Sunday, December 22, 2024

ಬಿಜೆಪಿ ಬಿನ್ನಮತ, ಗುಂಪುಗಾರಿಕೆ ‘ಕೈ’ಗೆ ಲಾಭ : ಆನಂದ್ ನ್ಯಾಮಗೌಡ

ಬಾಗಲಕೋಟೆ : ರಾಜ್ಯದಲ್ಲಿ ವಿಧಾನ ಸಭಾಸಾರ್ವತ್ರಿಕ ಚುನಾವಣಾ ಮತದಾನಕ್ಕೆ ಇನ್ನೇನು 13 ದಿನ ಮಾತ್ರ ಬಾಕಿಯಿದ್ದು, ಚುನಾವಣಾ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಜಮಖಂಡಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮಗೌಡ ಅವರು ಕ್ಷೇತ್ರದಲ್ಲಿ ಅಬ್ಬರದ ಮತಬೇಟೆ ನಡೆಸುತ್ತಿದ್ದಾರೆ. ಜನರಿಂದ ಅವರಿಗೆ ಅಭೂತಪೂರ್ವ ಬೆಂಬಲ ಲಭಿಸುತ್ತಿದೆ.

ಇಂದು ಜಮಖಂಡಿ ನಗರದ ಅವಟಿಗಲ್ಲಿ ಸೇರಿದಂತೆ ವಾರ್ಡ್ ನಂಬರ್ 24, 25, 26ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಆನಂದ್ ನ್ಯಾಮಗೌಡ ಅವರು ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಸ್ಥಳೀಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಬಿಜೆಪಿಯಲ್ಲಿ ಗುಂಪುಗಾರಿಕೆ

ಈ ವೇಳೆ ಮಾತನಾಡಿರುವ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರು, ಜಮಖಂಡಿ ಕ್ಷೇತ್ರದ ಬಿಜೆಪಿಯಲ್ಲಿನ ಬಿನ್ನಮತ ಗುಂಪುಗಾರಿಕೆ ನಮಗೆ ಹೆಚ್ಚಿನ ಅಂತರ ಗೆಲುವು ಸಾಧಿಸಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ಮೊದಲ ಚುನಾವಣೆಯಲ್ಲೇ ನ್ಯಾಮಗೌಡಗೆ ಭರ್ಜರಿ ಗೆಲುವು

ಮುಸ್ಲಿಂ ಮುಖಂಡರ ಬೆಂಬಲ

ಜಮಖಂಡಿ ಮತಕ್ಷೇತ್ರದ ಮುಸ್ಲಿಂ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕ ಆನಂದ್ ನ್ಯಾಮಗೌಡ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಮುಸ್ಲಿಂ ಸಮುದಾಯದ ಮೀಸಲಾತಿ ಬಗ್ಗೆ ಬೇಸರಗೊಂಡಿರುವ ಮುಖಂಡರು ಕಾಂಗ್ರೆಸ್ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

ಆನಂದ್ ನ್ಯಾಮಗೌಡರಿಗೆ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು. ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಶಾಸಕ ಆನಂದ್ ನ್ಯಾಮಗೌಡ ಅವರಲ್ಲಿ ಗೆಲುವಿನ ಆತ್ಮ ವಿಶ್ವಾಸ ಇಮ್ಮಡಿಗೊಳಿಸಿದೆ.

RELATED ARTICLES

Related Articles

TRENDING ARTICLES