Wednesday, January 22, 2025

ಶಿಡ್ಲಘಟ್ಟದಲ್ಲಿ ‘ಕೈ’ಗೆ ಶಾಕ್ : ಸೀಕಲ್ ರಾಮಚಂದ್ರಗೌಡ್ರೇ ನಮ್ಮ ಲೀಡರ್ ಎಂದ ಕಾಂಗ್ರೆಸ್ ಬೆಂಬಲಿಗರು

ಬೆಂಗಳೂರು : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ದಿನೇ ದಿನೆ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರ ವರ್ಚಸ್ಸು ಹೆಚ್ಚಾಗುತ್ತಿದೆ. ಅವರ ಜನಪರ ಸೇವೆ ಮೆಚ್ಚಿ ಕಾಂಗ್ರೆಸ್ ಹಾಗೂ ಜೆಡಿಎಸ್​ ಪಕ್ಷದ ನೂರಾರು ಕಾರ್ಯಕರ್ತರು, ಬೆಂಬಲಿಗರು ಬಿಜೆಪಿಗೆ ಬೆಂ’ಬಲ’ ನೀಡುತ್ತಿದ್ದಾರೆ.

ಹೌದು, ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡರೇ ಇನ್ನುಮುಂದೆ ನಮ್ಮ ನಾಯಕರು ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಬೆಂಬಲಿಗರು ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಶಿಡ್ಲಘಟ್ಟ ನಗರದ ಸೇವಾಸೌಧದಲ್ಲಿ ಕ್ಷೇತ್ರ ವ್ಯಾಪ್ತಿಯ ಮಳಮಾಚನ ಹಳ್ಳಿ ಗ್ರಾಮದ ಹಲವಾರು ಗ್ರಾಮಸ್ಥರು ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡ ಮತ್ತು ಮಾಜಿ ಶಾಸಕರಾದ ಎಂ ರಾಜಣ್ಣ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ‘ಕೈ’ ಬಿಟ್ಟು ‘ಕಮಲ’ ಹಿಡಿದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡರ ಬೆಂಬಲಿಗರು ಮತ್ತು ಮುಖಂಡರು ಆದ ರವಿಕುಮಾರ್ ಎಂ ಮಳಮಾಚನಹಳ್ಳಿ (ಅಖಿಲ ಕರ್ನಾಟಕ ವಕೀಲರ ಸಂಘದ ತಾಲೂಕು ಅಧ್ಯಕ್ಶರು) ಅವರ ನೇತೃತ್ವದಲ್ಲಿ ಪಕ್ಷ ಸೇರಿದ್ದಾರೆ. ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ ರಾಜಣ್ಣ ಮತ್ತು ಕನಕ ಪ್ರಸಾದ್ ಅವರು ಎಲ್ಲರಿಗೂ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.

ಇದನ್ನೂ ಓದಿ : ನಿಮ್ಮ ‘ಕೈ’ ಕೆಸರಿನಲ್ಲಿ ನಮ್ಮ ‘ಕಮಲ’ ಅರಳಿಸಿ : ಸೀಕಲ್ ರಾಮಚಂದ್ರಗೌಡ

ಸ್ವಯಂ ಪ್ರೇರಿತವಾಗಿ ಪಕ್ಷ ಸೇರ್ಪಡೆ

ಮುತ್ತೂರು ಜಯಚಂದ್ರ, ದೇವೇನಹಳ್ಳಿ ನಂಜೇಗೌಡ (ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರು), ದೇವೇಗೌಡ, ದೇವರಾಜ್, ರತನ್, ವೆಂಕ್ಟೇಶ ಸಿ ಎಂ, ನರಸಿಂಹಪ್ಪ , ವೆಂಕಟೇಶ್ ವಿ ಮತ್ತು ಅವರ ಬೆಂಬಲಿಗರು ಸ್ವಯಂ ಪ್ರೇರಿತವಾಗಿ ಪಕ್ಷ ಸೇರ್ಪಡೆಯಾದರು.

ಕೊತ್ತನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಚ್ಚಹಳ್ಳಿಯಲ್ಲಿ ಗ್ರಾಮದಲ್ಲಿ ಹಲವಾರು ಗ್ರಾಮಸ್ಥರು ಬಿಜೆಪಿಗೆ ಸೇರ್ಪಡೆಗೊಂಡರು. ದೇವರಾಜ್, ಸತೀಶ್, ರಾಜ್ಕುಮಾರ್, ಗೋವಿಂದಪ್ಪ, ಅಶ್ವಥಪ್ಪ, ರಾಜಗೋಪಾಲ್, ನಾರಾಯಣ ಸ್ವಾಮಿ, ತಿಮ್ಮಯ್ಯ, ವೆಂಕಟರಮಣಪ್ಪ, ಲಕ್ಷ್ಮಣ, ರಾಮಚಂದ್ರಪ್ಪ, ಶ್ರೀನಿವಾಸ್, ರಾಧಾಕೃಷ್ಣ, ಶಾಂತಪ್ಪ, ಗಂಗಪ್ಪ, ದ್ಯಾವಪ್ಪ, ವೆಂಕಟೇಶ್, ವೆಂಕಟರಾಜ್ ಹಾಗೂ 60ಕ್ಕೂ ಹೆಚ್ಚು ಜನ ಅನ್ಯ ಪಕ್ಷಗಳನ್ನು ತೊರೆದು ಕಮಲ ಹಿಡಿದಿದ್ದಾರೆ.

RELATED ARTICLES

Related Articles

TRENDING ARTICLES