ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮನಸ್ಸು ಗೆಲ್ಲಲು ಕಮಲ ಕಲಿಗಳು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಖುದ್ದು ಇಂದು ಪ್ರಧಾನಿ ನರೇಂದ್ರ ಮೋದಿಯೇ ಮತ ಬೇಟೆಗೆ ಇಳಿದಿದ್ದಾರೆ.
ಹೌದು, ಈಗಾಗಲೇ ಪ್ರಧಾನಿ ಮೋದಿ ಅವರು ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇಂದು ಕರುನಾಡಲ್ಲಿ ಪ್ರಧಾನಿ ನರೇಂದ್ರ ಮೋದಿ ಮೋಡಿ ಮಾಡಲಿದ್ದಾರೆ. ರಾಜ್ಯದಲ್ಲಿ ಮೋದಿ ಮೇನಿಯಾಗೆ ಕ್ಷಣಗಣನೆ ಆರಂಭವಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮೋದಿ ಮತ ಬೇಟೆ ನಡೆಸಲಿದ್ದಾರೆ.
ಮೋದಿಗೆ ಉ.ಕ ಜವಾರಿ ಭೋಜನ
ಪ್ರಧಾನಿ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಉತ್ತರ ಕರ್ನಾಟಕ ಶೈಲಿಯ ಭೋಜನ ಸವಿಯಲಿದ್ದು, ಬಿಜೆಪಿ ನಾಯಕರು ಜವಾರಿ ಊಟದ ವ್ಯವಸ್ಥೆ ಮಾಡಿದ್ದಾರೆ. ಪಟ್ಟಿಯಲ್ಲಿ ಜೋಳದ ರೊಟ್ಟಿ, ಫುಲ್ಕಾ, ದಾಲ್, ಎಣ್ಣೆಗಾಯಿ, ಶೇಂಗಾ ಚಟ್ನ, ಕೊಲ್ದಾರ ಗಟ್ಟಿ ಮೊಸರು, ಶೇಂಗಾ ಹೋಳಿಗೆ, ಅನ್ನ, ರಸಂ, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ ಖಾದ್ಯಗಳಿವೆ. ಕೆಲ ಬಿಜೆಪಿ ಅಭ್ಯರ್ಥಿಗಳೂ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ : ‘ಬಿಜೆಪಿ ಗ್ಯಾರಂಟಿ’ಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಪ್ರಧಾನಿ ಮೋದಿ ಕಾರ್ಯಕ್ರಮದ ವೇಳಾಪಟ್ಟಿ
ಬೆಳಗ್ಗೆ 10.20ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಆಗಮನ
10.25ಕ್ಕೆ ಬೀದರ್ ವಿಮಾನ ನಿಲ್ದಾಣದಿಂದ ಹುಮ್ನಾಬಾದ್‌ಗೆ ಪ್ರಯಾಣ
10.50ಕ್ಕೆ ಹುಮ್ನಾಬಾದ್ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ
10.55ಕ್ಕೆ ಹುಮ್ನಾಬಾದ್ ಹೆಲಿಪ್ಯಾಡ್‌ನಿಂದ ರಸ್ತೆಯ ಮೂಲಕ ಪ್ರಯಾಣ
ರಸ್ತೆಯ ಮೂಲಕ ಸಾರ್ವಜನಿಕ ಸಭೆ ನಡೆಯುವ ಸ್ಥಳಕ್ಕೆ ಪ್ರಯಾಣ
11 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ
11 ಗಂಟೆಯಿಂದ 11.40ರವರೆಗೂ ಸಾರ್ವಜನಿಕ ಸಭೆಯಲ್ಲಿ ಭಾಗಿ
11.50ಕ್ಕೆ ಹುಮ್ನಾಬಾದ್ ಹೆಲಿಪ್ಯಾಡ್‌ನಿಂದ ವಿಜಯಪುರಕ್ಕೆ ಪ್ರಯಾಣ
ಮಧ್ಯಾಹ್ನ 1 ಗಂಟೆಗೆ ವಿಜಯಪುರದ ಸಾರ್ವಜನಿಕ ಸಭೆಯಲ್ಲಿ ಭಾಗಿ
ಮಧ್ಯಾಹ್ನ 2.35ಕ್ಕೆ ಕುಡಚಿ ಹೆಲಿಪ್ಯಾಡ್‌ಗೆ ನರೇಂದ್ರ ಮೋದಿ ಆಗಮನ
2.45ಕ್ಕೆ ಕುಡಚಿ ಸಾರ್ವಜನಿಕ ಸಭೆಯಲ್ಲಿ ನರೇಂದ್ರ ಮೋದಿ ಭಾಗಿ
3.40ಕ್ಕೆ ಕುಡಚಿ ಹೆಲಿಪ್ಯಾಡ್‌ನಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಪ್ರಯಾಣ
4.25ಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ
5.30ಕ್ಕೆ ಬೆಂಗಳೂರಿನ HAL ವಿಮಾನ ನಿಲ್ದಾಣಕ್ಕೆ ಮೋದಿ ಆಗಮನ
5.55ಕ್ಕೆ ಮಾಗಡಿ ರಸ್ತೆಯ ಗೊಲ್ಲರಹಟ್ಟಿ ಹೆಲಿಪ್ಯಾಡ್‌ಗೆ ಆಗಮನ
6.15 ರಿಂದ 7 ಗಂಟೆಯವರೆಗೂ ಬೆಂಗಳೂರಿನಲ್ಲಿ ರೋಡ್ ಶೋ
45 ನಿಮಿಷಗಳ ಕಾಲ 4.5 ಕಿಮೀ ರೋಡ್ ಶೋ ನಡೆಸಲಿರುವ ಪ್ರಧಾನಿ
ಗೊಲ್ಲರಹಟ್ಟಿ, ಬ್ಯಾಡರಹಳ್ಳಿ, ಸುಂಕದಕಟ್ಟೆ, ಕೊಟ್ಟಿಗೆಪಾಳ್ಯ ಮೂಲಕ ಸುಮನಹಳ್ಳಿ ಬ್ರಿಡ್ಜ್ ತಲುಪಲಿರುವ ಪ್ರಧಾನಿ ಮೋದಿ
7.05ಕ್ಕೆ ಸುಮನಹಳ್ಳಿಯಿಂದ ರಸ್ತೆ ಮೂಲಕ ರಾಜಭವನಕ್ಕೆ ಪ್ರಯಾಣ