Sunday, December 29, 2024

ವೀಲಿಂಗ್ ಮಾಡುತ್ತಿದ್ದವನಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಶಿವಮೊಗ್ಗ: ರಸ್ತೆಯಲ್ಲಿ ವೀಲಿಂಗ್ ಮಾಡುವುದು ಇಂದಿನ ಯುವಕರಿಗೆ ಟ್ರೇಂಡ್‌ ಆಗಿ ಹೋಗಿದೆ,ಅಂದ್ರೆ ಅದೇ ಅವರಿಗೆ ಮಾರಕ ಕೂಡವಾಗಬಹುದು.ಇಂತಹ ಪುಂಡರ ಹರಸಾಹಸಕ್ಕೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.

ಹೌದು, ಪೊಲೀಸರ ಮುಂದೆಯೇ ವೀಲಿಂಗ್ ಮಾಡುತ್ತಿದ್ದವನಿಗೆ ಬಿಸಿ ಮುಟ್ಟಿಸಿ, 2 ವರೆ ಸಾವಿರ ರೂ. ದಂಡ ಹಾಕಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಇನ್ನೂ ತನ್ನ ಸ್ನೇಹಿತನಿಗೆ ಹಿಂದೆ ಕೂರಿಸಿಕೊಂಡು ವೀಲಿಂಗ್ ಮಾಡಿದ್ದ ಯುವಕನ ಹೆಸರು ಜುಲ್ಫ್ (18) ಈತ ಸಂಚಾರಿ ಪೂರ್ವ ಪೊಲೀಸರು ನಗರ ರೌಂಡ್ಸ್ ಮಾಡುತ್ತಿದ್ದ ವೇಳೆ ಇವರ ಎದುರಿನಲ್ಲೇ ವೀಲಿಂಗ್ ಮಾಡಿ ತನ್ನ ಮಂಗಾಟ ಪ್ರದರ್ಶಿಸಿದ್ದಾನೆ. ಈ ವೇಳೆ ಅವನನ್ನು ಫಾಲೋ ಮಾಡಿದ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೈಕ್ ಮತ್ತು ವೀಲಿಂಗ್ ಮಾಡಿದ್ದ ಯುವಕ ಜುಲ್ಫ್ ನಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಹಲವು ಬಾರಿ ವೀಲಿಂಗ್ ಮಾಡಿದ್ದ ವಿಡಿಯೋಗಳು ಆತನ ಮೊಬೈಲ್ ನಲ್ಲಿ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಜುಲ್ಫ್ ವಿರುದ್ಧ IMA ACT ಅಡಿಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಾಲನೆ, ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸಿದ್ದಕ್ಕೆ, ಹಾಗೂ ಡಿ.ಎಲ್. ಇಲ್ಲದೇ ಇರುವುದಕ್ಕೆ 2 ವರೆ ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿ ಪೊಲೀಸರು ಕಳುಹಿಸಿದ್ದಾರೆ.

ಕಾರ್ ಮೆಕ್ಯಾನಿಕ್ ಆಗಿರುವ ಜುಲ್ಫ್ ತಂದೆ ಮನವಿ ಮೇರೆಗೆ ಬಿಟ್ಟು ಕಳಿಸಲಾಗಿದ್ದು, ಮತ್ತೊಮ್ಮೆ ವೀಲಿಂಗ್ ಮಾಡುವುದಿಲ್ಲ ಎಂದು ಪೊಲೀಸರ ಮುಂದೆ ಜುಲ್ಫ್ ತಪ್ಪೊಪ್ಪಿಕೊಂಡಿದ್ದಾನೆ.

RELATED ARTICLES

Related Articles

TRENDING ARTICLES