Wednesday, January 22, 2025

‘ಕೈ, ಕಮಲ’ ಅಭ್ಯರ್ಥಿಗಳ ನಿದ್ದೆಗೆಡಿಸಿದ ನವಲಿಹಿರೇಮಠ್

ಬಾಗಲಕೋಟೆ : ಹುನಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಕೆಆರ್ ಪಿ ಪಕ್ಷದ ಅಭ್ಯರ್ಥಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದಾರೆ.

ಹೌದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಎಸ್.ಆರ್ ನವಲಿ ಹಿರೇಮಠ್ ಅವರ ಚುನಾವಣಾ ಪ್ರಚಾರ ಹಾಗೂ ಅವರಿಗೆ ಕ್ಷೇತ್ರದಲ್ಲಿ ಮತದಾರರು ನೀಡುತ್ತಿರುವ ಅಭೂತಪೂರ್ವ ಬೆಂಬಲದಿಂದ ಆಡಳಿತರೂಢ ಬಿಜೆಪಿ ಸೇರಿದಂತೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಸ್ಟನ್ ಆಗಿದ್ದಾರೆ.

ಇನ್ನೇನು ಚುನಾವಣೆ ಸಮಿಪಿಸುತ್ತಿದ್ದು ಹುನಗುಂದ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹವಾ ಜೋರಾಗಿದೆ. ಕೆಆರ್ ಪಿ ಪಕ್ಷದ ಅಭ್ಯರ್ಥಿ ಎಸ್.ಆರ್ ನವಲಿ ಹಿರೇಮಠ್ ಅವರು ಇಲಕಲ್ ನಗರದಲ್ಲಿ ಮನೆ ಮನೆ ಭೇಟಿ ನೀಡಿ ಮತಯಾಚನೆ ಮಾಡಿದರು.

ಇದನ್ನೂ ಓದಿ : ‘ದಳ’ಕ್ಕೆ ಸಂಕಷ್ಟ : ‘ಬೆದರಿಕೆಗೆ ಹೆದರಿ’ ನಾಮಪತ್ರ ವಾಪಸ್ ಪಡೆದೆ ಅಲ್ತಾಫ್ ಕುಂಪಲ

ಮತಯಾಚನೆ ವೇಳೆ ಎಸ್.ಆರ್ ನವಲಿ ಹಿರೇಂಠ್ ಅವರಿಗೆ ಇಲಕಲ್ ಜನ ಸಕಾರಾತ್ಮಕವಾಗಿ ಸ್ಪಂಧಿಸುತ್ತಿದ್ದಾರೆ. ಇಲಕಲ್ ನಗರದ ಮುನವಳ್ಳಿ ಪೇಟೆ, ಬನಶಂಕರಿ ದೇವಸ್ಥಾನ ಹಾಗೂ ವಿಜಯ ಮಹಾಂತ್ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದರು. ಈ ಸಂಧರ್ಭದಲ್ಲಿ ಇಲಕಲ್ ನಗರದ ಕೆಆರ್ ಪಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

 

ಕೈ, ಕಮಲ ನಾಯಕರು ಕೆಆರ್​ಪಿ ಸೇರ್ಪಡೆ

ಇಲಕಲ್ ತಾಲೂಕಿನ ಸಿದ್ದನಕೊಳ್ಳ ಗ್ರಾಮದ ದಾನಯ್ಯ ಪಾಟೀಲ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಗುರು-ಹಿರಿಯರು, ಯುವಕರು ಎಸ್.ಆರ್.ಎನ್ ಅಭಿಮಾನಿ ಬಳಗದ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷವನ್ನು ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾದರು.

RELATED ARTICLES

Related Articles

TRENDING ARTICLES