Sunday, December 22, 2024

ಜಮಖಂಡಿಯಲ್ಲಿ ‘ಕಾಂಗ್ರೆಸ್ ಪರ ಜನರ ಒಲವಿದೆ’ : ಶಾಸಕ ಆನಂದ್ ನ್ಯಾಮಗೌಡ

ಬಾಗಲಕೋಟೆ : ರಾಜ್ಯದಲ್ಲಿ ವಿಧಾನಸಭಾ ಚುಣಾವನಾ ಮತದಾನಕ್ಕೆ ಕೇವಲ 11 ದಿನ ಮಾತ್ರ ಬಾಕಿಯಿದ್ದು, ರಣಕಣದಲ್ಲಿರುವ ಅಭ್ಯರ್ಥಿಗಳು ಅಬ್ಬರದ ಪ್ರಚಾರದ ಮೂಲಕ ಮತದಾರರ ಓಲೈಕೆಯಲ್ಲಿತೊಡಗಿದ್ದಾರೆ.

ಹೌದು, ಜಮಖಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಅವರು ತಮ್ಮ ಮತಕ್ಷೇತ್ರದಲ್ಲಿ ಅಬ್ಬರದ ಮತ ಬೇಟೆಯಾಡ್ತಿದ್ದಾರೆ.

ಜಮಖಂಡಿ ನಗರದ ರಾಮೇಶ್ವರ ಕಾಲೋನಿಯಲ್ಲಿರುವ ಬಿಜೆಪಿ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಅವರ ಮನೆಗೆ ಭೇಟಿ ನೀಡಿರುವ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಅವರು ಸಾಂಪ್ರದಾಯಿಕ ಮತಯಾಚನೆ ಮಾಡಿದರು.

ಇದನ್ನೂ ಓದಿ : ದೊಡ್ಡ ಬಲೆ ಹಾಕಿ ಗೀತಾರನ್ನು ಬೀಳಿಸಿದ್ದೇನೆ : ಡಿ.ಕೆ ಶಿವಕುಮಾರ್

ಕಾಂಗ್ರೆಸ್ ಪರ ಜನರ ಒಲವಿದೆ

ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಸಕ ಆನಂದ್ ನ್ಯಾಮಗೌಡ ಅವರು, ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಆಡಳಿತ ನೋಡಿ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ಪರ ಜನರ ಒಲವಿದೆ. ಜಮಖಂಡಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾಜಿ ಶಾಸಕ ಕುಲಕರ್ಣಿ ಜೊತೆ ಶಾಸಕ ಆನಂದ್ ನ್ಯಾಮಗೌಡ ಅವರ ಕುಷಿಲೊಪರಿ ಮಾತನಾಡಿದ್ದು ಗಮನ ಸೆಳೆಯಿತು. ಬಳಿಕ ನಗರದ ವಾರ್ಡ್ ನಂಬರ್ 10,11ರಲ್ಲಿನ ನಿವಾಸಿಗಳ ಮನೆ ಮನೆಗೆ ಭೇಟಿ ನೀಡಿ ಅಮೂಲ್ಯವಾದ ಮತನ ನೀಡಿ ಮರು ಆಯ್ಕೆ ಮಾಡುವಂತೆ  ಶಾಸಕ ಆನಂದ್ ನ್ಯಾಮಗೌಡ ಮನವಿ ಮಾಡಿಕೊಂಡರು.

RELATED ARTICLES

Related Articles

TRENDING ARTICLES