Monday, December 23, 2024

ಶಿಡ್ಲಘಟ್ಟ ಅಭಿವೃದ್ಧಿಗೆ ಬಿಜೆಪಿಗೆ ‘ಕೈ’ ಜೋಡಿಸುತ್ತೇವೆ : ‘ಕೈ, ದಳ’ ಮುಖಂಡರ ಭರವಸೆ

ಬೆಂಗಳೂರು : ಶಿಡ್ಲಘಟ್ಟ ಮಳ್ಳೂರು ಗ್ರಾಮ ಪಂಚಾಯಿತಿ ಪಕ್ಷೇತರ ಸದಸ್ಯೆ ಮುನಿರತ್ನಮ್ಮ ಅವರು ಇಂದು ಬಿಜೆಪಿಗೆ ಪಕ್ಷಕ್ಕೆ ತಮ್ಮ ಬೆಂಬಲವನ್ನು ಸೂಚಿಸಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಮುನಿರತ್ನಮ್ಮ ಅವರ ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸೂರಿ ನಾರಾಯಣ ಮತ್ತು ಶಿವ ಅವರು ಕೂಡ ಸೀಕಲ್ ರಾಮಚಂದ್ರಗೌಡರ ಸಾಮಾಜಿಕ ಕಳಕಳಿ ಹಾಗೂ ಬಿಜೆಪಿ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ ಸ್ವಯಂ ಪ್ರೇರಿತವಾಗಿ ಬೆಂಬಲ ವ್ಯಕ್ತಪಡಿಸಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿರುವ ಅವರು, ಶಿಡ್ಲಘಟ್ಟ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾವು ಕೈ ಜೋಡಿಸುವೆವು. ಈ ಬಾರಿ ಸೀಕಲ್ ರಾಮಚಂದ್ರಗೌಡ ಅವರ ಗೆಲುವಿಗೆ ಶ್ರಮಿಸುತ್ತೇವೆ. ಕ್ಷೇತ್ರದ ಬೆಳವಣಿಗೆಗೆ ನಿಲ್ಲುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ : ಶಿಡ್ಲಘಟ್ಟದಲ್ಲಿ ‘ಬಿಜೆಪಿ ಬಂದ್ರೆ ಅಭಿವೃದ್ಧಿ’ಗೆ ಆನೆಬಲ : ಸೀಕಲ್ ರಾಮಚಂದ್ರಗೌಡ

ಸೀಕಲ್ ರಾಮಚಂದ್ರಗೌಡ ಅವರು ಇಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆ ಪ್ರಚಾರ ಮುಂದುವರಿಸಿದರು. ಹೋದ ಕಡೆಯೆಲ್ಲಾ ಅವರಿಗೆ ಅಭೂತಪೂರ್ವ ಸ್ವಾಗತ ನೀಡಲಾಯಿತು. ಅಭಿವೃದ್ದಿ ಒಂದೇ ಮೂಲ ಮಂತ್ರವೆಂದುಕೊಂಡು ಕೆಲಸ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯಗತವಾಗಿದ್ದೇವೆ ಎಂದು ಮತಬೇಡೆ ನಡೆಸಿದರು.

ಇನ್ನೂ ಚೀಲಕಲನೇರ್ಪು ಹೋಬಳಿಯ ಕಾರ್ಯಕರ್ತರೊಂದಿಗೆ ಸೀಕಲ್ ರಾಮಚಂದ್ರಗೌಡ ಅವರು ಪೂರ್ವ ಭಾವಿ ಸಭೆ ನಡೆಸಿದರು. ಏನಿಗಿಧಾಳೇ ಗ್ರಾಮದ ಮಿಟ್ಟಹಲ್ಲಿ  ಶ್ರೀರಾಮರೆಡ್ಡಿ ತೋಟದಲ್ಲಿ ನಡೆದ ಸಭೆಯಲ್ಲಿ ಹೋಬಳಿ ಮಟ್ಟದ ಎಲ್ಲಾ ಕಾರ್ಯಕರ್ತರು ಮತ್ತು ಪ್ರಮುಖರು ಭಾಗವಹಿಸಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES