Sunday, December 22, 2024

ಚಿತ್ರದುರ್ಗದ ಅಖಾಡದಲ್ಲಿ 76 ಅಭ್ಯರ್ಥಿಗಳು : ಕೋಟೆನಾಡು ‘ಕಬ್ಜ’ ಮಾಡೋದು ಯಾರು?

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣಾ ಕಾವು ಜೋರಾಗಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ 76 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಜಿಲ್ಲೆಯ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳಲ್ಲಿ 98 ನಾಮಪತ್ರಗಳು ಸಲ್ಲಿಕೆಯಾಗಿ ಅದರಲ್ಲಿ ಎಂಟು ನಾಮಪತ್ರಗಳು ಅಸಿಂಧು ಆಗಿದ್ದವು. ಏಪ್ರಿಲ್ 24ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದ್ದು, ಅದರಂತೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ‌ ಒಟ್ಟು 90 ಅಭ್ಯರ್ಥಿಗಳಲ್ಲಿ 14 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ.

ನಾಮಪತ್ರಗಳು ಹಿಂಪಡೆದವರು

ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ 76 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ

ಜಿ ತಿಪ್ಪೇಸ್ವಾಮಿ,

ಸುಜಯ್ ಕುಮಾರ್

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ

ಕಮ್ರಾನ್‌ ಆಲಿ ಕೆ.ಎಸ್

ಟಿ.ಕೆ ಬಸವರಾಜು

ಹಿರಿಯೂರು ವಿಧಾನಸಭಾ ಕ್ಷೇತ್ರ

ಬಿ.ಸುಧಾಕರ್

ಆರ್ ಧನು

ಹೊಸದುರ್ಗ ವಿಧಾನಸಭಾ ಕ್ಷೇತ್ರ

ಬಿ ಶಿವರುದ್ರಪ್ಪ

ಎ.ಎಸ್ ಮಂಜುನಾಥ್

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ

ನಿರಂಜನ ಎ.ಡಿ

ಜಿ.ಇ ಉಮಾಪತಿ

ತಿಪ್ಪೇಸ್ವಾಮಿ ಟಿ

ಆಂಜನೇಯ

ಅಪ್ಪಾಜಿ ಎ ಚೆನ್ನಬಸವಣ್ಣ

ಹನುಮಂತಪ್ಪ ಬಿ

ಇದನ್ನೂ ಓದಿ : ನನ್ನನ್ನು ಗೆಲ್ಲಿಸುವಂತೆ ‘ಕಣಿವೆ ಮಾರಮ್ಮ’ನಿಗೆ ಪ್ರಾರ್ಥಿಸಿದ್ದೇನೆ : ಗೂಳಿಹಟ್ಟಿ ಶೇಖರ್

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ತಿಪ್ಪೇಸ್ವಾಮಿ, ಕಾಂಗ್ರೆಸ್​ನ ಎನ್.ವೈ.ಗೋಪಾಲ ಕೃಷ್ಣ, ಜೆಡಿಎಸ್​ನ ವೀರಭದ್ರಪ್ಪ, ಬಹುಜನ ಸಮಾಜವಾದಿ ಪಕ್ಷದ ಎಂ.ಓ. ಮಂಜುನಾಥ ಸ್ವಾಮಿ ನಾಯಕ, ಎಎಪಿಯ ಎಸ್.ಟಿ.ಹರೀಶ್ ನಾಯಕ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಲ್ಲಿಕಾರ್ಜುನ, ಪಕ್ಷೇತರ ಅಭ್ಯರ್ಥಿಗಳಾದ ಎನ್.ಮಲ್ಲಯ್ಯ ಸ್ವಾಮಿ, ಓ.ಗೋವಿಂದ, ಕೆ.ಪಿ.ಹರೀಶ್ ಕುಮಾರ್, ಟಿ.ಶಶಿಕುಮಾರ್ ಸೇರಿದಂತೆ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅನಿಲ್ ಕುಮಾರ್.ಆರ್, ಎಎಪಿಯ ಮಾರಕ್ಕ, ಕಾಂಗ್ರೆಸ್​ನ ಟಿ.ರಘುಮೂರ್ತಿ, ಜೆಡಿಎಸ್​ನ ರವೀಶ್‍ಕುಮಾರ್.ಎಂ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಭೂಜರಾಜ.ಸಿ, ಪಕ್ಷೇತರ ಅಭ್ಯರ್ಥಿಗಳಾದ ಅಂಜಮ್ಮ, ಕೆ.ಟಿ.ಕುಮಾರಸ್ವಾಮಿ ಅಖಾಡದಲ್ಲಿದ್ದಾರೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿಯ ಬಿ.ಈ.ಜಗದೀಶ್,  ಬಿಜೆಪಿಯ ಜಿ.ಹೆಚ್.ತಿಪ್ಪಾರೆಡ್ಡಿ,  ಬಹುಜನ ಸಮಾಜ ಪಕ್ಷದ ಪ್ರಕಾಶ್.ಎನ್, ಜೆಡಿಎಸ್​ನ ಜಿ.ರಘು ಆಚಾರ್, ಕಾಂಗ್ರೆಸ್ ನ ಕೆ.ಸಿ.ವೀರೇಂದ್ರ ಪಪ್ಪಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಂ.ಟಿ.ಚಂದ್ರಣ್ಣ, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕರ ಪಕ್ಷದ ಜಿ.ಎಸ್.ನಾಗರಾಜು, ಸಮಾಜವಾದಿ ಪಕ್ಷದ ಎನ್.ಮಂಜಪ್ಪ, ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್.ವಿಜಯ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಬಾಳೇಕಾಯಿ ಶ್ರೀನಿವಾಸ.ಹೆಚ್, ಪಕ್ಷೇತರ ಅಭ್ಯರ್ಥಿಗಳಾದ ಗಣೇಶ್, ಆರ್.ಗೋಪಿನಾಥ್, ಜಿ.ಚಿತ್ರಶೇಖರಪ್ಪ, ಪಿ.ಎಸ್.ಪುಟ್ಟಸ್ವಾಮಿ(ಸ್ವಾಮಿ), ಎಂ.ಎ.ಬಸವರಾಜು, ಭೂತರಾಜ.ವಿ.ಎಸ್, ಮೋಹನ್ ಕಮಾರ್.ಆರ್, ಎಂ.ಹೆಚ್.ಶಶಿಧರ್, ಸುರೇಶ್.ಎನ್, ಸೌಭಾಗ್ಯ ಬಸವರಾಜನ್, ಡಾ.ಹೆಚ್.ಕೆ.ಎಸ್.ಸ್ವಾಮಿ ಸೇರಿದಂತೆ ಒಟ್ಟು 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ದಕ್ಷಿಣಕಾಶಿಯಲ್ಲಿ ತ್ರಿಕೋನ ಸ್ಪರ್ಧೆ?

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಡಿ.ಸುಧಾಕರ್, ಬಿ.ಎಸ್.ಪಿಯ ಎನ್.ರಂಗಸ್ವಾಮಿ, ಎಎಪಿಯ ಕೆ.ಟಿ.ತಿಪ್ಪೇಸ್ವಾಮಿ, ಬಿಜೆಪಿಯ ಕೆ.ಪೂರ್ಣಿಮಾ, ಜೆಡಿಎಸ್​ನ ಎಂ.ರವೀಂದ್ರಪ್ಪ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ವಿನಯ್.ಎಸ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ)ದ ಬಿ.ಪುಟ್ಟಲಿಂಗಪ್ಪ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹೆಚ್.ಮಹೇಶ್, ಉತ್ತಮ ಪ್ರಜಾಕೀಯ ಪಕ್ಷದ ಈ.ಪಾತಲಿಂಗಪ್ಪ, ಪಕ್ಷೇತರ ಅಭ್ಯರ್ಥಿಗಳಾದ ರಂಗಯ್ಯ.ಎನ್, ಎನ್.ಓ.ರಂಗಸ್ವಾಮಿ, ಬಿ.ಶಶಿಕಲ ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಬಿ.ಜಿ.ಗೋವಿಂದಪ್ಪ, ಜೆಡಿಎಸ್​ನ ತಿಪ್ಪೇಸ್ವಾಮಿ.ಎಂ, ಬಹುಜನ ಸಮಾಜ ಪಕ್ಷದ ತಿಮ್ಮಪ್ಪ.ಕೆ, ಎಎಪಿಯ ರಾಜು.ಎನ್.ವಿ, ಬಿಜೆಪಿಯ ಎಸ್.ಲಿಂಗಮೂರ್ತಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೆ.ಆರ್.ಎಸ್ ತನು ಚಿಕ್ಕಣ ಯಾದವ್, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಕುಮಾರ್ ಎಸ್ ತುಂಬಿನಕೆರೆ, ಪಕ್ಷೇತರ ಅಭ್ಯರ್ಥಿಗಳಾದ ಬಿ.ಗೀತಾಂಜಲಿ, ಗೂಳಿಹಟ್ಟಿ ಡಿ ಶೇಖರ್, ಜಂಗಮ ಸತೀಶ ಬನಸಿಹಳ್ಳಿ, ಡಿ.ಪಾಂಡುರಂಗ ಗರಗ್, ಟಿ.ಮಂಜುನಾಥ, ಶೇಖರ್ ನಾಯ್ಕ್.ಎಂ.ಆರ್. ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಹೆಚ್.ಆಂಜನೇಯ, ಜೆಡಿಎಸ್​ನ ಎಸ್.ಆರ್.ಇಂದ್ರಜಿತ್ ನಾಯ್ಕ್, ಬಿಜೆಪಿಯ ಎಂ.ಚಂದ್ರಪ್ಪ, ಬಹುಜನ ಸಮಾಜ ಪಕ್ಷದ ಕೆ.ಎನ್.ದೊಡ್ಡಟ್ಟೆಪ್ಪ, ಎಎಪಿಯ ಮಾಹಂತೇಶ್.ಸಿ.ಯು, ಸಮಾಜವಾದಿ ಪಕ್ಷದ ಪಿ.ಎಸ್.ಜಯಪ್ಪ, ಜೈ ಮಹಾಭಾರತ್ ಪಕ್ಷದ ಪ್ರಕಾಶ್.ಹೆಚ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಂ.ಎಸ್.ರಘುವೀರ ವರ್ಮಾ, ಉತ್ತಮ ಪ್ರಜಾಕೀಯ ಪಕ್ಷದ ರಾಜು.ಈ, ಪಕ್ಷೇತರರಾದ ಡಾ.ಎಲ್.ಜಯಸಿಂಹ, ಮಂಜುನಾಥ.ಟಿ, ಮಹೇಶ್ ಕುಮಾರ್.ಎಂ.ಪಿ, ಹನುಮತಪ್ಪ.ಡಿ ಸೇರಿದಂತೆ 13 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ಒಟ್ಟಾರೆಯಾಗಿ ಚಿತ್ರದುರ್ಗ ಆರು ಕ್ಷೇತ್ರಗಳಲ್ಲಿ ಹೊಳಲ್ಕೆರೆ 13, ಹೊಸದುರ್ಗ 13,ಹಿರಿಯೂರು 12 , ಮೊಳಕಾಲ್ಮೂರು 10, ಚಿತ್ರದುರ್ಗ 21, ಚಳ್ಳಕೆರೆ 07, ಒಟ್ಟು 76 ಅಭ್ಯರ್ಥಿಗಳು ಕಣದಲ್ಲಿದ್ದು, ಯಾವ ಪಕ್ಷ ಕೋಟೆನಾಡನ್ನು ಕಬ್ಜ ಮಾಡಲಿದೆ ಎಂದು ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES