Friday, November 22, 2024

‘ನಾವೇನು ಹೆಬ್ಬೆಟ್ಟು ಎಂಎಲ್ಎ’ ಅಲ್ಲ : ಗೂಳಿಹಟ್ಟಿ ಶೇಖರ್ ಗುಡುಗು

ಹೊಸದುರ್ಗ : ನಾನೇನು ಹೆಬ್ಬೆಟ್ಟು ಎಂಎಲ್​ಎ ಅಲ್ಲ. ಅದಕ್ಕೆ ನಾನು ಸಿಡಿದೆಳಬೇಕಾಯ್ತು ಎಂದು ಹೊಸದುರ್ಗ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಚಾರದ ವೇಳೆ ‘ಪವರ್ ವಿತ್ ಲೀಡರ್’ ತಂಡದ ಜೊತೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಗೂಳಿಹಟ್ಟಿ ಶೇಖರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಅವಧಿಯಲ್ಲಿ ಯಡಿಯೂರಪ್ಪ ಸಿಎಂ ಆದಾಗ ನೀರಾವರಿ ಯೋಜನೆಗೆ ಅನುಮತಿ ನೀಡದಿದ್ದರೇ,  ನಮ್ ‘ತಾಯಣೆ’ ರಾಜೀನಾಮೆ ಕೊಡ್ತಿನಿ ಅಂತಾ ಹೇಳಿದ್ದೆ. ಇವನೊಬ್ಬ ಹುಚ್ಚ ಅಂತಾ ಪಟ್ಟ ಕಟ್ಟಿದ್ರು. ಆ ಸಮಯದಲ್ಲೇ ನನ್ನ ಮೇಲೆ ಟಾರ್ಗೆಟ್ ಫಿಕ್ಸ್ ಮಾಡಿದ್ರು ಎಂದು ಹೇಳಿದ್ದಾರೆ.

ಅಭಿವೃದ್ಧಿ ಹಠ ಹಿಡಿದಿದ್ದೆ ಮುಳುವಾಯ್ತು

ನನಗೆ ಟಿಕೆಟ್ ತಪ್ಪಲು ಅಭಿವೃದ್ಧಿ ಹಠ ಹಿಡಿದಿದ್ದೆ ಕಾರಣ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೈ ಕಟ್, ಬಾಯಿ ಮುಚ್ಚುವ ಎಂಎಲ್​ಎ ಬೇಕು, ನಾವೇನು ಹೆಬ್ಬೆಟ್ಟು ಎಂಎಲ್​ಎ ಅಲ್ಲ ಅದಕ್ಕೆ ಸಿಡಿದೆಳಬೇಕಾಯ್ತು ಎಂದು ಹೊಸದುರ್ಗ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ನನ್ನನ್ನು ಗೆಲ್ಲಿಸುವಂತೆ ‘ಕಣಿವೆ ಮಾರಮ್ಮ’ನಿಗೆ ಪ್ರಾರ್ಥಿಸಿದ್ದೇನೆ : ಗೂಳಿಹಟ್ಟಿ ಶೇಖರ್

ನಾನು ಯಾವುದೇ ಆಸ್ತಿ, ಪಾಸ್ತಿ ಮಾಡಿಲ್ಲ

ನಾನು ಸ್ವಚ್ಛಂದವಾಗಿ ಆಡಳಿತ ಮಾಡಿದ್ದೇನೆ. ಯಾವುದೇ ಆಸ್ತಿ, ಪಾಸ್ತಿ ಮಾಡಿಲ್ಲ. ಎಲ್ಲರೂ ಜಾತಿಗಳ ವ್ಯವಸ್ಥೆ ಮೇಲೆ ಮತ ಕೇಳ್ತಿದ್ದಾರೆ. ಆದ್ರೆ, ಎಲ್ಲರ ಮೈ ಮೇಲೆ ಹರಿಯುತ್ತಿರುವುದು ಒಂದೇ ರಕ್ತ. ಸಾಮಾಜಿಕ ನ್ಯಾಯದಲ್ಲಿ ಸೇವೆ ಮಾಡಲು ಅವಕಾಶ ಮಾಡಿಕೊಡಿ ಅಂತಾ ಎನ್.ಎನ್ ಕಟ್ಟೆ ಗ್ರಾಮಸ್ಥರ ಮುಂದೆ ಗೂಳಿಹಟ್ಟಿ ಶೇಖರ್ ಮತಯಾಚನೆ ಮಾಡಿದ್ದಾರೆ.

ಹೊಸದುರ್ಗ ತುಂಬಾ ಹಿಂದುಳಿದ ತಾಲೂಕು ಆಗಿರೋದ್ರಿಂದ ಸದನದಲ್ಲಿ ಅಭಿವೃದ್ಧಿಗಾಗಿ ಧ್ವನಿ ಎತ್ತುತ್ತಿದ್ದೆ. ಆದ್ರೆ, ಸರಕಾರದ ವಿರುದ್ಧ, ಪಕ್ಷದಲ್ಲಿ ಪ್ರಶ್ನೆ ಮಾಡಿದ್ದಕ್ಕಾಗಿಯೇ ನನಗೆ ಈಗ ಟಿಕೆಟ್ ನಿರಾಕರಿಸಲಾಗಿದೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES