Monday, December 23, 2024

‘ನವ ಚಿತ್ರದುರ್ಗ’ ನಿರ್ಮಾಣಕ್ಕೆ ಜೆಡಿಎಸ್ ಅಭ್ಯರ್ಥಿಯಿಂದ ಪ್ರತ್ಯೇಕ ಪ್ರಣಾಳಿಕೆ

ಚಿತ್ರದುರ್ಗ : ಕೋಟೆನಗರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ಜೆಡಿಎಸ್ ಅಭ್ಯರ್ಥಿ ಮತದಾರರನ್ನು ಸೆಳೆಯಲು ತಮ್ಮ ಕನಸಿನ ಚಿತ್ರದುರ್ಗದ ನವ ನಿರ್ಮಾಣ ಕುರಿತ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಚಿತ್ರದುರ್ಗದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಇಂದು ನವ ಚಿತ್ರದುರ್ಗ ನಿರ್ಮಾಣಕ್ಕಾಗಿ, ಚಿತ್ರದುರ್ಗಕ್ಕೆ ಜೆಡಿಎಸ್ ಅಭ್ಯರ್ಥಿ ಜಿ. ರಘು ಆಚಾರ್ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಪ್ರಚಾರದ ಭರಾಟೆ, ಭರ್ಜರಿ ರೋಡ್ ಶೋ ನಡುವೆ ಸ್ಥಳೀಯ ಮುಖಂಡರಿಂದಲೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿಸಿದ್ದಾರೆ. ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ಕೊಟ್ಟಿರುವ ಜಿ.ರಘು ಆಚಾರ್, ಬೀದಿ ಬದಿ ವ್ಯಾಪಾರಿಗಳನ್ನೂ ಕೂಡ ಗಮನದಲ್ಲಿ ಇಟ್ಟುಕೊಂಡು ಅದ್ಭುತವಾದ ಪ್ರಣಾಳಿಕೆಯನ್ನು ಹೊರತಂದಿದ್ದಾರೆ.

ಇದನ್ನೂ ಓದಿ : ರಘು ಆಚಾರ್​ಗೆ ಮತ್ತಷ್ಟು ಬಲ : ‘ಕೈ’ ಬಿಟ್ಟು ‘ದಳ’ ಹಿಡಿದ ಮುಸ್ಲಿಂ ಮುಖಂಡರು

ಈ ವೇಳೆ ಮಾತನಾಡಿರುವ ಜಿ.ರಘು ಆಚಾರ್ ತಮ್ಮ ಕನಸಿನ ನವ ನಿರ್ಮಾಣದ ಮಾದರಿ ಚಿತ್ರದುರ್ಗದ ಬಗ್ಗೆ ತಮ್ಮ ಮನದಿಂಗಿ ವ್ಯಕ್ತಪಡಿಸಿದ್ದಾರೆ.

ರಘು ಆಚಾರ್ ಆನೆ ಬಲ

ದಿನೇ ದಿನೇ ಚಿತ್ರದುರ್ಗದಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಇಮ್ಮಡಿಗೊಳ್ಳುತ್ತಿದೆ. ಜೆಡಿಎಸ್ ಪಕ್ಷದ ಯೋಜನೆಗಳು, ಸಿದ್ದಾಂತವನ್ನು ಮೆಚ್ಚಿ ಸುಮಾರು 600ಕ್ಕೂ ಹೆಚ್ಚು ಜನ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ  ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಮೂಲಕ ಜಿ.ರಘು ಆಚಾರ್ ಅವರಿಗೆ ಆನೆ ಬಲ ಬಂದಂತಾಗಿದೆ.

RELATED ARTICLES

Related Articles

TRENDING ARTICLES