Monday, December 23, 2024

ಬೆಳಗಾವಿ ಜಿಲ್ಲೆಯಲ್ಲಿ ಸಿಎಂ ಬೊಮ್ಮಾಯಿ ಭರ್ಜರಿ ಪ್ರಚಾರ 

ಬೆಳಗಾವಿ: ಎಲೆಕ್ಷನ್​ಗೆ ಕೌನ್​ಡೌನ್ ಶುರುವಾಗಿದ್ದು, ಪ್ರಚಾರದ ಭರಾಟೆ ಜೋರಾಗಿದೆ. ತಾ ಮುಂದು ನಾ ಮುಂದು ಎನ್ನುವುವಂತೆ ಚುನಾವಣಾ ಅಖಾಡಕ್ಕೆ ರಾಜಕೀಯ ನಾಯಕರು ಕಣಕ್ಕೆ ಇಳಿಯುತ್ತಿದ್ದಾರೆ.

ಹೌದು,ಸಿಎಂ ಬೊಮ್ಮಾಯಿ ಇಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರಚಾರ ಆರಂಭಿಸಲಿದ್ದು, ವಿವಿಧ ಕ್ಷೇತ್ರದಲ್ಲಿ ಇವತ್ತು ಒಂದೇ ದಿನ 6 ಕಡೆ ರೋಡ್ ಶೋ ,ಸಾರ್ವಜನಿಕ ಸಭೆ ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಮತಬೇಟೆ ಮಾಡಲಿದ್ದಾರೆ.

ಹೀಗಿದೆ ಸಿಎಂ ಬೊಮ್ಮಾಯಿ ಪ್ರಚಾರದ ಶೆಡ್ಯೂಲ್ 

  • ಇಂದು ಮಧ್ಯಾಹ್ನ1ಕ್ಕೆ ಕಿತ್ತೂರು ಮತಕ್ಷೇತ್ರದಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆ.
    ಅಭ್ಯರ್ಥಿ ಮಹಾಂತೇಶ್ ದೊಡ್ಡಗೌಡರ ಪರ ಪ್ರಚಾರ.
  • 2:30 ಕ್ಕೆ ಖಾನಾಪೂರ ಕ್ಷೇತ್ರದಲ್ಲಿ ರೋಡ ಶೋ ಹಾಗೂ ಸಾರ್ವಜನಿಕ ಸಭೆ.ಅಭ್ಯರ್ಥಿ ವಿಠ್ಠಲ ಹಲಗೇಕರ್ ಪರ ಮತ ಬೇಟೆ.
  • ಸಂಜೆ 4 ಗಂಟೆಗೆ ಗ್ರಾಮೀಣ ಮತಕ್ಷೇತ್ರದ ಬಾಗೇವಾಡಿವಾಡಿಯಲ್ಲಿ ರೋಡ್ ಶೊ ಸಾರ್ವಜನಿಕ ಸಭೆ.ಅಭ್ಯರ್ಥಿ ನಾಗೇಶ್ ಮನ್ನೊಳ್ಕರ್ ಪರ ಮತ ಬೇಟೆ.
  • ಬಳಿಕ ಬೆಳಗಾವಿ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆ.ಉತ್ತರ ಅಭ್ಯರ್ಥಿ ಡಾ. ರವಿ ಪಾಟೀಲ್, ದಕ್ಷಿಣ ಅಭ್ಯರ್ಥಿ ಅಭಯ್ ಪಾಟೀಲ್ ಪರ ಮತ ಬೇಟೆ
  • ಸಂಜೆ 7 ಕ್ಕೆ ಬೈಲಹೊಂಗಲದಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆ.ಅಭ್ಯರ್ಥಿ ಜಗದೀಶ್ ಮೆಟಗುಡ್ಡ ಪರ ಪ್ರಚಾರ
  • 8:30 ಕ್ಕೆ ಸವದತ್ತಿ ಕ್ಷೇತ್ರದಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆ. ಅಭ್ಯರ್ಥಿ ರತ್ನಾ ಮಾಮನಿ ಪರ ಪ್ರಚಾರ

ಸಭೆ ಮುಕ್ತಾಯ ಬಳಿಕ ಸಿಎಂ ಬೊಮ್ಮಾಯಿ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿ ಗೆ ತೆರಳಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

RELATED ARTICLES

Related Articles

TRENDING ARTICLES