Monday, December 23, 2024

ಬರಡಾಗಿದ್ದ ‘100ಕ್ಕೂ ಹೆಚ್ಚು ಕೆರೆ’ಗಳನ್ನು ತುಂಬಿಸಿದ್ದೇ ಬಿಜೆಪಿ : ಬೆಳ್ಳಿ ಪ್ರಕಾಶ್

ಚಿಕ್ಕಮಗಳೂರು : ಇಡೀ ಕಡೂರು ವ್ಯಾಪ್ತಿಯಲ್ಲಿ ಬರಡಾಗಿದ್ದ ಕೆರೆಗಳನ್ನು ತುಂಬಿಸಲು ನಮ್ಮ ಬಿಜೆಪಿ ಸರ್ಕಾರದಿಂದ ಸಹಕಾರಿಯಾಗಿದೆ ಎಂದು ಕಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ತಿಳಿಸಿದರು.

ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಸಂದರ್ಭದಲ್ಲಿ ಪವರ್ ವಿತ್ ಲೀಡರ್ ತಂಡದ ಜೊತೆ ಬೆಳ್ಳಿ ಪ್ರಕಾಶ್ ಅವರು ಮಾತನಾಡಿದರು.

ಅರೇ ಮಲ್ನಾಡು ಆಗಿದ್ದರಿಂದ ನೀರಾವರಿ ಸಮಸ್ಯೆ ಹೆಚ್ಚಾಗಿತ್ತು. ಕಳೆದ ಐದು ವರ್ಷಗಳಲ್ಲಿ ಸುಮಾರು100ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇ ಸಿಎಂ ಬಸವರಾಜ ಬೊಮ್ಮಾಯಿ ಸರಕಾರ. ಹಾಗಾಗಿ ಮತ್ತೊಮ್ಮೆ ನನ್ನನ್ನು ಕ್ಷೇತ್ರದ ಜನ ಬೆಂಬಲಿಸುತ್ತಾರೆ ಎಂದು ಬೆಳ್ಳಿ ಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಳ್ಳಿ ಪ್ರಕಾಶ್ ಗೆಲ್ಲೋದ್ರಲ್ಲಿ ಡೌಟೇ ಇಲ್ಲ

ಬೆಳ್ಳಿ ಪ್ರಕಾಶ್‌ ಆಪ್ತ ಕೊಪ್ಪಲು ಹನುಮಂತಪ್ಪ ಮಾತನಾಡಿ, ಕಡೂರು ವಿಧಾನಸಭಾ ಕ್ಷೇತ್ರದಲ್ಲಿರುವ ಬೀರೂರಿನ ರಾಜಾಜಿನಗರದಲ್ಲಿ ಕೆಲ ಸಮುದಾಯಕ್ಕೆ ನೆಲೆ, ಜಲ, ಸೂರು ಇರಲಿಲ್ಲ ಕಾರಣ ಹಿಂದಿನ ಶಾಸಕರು ಜನಾಂಗವನ್ನು ನಿರ್ಲಕ್ಷ್ಯ ಮಾಡಿದ್ದರು. ಆದರೆ, ತೆಲುಗು ಗೌಡ್ರು ಸಮುದಾಯವನ್ನು ಬೆಳ್ಳಿ ಪ್ರಕಾಶ್ ಒಪ್ಪಿಕೊಂಡು ಅಭಿವೃದ್ಧಿ ಮಾಡಿದ್ರು. ಹಾಗಾಗಿ ಮತ್ತೊಮ್ಮೆ ಬೆಳ್ಳಿ ಪ್ರಕಾಶ್ ಆರಿಸಿ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್ 70 ವರ್ಷಗಳಲ್ಲಿ ಕೇವಲ 7 ಏಮ್ಸ್ ನಿರ್ಮಿಸಿದೆ : ಪ್ರಧಾನಿ ನರೇಂದ್ರ ಮೋದಿ

26 ಹಳ್ಳಿಗಳಲ್ಲಿ ಮತಯಾಚನೆ

ಕಡೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಅವರು ಇಂದು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ವ್ಯಾಪ್ತಿಗೆ ಒಳಪಡುವ 26 ಹಳ್ಳಿಗಳಲ್ಲಿ ಮತಯಾಚನೆ ಮಾಡಲಿದ್ದಾರೆ.

ಕಡೂರಿನ ಬ್ಯಾಗೇಡಹಳ್ಳಿಯಿಂದ ಆರಂಭವಾದ ಚುನಾವಣಾ ಪ್ರಚಾರ ದಾಸರಹಟ್ಟಿ, ಜೋಡಿ ತಿಮ್ಮಾಪುರ, ಹೂವಿನಹಳ್ಳಿ, ಗಾಳಿಹಳ್ಳಿ, ಕೋಡಿಹಳ್ಳಿ, ದೇವರಹಳ್ಳಿ, ಹೆಚ್. ರಾಂಪುರ ಕೊನೆಗೆ ಹರಳಘಟ್ಟದಲ್ಲಿ ಅಂತ್ಯವಾಗಲಿದೆ.

RELATED ARTICLES

Related Articles

TRENDING ARTICLES