Monday, December 23, 2024

ಜೆಡಿಎಸ್ ಅಭ್ಯರ್ಥಿಗೆ ‘ದುಡ್ಡು ಕೊಟ್ಟ ಮತದಾರ’, ರಘು ಆಚಾರ್ ಗೆ ಆನೆ ಬಲ

ಚಿತ್ರದುರ್ಗ : ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಅವರಿಗೆ ಜನರೇ ದುಡ್ಡು ಕೊಟ್ಟು ಪ್ರೋತ್ಸಾಹಿಸುತ್ತಿದ್ದಾರೆ.

ಇಂದು ಮುಂಜಾನೆ ಒನಕೆ ಓಬವ್ವ ಸ್ಟೇಡಿಯಂಗೆ ಮತ ಯಾಚನೆಗೆ ತೆರಳುತ್ತಿದ್ದ ವೇಳೆ ಕೆಫೆ ಒಂದರಲ್ಲಿ ಕಾಫಿ ಕುಡಿಯುತ್ತಿದ್ದರು. ಅದೇ ಕೆಫೆಯಲ್ಲಿ ಕಾಫಿ ಕುಡಿಯುತ್ತಿದ್ದ ಜನರು ಜಿ.ರಘು ಆಚಾರ್ ಅವರನ್ನು ಆತ್ಮೀಯವಾಗಿ ಮಾತನಾಡಿಸಿದರು.

ಚಿತ್ರದುರ್ಗದಲ್ಲಿ ಕಮಿಷನ್ ದಂಧೆ ಹೆಚ್ಚಾಗಿದೆ, ಕಳಪೆ ಕಾಮಗಾರಿ ರಾರಾಜಿಸುತ್ತಿದೆ, ನೀವು ಎಂಎಲ್ ಸಿ ಆಗಿದ್ದಾಗ ಕಮಿಷನ್ ರಹಿತ ಸೇವೆ ಮಾಡಿದ್ದೀರಿ. ಹೀಗಾಗಿ ನಾವೇ ನಿಮಗೆ ದುಡ್ಡು ಕೊಟ್ಟು ಓಟನ್ನೂ ಕೊಡುತ್ತೇವೆ. ನಿಮ್ಮಂತವರು ಅಧಿಕಾರಕ್ಕೆ ಬರಬೇಕು ಎಂದು ಹೇಳಿ ಹಣ ಕೊಟ್ಟು ಪ್ರೋತ್ಸಾಹ ನೀಡಿದ್ದು, ಅಭ್ಯರ್ಥಿ ರಘು ಆಚಾರ್ ಗೆ ಆನೆ ಬಲ ಬಂದಂತಾಗಿದೆ.

ಇದನ್ನೂ ಓದಿ : ‘ದೇವೇಗೌಡ್ರು ಆಶೀರ್ವಾದ’ ಮಾಡಿ ಕಳುಹಿಸಿರೋನು ‘ನನ್ನ ಮಗ ಸ್ವರೂಪ್’ : ಭವಾನಿ ರೇವಣ್ಣ

ಚಿತ್ರದುರ್ಗದ ಪೌರಕಾರ್ಮಿಕರೊಂದಿಗೆ ಮಾತನಾಡಿ, ಸಿಗಬೇಕಾದ ಮೂಲಭೂತ ಅವಶ್ಯಕತೆಗಳನ್ನು ಅವಶ್ಯವಾಗಿ ಒದಗಿಸುತ್ತೇನೆ. ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ ಎಂದು ತಿಳಿಸಿದರು. ನನ್ನ ಅನಿಸಿಕೆಯಲ್ಲಿ ಇದೇ ಅಂತರಂಗ ಶುದ್ಧಿ. ಇದೇ ಬಹಿರಂಗ ಶುದ್ಧಿ ಎಂದು ಜಿ.ರಘು ಆಚಾರ್ ಹೇಳಿದರು.

ಚಿತ್ರದುರ್ಗ ಮತಕ್ಷೇತ್ರದ ಲಕ್ಷ್ಮಿಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಪುರ ಗ್ರಾಮ, ಸಾದರಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ಈ ಸಮಯದಲ್ಲಿ ಗ್ರಾಮದ ಜನರು ಆತ್ಮೀಯವಾಗಿ ಜಿ.ರಘು ಅವರನ್ನು ಸ್ವಾಗತಿಸಿದರು. ಗ್ರಾಮದ ಜನರು ತೋರಿಸಿದ ಪ್ರೀತಿಗೆ ಪುಳಕಿತರಾದರು.

RELATED ARTICLES

Related Articles

TRENDING ARTICLES