Wednesday, January 22, 2025

ಎ.ಎಸ್ ಪಾಟೀಲ ನಡಹಳ್ಳಿ ಗೆಲ್ಲುವುದು ನಿಶ್ಚಿತ : ಬಿಹಾರ ಶಾಸಕ ಸಂಜಯಕುಮಾರ್ ಸಿಂಗ್

ವಿಜಯಪುರ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಎಸ್ ಪಾಟೀಲ ನಡಹಳ್ಳಿ ಅವರ ಪರವಾಗಿ ಬಿಹಾರದ ಲಾಲಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಂಜಯಕುಮಾರ್ ಸಿಂಗ್ ಅವರು ಮತ ಪ್ರಚಾರ ನಡೆಸಿದರು.

ಮುದ್ದೇಬಿಹಾಳ ಮತಕ್ಷೇತ್ರದ ಮುದ್ದೇಬಿಹಾಳ, ತಾಳಿಕೋಟೆ ಭಾಗದಲ್ಲಿ ಅಬ್ಬರದ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಮತ್ತೊಮ್ಮೆ ಆಶೀರ್ವದಿಸುವಂತೆ ಮನವಿ ಮಾಡಿದರು.

ನಡಹಳ್ಳಿ ಕೆಲಸವನ್ನು ಕೊಂಡಾಡುತ್ತಿದ್ದಾರೆ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಡಹಳ್ಳಿ ಅವರು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಜನತೆ ಕೊಂಡಾಡುತ್ತಿದ್ದಾರೆ. ಎಲ್ಲಿ ಹೋದರೂ, ಯಾರ ಬಾಯಿಂದ ಕೇಳಿದರೂ ನಡಹಳ್ಳಿ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವುದಾಗಿ ಹೇಳುತ್ತಿದ್ದಾರೆ ಎಂದರು.

ಇದನ್ನೂ ಓದಿ : ನಾಳೆ ‘ಕರುನಾಡಲ್ಲಿ ಯೋಗಿ’ ಹವಾ : ಸಕ್ಕರೆ ನಾಡಲ್ಲಿ ಕೇಸರಿ ಕಲಿಗಳ ಪರ ‘ಮತ ಶಿಕಾರಿ’

ಭಾರೀ ಅಂತರ ಗೆಲ್ಲುವುದು ನಿಶ್ಚಿತ

ಒಬ್ಬ ಸಮಾಜಸೇವಾ ಮನೋಭಾವದ ಜನಪ್ರತಿನಿಧಿಗೆ ನಡಹಳ್ಳಿ ಅವರು ಉತ್ತಮ ಉದಾಹರಣೆ ಆಗಿದ್ದಾರೆ. ಮುದ್ದೇಬಿಹಾಳದಲ್ಲಿ ಬಿಜೆಪಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಡಹಳ್ಳಿ ಅವರು ಮಾತನಾಡಿ, ತಮ್ಮ ಪರ ಪ್ರಚಾರ ನಡೆಸಿದ್ದಕ್ಕಾಗಿ ಸಂಜಯಕುಮಾರ್ ಸಿಂಗ್ ಅವರನ್ನು ಅಭಿನಂದಿಸಿದರು. ತಮ್ಮ ಹಿಂದಿ ಭಾಷೆ ಚೆನ್ನಾಗಿದ್ದು ಬಿಹಾರದ ಚುನಾವಣೆ ಸಂದರ್ಭ ಸಂಜಯಕುಮಾರ ಸಿಂಗ್ ಅವರ ಪರವಾಗಿ ಪ್ರಚಾರಕ್ಕೆ ಬರುವುದಾಗಿ ನಡಹಳ್ಳಿಯವರು ಭರವಸೆ ನೀಡಿದರು.

RELATED ARTICLES

Related Articles

TRENDING ARTICLES