ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಇಂದಿನಿಂದ ಆರಂಭಿಸಿದೆ. ಈ ಹಿಂದೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಏಪ್ರಿಲ್ 21 ರಂದೇ ಆರಂಭಿಸುವುದಾಗಿ ಮಂಡಲಿ ಹೇಳಿತ್ತು. ಆದರೆ ಕಾರಣಾಂತರಗಳಿಂದ ಏಪ್ರಿಲ್ 24 ರಿಂದ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭ ಮಾಡಿದೆ.
ಹೌದು,ಈ ಬಾರಿ SSLC ವಾರ್ಷಿಕ ಪರೀಕ್ಷೆಗೆ 8.60 ಲಕ್ಷವಿದ್ಯಾರ್ಥಿಗಳು ನೋಂದಯಿಸಿಕೊಂಡಿದ್ದರು. ಈ ಬಾರಿ ಒಟ್ಟು 236 ಕೇಂದ್ರಗಳಲ್ಲಿ 8.42 ಲಕ್ಷ ವಿದ್ಯಾರ್ಥಿಗಳ 50 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಇಂದಿನಿಂದ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮಾಹಿತಿ ನೀಡಿದೆ.
ಎಸ್ಎಸ್‌ಎಲ್‌ಸಿ ಫಲಿತಾಂಶ ಯಾವಾಗ?
2023ನೇ ಸಾಲಿನ ಕರ್ನಾಟಕ ಬೋರ್ಡ್ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಮೇ ತಿಂಗಳ 2ನೇ ವಾರದಲ್ಲಿ ಪ್ರಕಟ ಮಾಡುವ ಸಾಧ್ಯತೆ ಇದೆ.