Friday, January 3, 2025

Children Health: ಮಕ್ಕಳಿಗೆ ಕಾಫಿ ಟೀ ಕೊಡುವ ಮುನ್ನ ಇರಲಿ ಎಚ್ಚರ..!

ಈ ಜಗತ್ತು ಹೆಚ್ಚು ಆಧುನಿಕವಾಗಿ ಬದಲಾಗ್ತಾ ಇದ್ದ ಹಾಗೆ ಮಾನವನ ಆಹಾರ ಪದ್ಧತಿಯಲ್ಲಿ ಕೂಡ ಹೆಚ್ಚು ಬದಲಾವಣೆಗಳು ಕಂಡು ಬರ್ತಾ ಇದೆ. ಅದ್ರಲ್ಲೂ ಪ್ರಮುಖವಾಗಿ ಇತ್ತರೀಚೆಗಿನ ದಿನಗಳಲ್ಲಿ ಆಹಾರಕ್ಕೆ ಬಳಸಲಾಗುವ ರಾಸಾಯನಿಕಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಲಭ್ಯವಾಗ್ತಾ ಇದ್ದ, ಇದು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನ ಬೀರೋದಕ್ಕೆ ಶುರು ಮಾಡಿದೆ. ಇಂತಹ ಆಹಾರ ಸೇವನೆಯನ್ನು ಮಕ್ಕಳು ಮಾಡುವುದರಿಂದ ಅವರ ಮೇಲೂ ಕೆಟ್ಟ ಪರಿಣಾಮ ಬಿರುತ್ತದೆ. ಅದ್ರಲ್ಲೂ ಮಕ್ಕಳಿಗೆ ಕಾಫಿ ಟೀ ಅಂದ್ರೆ ತುಂಬನೇ ಇಷ್ಟ… ಆರೋಗ್ಯ ಕೂಡ ಅಷ್ಟೇ ತೊಂದರೆ.

ಹೌದು, ಕಾಫಿ ಪುಡಿಗಳಿಗೆ ಬೆರೆಸಕಲಾಗುವ ಕೊಕೊ ಪೌಡರ್,​ ಚಕೋ ಪೌಡರ್​ಗಳು ಮಾನವನ ಆರೋಗ್ಯವನ್ನ ಸಂಫೂರ್ಣವಾಗಿ ಹದಗಡಿಸುತ್ತಿದೆ. ಇನ್ನು ಟೀಗಳಲ್ಲಿರುವ ಕ್ಯಾಟಚಿನ್ಸ್ (catechins), ಹಾಗು ಆ್ಯಂಟಿಆಕ್ಸಿಡೆಂಟ್​ ಕೂಡ ಅಷ್ಟೊಂದು ಉತ್ತಮವಲ್ಲ, ಆದ್ರೂ ಕೂಡ ಟೀ ಸಾಕಷ್ಟು ಜನರ ಆರೋಗ್ಯ ಟೀ ಕಾಫಿಯ ಸೇವನೆಯಿಂದಲೇ ಹಾಳಗುತ್ತಿದೆ.ನ ಇನ್ನೂ ಮಕ್ಕಳು ಸೇವನೆ ಮಾಡುವುದರಿಂದ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆಗಿದ್ದರೆ ಕಾಫೀ ಟೀ ಕುಡುಯುವುದರಿಂದ ಏನೆಲ್ಲಾ ಪ್ರಭಾವ ಮಕ್ಕಳ ಮೇಲೆ ಬೀರುತ್ತದೆ ಎಂಬುವುದನ್ನು ನೋಡೋಣ ಬನ್ನಿ….

ಟೀ, ಕಾಫಿ ಮಕ್ಕಳಿಗೆ ನೀಡಿದ್ರೆ ಏನಾಗುತ್ತದೆ…?

  1. ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ.
  2. ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
  3. ಕೆಫಿನ್​ ಅಂಶಗಳಿರುವ ಕಾಫಿ, ಟೀ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ, ಗ್ಯಾಸ್ಟ್ರಿಕ್​, ಹೊಟ್ಟೆಯುಬ್ಬರದಂತಹ ಅನಾರೋಗ್ಯ ಉಂಟಾಗುತ್ತದೆ.
  4. ಕ್ಯಾಲ್ಸಿಯಂ ಕೊರತೆ:
  5.  ನರಕೋಶಗಳ ಸಾಮರ್ಥ್ಯವನ್ನು ತಗ್ಗಿಸುತ್ತದೆ
  6. ಹೃದಯ ಸ್ತಂಭನದವಂತಹ ಕಾಯಿಲೆಗೆ ಆಹ್ವಾನವಾಹುತ್ತದೆ.

 ಹೀಗಿರಬೇಕು ಅವರ ಆಹಾರ ಪದ್ಧತಿ 

ಇನ್ನೂ ಬೆಳೆಯುತ್ತಿರುವ ಮಕ್ಕಳಿಗೆ ಅಗತ್ಯವಾಗಿ  ನೀಡಬೇಕಾದ ಆಹಾರಗಳು, ಸಿಹಿಯಾದ,  ಹುಳಿ, ಉಪ್ಪು, ಕರ ಮಸಾಲೆಯುಕ್ತ ಪದಾರ್ಥಗಳು, ಪ್ಯಾಕೇಜ್ ಮಾಡಿದ ಆಹಾರವನ್ನು ತಪ್ಪಿಸಿಬೇಕು. ಮಕ್ಕಳ ಅಭಿರುಚಿ ಹಾಗೂ ಹಸಿವನ್ನು ಗುರುತಿಸಬೇಕು. ಮಕ್ಕಳನ್ನು ಆಹಾರ ತಿನ್ನುವಂತೆ ಒತ್ತಾಯಿಸಬಾರದು. ಅದ್ರಲ್ಲೂ ಮಕ್ಕಳಿಗೆ ಟೀ ಅಥವಾ ಕಾಫಿಯ ಅಭ್ಯಾಸ ಮಾಡಿಸಿದ್ದರೆ ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆಯೇ ಸರಿ.ಅದರಿಂದ ಅವರಿಗೆ ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರ ನೀಡಬೇಕು..

RELATED ARTICLES

Related Articles

TRENDING ARTICLES