Monday, December 23, 2024

ಬಸವೇಶ್ವರ, ಶಿವಶರಣರ ಪುಣ್ಯಭೂಮಿಗೆ ನನ್ನ ನಮಸ್ಕಾರಗಳು : ಪ್ರಧಾನಿ ಮೋದಿ ಭಾಷಣ ಆರಂಭ

ಬೀದರ್ : ಜಗದ್ಗುರು ಶ್ರೀ ಬಸವೇಶ್ವರ, ಶಿವಶರಣರ ಪುಣ್ಯಭೂಮಿಗೆ ನನ್ನ ನಮಸ್ಕಾರಗಳು ಎಂದು ಬಸವೇಶ್ವರರನ್ನು ನೆನೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಬೀದರ್ ನಲ್ಲಿ ಭಾಷಣ ಆರಂಭಿಸಿದರು.

ಬೀದರ್‌ ಜಿಲ್ಲೆಯ ಹುಮ್ನಾಬಾದ್‌ ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಪಾರ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಬಿಜೆಪಿ ಸರ್ಕಾರ, ಕರ್ನಾಟಕದಲ್ಲಿ ಪೂರ್ಣ ಬಹುಮತ ಬರಲಿದೆ ಎಂಬ ಸ್ಪಷ್ಟ ಸಂದೇಶವನ್ನು ನೀವು ದೇಶಕ್ಕೆ ನೀಡಿದ್ದೀರಿ ಎಂದು ಪ್ರಧಾನಿ ಮೋದಿ ತಿಳಿಸಿದರು.

ಚುನಾವಣೆ ಯಾತ್ರೆ ಬೀದರ್‌ನಿಂದ ಆರಂಭವಾಗಿದೆ. ಭಗವಾನ್‌ ಬಸವೇಶ್ವರ ಆಶೀರ್ವಾದ ಹಾಗೂ ಕರ್ನಾಟಕದ ಕಿರೀಟ ಬೀದರ್‌ ಜನರ ಆಶೀರ್ವಾದ ನನ್ನ ಮೇಲಿದೆ. ಇದರಿಂದ ಕೆಲಸ ಮಾಡಲು ನನಗೆ ಶಕ್ತಿ ಬಂದಿದೆ ಎಂದು ಹೇಳಿದರು.

ಇದನ್ನೂ ಓದಿ : ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತದೆ : ಸಚಿವ ಗೋಪಾಲಯ್ಯ

ಕರ್ನಾಟಕವನ್ನು ನಂ.1 ಮಾಡುವ ಚುನಾವಣೆ

ರಾಜ್ಯದ ಈ ಚುನಾವಣೆ 5 ವರ್ಷಗಳಿಗೆ ಸರ್ಕಾರ ರಚಿಸುವುದಕ್ಕಷ್ಟೇ ಇರುವ ಚುನಾವಣೆಯಲ್ಲ. ಇದು ಕರ್ನಾಟಕವನ್ನು ದೇಶದಲ್ಲಿ ನಂಬರ್ 1 ಮಾಡಲಿರುವ ಚುನಾವಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ಡಬಲ್ ಎಂಜಿನ್ ನಿಂದ ಕರ್ನಾಟಕ ಅಭಿವೃದ್ಧಿ

ಡಬಲ್ ಎಂಜಿನ್ ಬಿಜೆಪಿ ಸರ್ಕಾರದಿಂದ ಕರ್ನಾಟಕ ರಾಜ್ಯ ಅಭಿವೃದ್ಧಿಯಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕರ್ನಾಟಕ ಎತ್ತ ಸಾಗುತ್ತಿದೆ? ಹೆದ್ದಾರಿ, ಮೆಟ್ರೋ ವಿಸ್ತರಣೆಯಾಗುತ್ತಿವೆ ಎಂದು ಮೋದಿ ಹೇಳಿದರು.

RELATED ARTICLES

Related Articles

TRENDING ARTICLES