Monday, December 23, 2024

ನಾಳೆ ‘ಕೌರವ ಪಾಟೀಲ’ ಪರ ಕಿಚ್ಚ ಸುದೀಪ್ ಮತ ಬೇಟೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ತಾರಾ ಮೆರಗು ಬಂದಿದ್ದು, ಸ್ಯಂಡಲ್​ವುಡ್ ಖ್ಯಾತ ನಟ ಕಿಚ್ಚ ಸುದೀಪ್ ಅವರು ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಮತ ಬೇಟೆ ನಡೆಸುತ್ತಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರದಲ್ಲಿ ಕೇಸರಿ ಕಲಿಗಳ ಪರ ಪ್ರಚಾರ ನಡೆಸಿರುವ ಸುದೀಪ್ ನಾಳೆ ಕೌರವ ಪಾಟೀಲ ಅವರ ಪರ ಪ್ರಚಾರ ನಡೆಸಲಿದ್ದಾರೆ.

ಈ ಕುರಿತು ಮಾತನಾಡಿರುವ ಕೃಷಿ ಸಚಿವ ಹಾಗೂ ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ ಅವರು, ನಾಳೆ ಚಂದನವನದ ಜನಪ್ರಿಯ ನಟ, ಕನ್ನಡಿಗರ ಪ್ರೀತಿಯ ಸ್ವಾತಿಮುತ್ತು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚುನಾವಣಾ ಪ್ರಚಾರಕ್ಕಾಗಿ ಹಿರೇಕೆರೂರಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಹಿರೆಕೇರೂರು ಜನತೆ ‘ಮತ್ತೆ ಬಿಜೆಪಿಯನ್ನು ಗೆಲ್ಲಿಸುತ್ತಾರೆ’ : ಬಿ.ಸಿ.ಪಾಟೀಲ ವಿಶ್ವಾಸ

ನಾಳೆ ಶಂಕರ್ ರಾವ್ ವೃತ್ತದಿಂದ ಸರ್ವಜ್ಞ ವೃತ್ತದವರೆಗೆ ಹಮ್ಮಿಕೊಂಡಿರುವ ಬೃಹತ್ ರೋಡ್ ಶೋನಲ್ಲಿ ಸುದೀಪ್ ಅವರು ಭಾಗಿಯಾಗಲಿದ್ದಾರೆ. ಕ್ಷೇತ್ರದ ಜನರು, ಪಕ್ಷದ ಕಾರ್ಯಕರ್ತರು ಮತ್ತು ಸುದೀಪ್ ಅವರ ಎಲ್ಲ ಪ್ರೀತಿಯ ಸ್ನೇಹಿತರು ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಬಿ.ಸಿ ಪಾಟೀಲ ಅವರು ಮನವಿ ಮಾಡಿದ್ದಾರೆ.

ಬೀರುಸಿನ ಮತಯಾಚನೆ

ಬಿ.ಸಿ ಪಾಟೀಲ ಇಂದು ಕೂಡ ಬೀರುಸಿನ ಮತಯಾಚನೆ ಮುಂದಯವರೆಸಿದ್ದಾರೆ. ಹಿರೇಕೆರೂರ ಮತಕ್ಷೇತ್ರದ ಬುರುಡಿಕಟ್ಟಿ, ಆರೀಕಟ್ಟಿ ಗ್ರಾಮದಲ್ಲಿ ಪ್ರಚಾರ ಕಾರ್ಯಕೈಗೊಂಡರು. ಅಭೂತಪೂರ್ವ ಸ್ವಾಗತ ಕೋರಿದ ಗ್ರಾಮಸ್ಥರು ಬಿ.ಸಿ ಪಾಟೀಲ ಪರ ಜಯಘೋಷ ಕೂಗಿ ಮತ್ತೊಮ್ಮೆ ಬಿಸಿಪಿ ಎಂದರು.

ಇದೆ ವೇಳೆ ಮಾತನಾಡಿದ ಬಿ.ಸಿ ಪಾಟೀಲ, ರೈತರ ಹಿತ ಕಾಯಲು ನಾವು ಬದ್ಧರಾಗಿದ್ದೇವೆ. ಮೇ 10ರಂದು ಬಿಜೆಪಿ ಪಕ್ಷದ ಕಮಲದ ಗುರುತಿಗೆ ಮತ ನೀಡಿ, ನನ್ನನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಅವಕಾಶ ಮಾಡಿಕೊಡಿ ಎಂದು ಕೋರಿದರು.

RELATED ARTICLES

Related Articles

TRENDING ARTICLES