Monday, December 23, 2024

ಜನ ಸೇವಕರನ್ನು ಮತದಾರರು ಬೆಂಬಲಿಸಬೇಕು : ಮಾಜಿ ಶಾಸಕ ಎಸ್.ರಾಜಣ್ಣ

ಬೆಂಗಳೂರು : ಶಿಡ್ಲಘಟ್ಟ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಈ ಬಾರಿ ಬಿಜೆಪಿಗೆ ಮತ ನೀಡಬೇಕು ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರು ಮತದಾರರಿಗೆ ಮನವಿ ಮಾಡಿದರು.

ಶಿಡ್ಲಘಟ್ಟ ತಾಲೂಕಿನ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯತಿಯ ಗ್ರಾಮಗಳಲ್ಲಿ ಮಾಜಿ ಶಾಸಕ ಎಂ.ರಾಜಣ್ಣ ಅವರ ನೇತೃತ್ವದಲ್ಲಿ ಗುರುವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಶಿಡ್ಲಘಟ್ಟವನ್ನು ಅಭಿವೃದ್ಧಿಯಲ್ಲಿ ಮೊದಲ ಸ್ಥಾನಕ್ಕೆ ತರಲು ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಸೀಕಲ್ ರಾಮಚಂದ್ರಗೌಡ ಮತಯಾಚನೆ ಮಾಡಿದರು.

ಜನ ಸೇವಕರನ್ನು ಬೆಂಬಲಿಸಿ

ಮಾಜಿ ಶಾಸಕ ಎಸ್.ರಾಜಣ್ಣ ಮಾತನಾಡಿ, ಜನ ಸೇವೆಯನ್ನು ಮಾಡುವ ಸೇವಕರಿಗೆ ಮತದಾರರು ಬೆಂಬಲಿಸಬೇಕು. ಆ ಮೂಲಕ ಶಿಡ್ಲಘಟ್ಟವನ್ನು ಮತ್ತೊಮ್ಮೆ ಅಭಿವೃದ್ದಿ ಪಥಕ್ಕೆ ಕೊಂಡೊಯ್ಯಲು ಸಹಕರಿಸಬೇಕು ಎಂದು ಕೋರಿದರು.

ಇದನ್ನೂ ಓದಿ : ಶಿಡ್ಲಘಟ್ಟದಲ್ಲಿ ಮುಂದುವರಿದ ಸೀಕಲ್ ರಾಮಚಂದ್ರಗೌಡರ ಮತ ಬೇಟೆ

ಶಿಡ್ಲಘಟ್ಟ ಮತಕ್ಷೇತ್ರದ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇರುಗುಪ್ಪನಹಳ್ಳಿ, ಚಾಕುಪ್ಪನಹಳ್ಳಿ, ವರದಾಗಾಸಿಹಳ್ಳಿ, ಗಡಿ ಮಿಂಚೇನಹಳ್ಳಿ, ಯರ್ರನಾಗೇನಹಳ್ಳಿ, ಎಸ್.ಗುಡ್ಡುಹಳ್ಳಿ, ಎಸ್.ಕುರುಬರಹಳ್ಳಿ, ನಿಲುವರಾತ ಹಳ್ಳಿ, ಎಸ್.ದೇವನಹಳ್ಳಿ ಗ್ರಾಮದ ಎಸ್ಸಿ ಕಾಲೋನಿ ಮತ್ತಿತರ ಗ್ರಾಮಗಳಲ್ಲಿ ಸೀಕಲ್ ರಾಮಚಂದ್ರಗೌಅ ಅವರು ಅಬ್ಬರದ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಭಕ್ತರಹಳ್ಳಿ ಮಂಜುನಾಥ್, ಎಸ್. ದೇವಗಾನಹಳ್ಳಿ ಗ್ರಾಮದ ನಾಗರಾಜು, ರಾಮಪ್ಪ, ಶ್ರೀನಾಥ್, ವೆಂಕಟೇಶ್, ಶ್ರೀನಿವಾಸಪ್ಪ, ವೆಂಕಟಚಲಪತಿ, ಲೋಕೇಶ್, ಜಗದೀಶ್, ಬಾಬು ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES