡ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

RELATED ARTICLES

Related Articles

TRENDING ARTICLES