Wednesday, January 22, 2025

Abhi movie : ಅಪ್ಪು ಅಭಿನಯದ ಅಭಿ ಚಿತ್ರಕ್ಕೆ 20 ವರ್ಷ

ಪವರ್ ಸ್ಟಾರ್ ಪುನೀತ್​ ರಾಜ್​ ಕುಮಾರ್ ಅಭಿನಯದ ಅಭಿ ಚಿತ್ರ ಬಿಡುಗಡೆಯಾಗಿ 20 ವರ್ಷ ಆಗಿದೆ.ಮೋಹಕ ತಾರೆ ರಮ್ಯಾ ಅವರ ಮೊದಲ ಚಿತ್ರವೂ ಹೌದು, ಇದಕ್ಕೆ ಸಂತಸ ವ್ಯಕ್ತಪಡಿಸಿರುವ ರಮ್ಯಾ ನನ್ನ ಅಭಿಮಾನಿಗಳ ಹಾಗೂ ಹಿತೈಷಿಗಳ ನಿರಂತರ ಪ್ರೀತಿಗೆ ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ.ನನಗೆ ಅವಕಾಶ ಕೊಟ್ಟ ರಾಜ್ ಕುಟುಂಬಕ್ಕೆ ಸದಾ ಚಿರಋಣಿ ಮತ್ತು ನನ್ನ ಸಿನಿ ಪಯಣದಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.

ಹೌದು, ಇನ್ನೂ ರಮ್ಯಾ 20 ವರ್ಷಗಳ ಹಿಂದಿನ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾನದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನನ್ನ ಮೊದಲ ಸಿನಿಮಾ ಅಭಿ ರಿಲೀಸ್ ಆದಾಗಿನ ಫೋಟೋಗಳಿವು. ಈ ಫೋಟೋಗಳನ್ನು ತೆಗೆದ ಕ್ಷಣಗಳ ನೆನಪು ಇಂದಿಗೂ ಹಸಿರಾಗಿದೆ ಎಂದಿದ್ದಾರೆ.

ಎರಡನೇ ಫೋಟೋ ಚಿಕ್ಕಮಗಳೂರು ಶೂಟಿಂಗ್​ನ ಕೊನೆಯ ದಿನ ಕ್ಲಿಕ್ ಮಾಡಿದ್ದು. ಈ ನನ್ನ ಕಣ್ಣನೆ ಹಾಡಿಗಾಗಿ ನಾವು ಶೂಟಿಂಗ್​ ಮಾಡಿದ್ದೆವು ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.

ಮೂರನೇ ಫೋಟೋ ಸಿನಿಮಾದ ಪ್ರೈವೇಟ್ ಸ್ಕ್ರೀನಿಂಗ್ ನಂತರ ನನ್ನ ತಂದೆ ಆಯೋಜಿಸಿದ ಪಾರ್ಟಿಯದ್ದು ಎಂದು ಹೇಳಿದ್ದಾರೆ ರಮ್ಯಾ. ಅವರ ಫೋಟೋಗಳು ಅಭಿಮಾನಿಗಳನ್ನೂ ಹಳೆಯ ದಿನಗಳಿಗೆ ಕರೆದೊಯ್ದಿದೆ.

ನಾಲ್ಕನೇ ಫೋಟೋ ಸಿನಿಮಾ 100 ದಿನ ತಲುಪಿದ ಸಂಭ್ರಮದ್ದು. ಅಪ್ಪಾಜಿ ನನಗೆ ಮೊಮೆಂಟೋ ಕೊಟ್ಟರು. ಶೂಟಿಂಗ್​ನ ಮೊದಲ ದಿನ ನಾನು ನರ್ವಸ್ ಆಗಿ ಜೋರಾಗಿ ಅತ್ತಿದ್ದೆ. ಆದರೆ ಕೊನೆಯ ದಿನ ಆ ತಂಡದೊಂದಿಗೆ ತುಂಬಾ ಅಟ್ಯಾಚ್ಡ್ ಆಗಿ ಅಲ್ಲಿಂದ ಬರುವಾಗ ಅತ್ತಿದ್ದೆ ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.

ಈ ಸಿನಿಮಾ ಸಿನಿಮಾ 25 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತ್ತು. ಬಾಕ್ಸ್‌ ಆಫೀಸಿನಲ್ಲಿ ಉತ್ತಮ ಗಳಿಕೆ ಕೂಡಾ ಮಾಡಿತ್ತು.

RELATED ARTICLES

Related Articles

TRENDING ARTICLES