Thursday, October 31, 2024

‘ಬೋ..ಮಗನೆ, ಸೂ..ಮಗನೆ’ ಎಲ್ಲೋ ನನ್ನ ದುಡ್ಡು : ಬಿಜೆಪಿ ಮುಖಂಡನಿಗೆ ಮಹಿಳೆ ಧರ್ಮದೇಟು

ಬೆಂಗಳೂರು : ದುಡ್ಡು ಕೊಡುವುದಾಗಿ ಹೇಳಿ ಬಿಜೆಪಿ ರೋಡ್ ಶೋಗೆ ಜನರನ್ನು ಕರೆದುಕೊಂಡು ಹೋಗಿ ಬಳಿಕ ದುಡ್ಡು ಕೊಡದೆ ವಂಚಿಸಿದ್ದ ಬಿಜೆಪಿ ಮುಖಂಡನಿಗೆ ಮಹಿಳೆಯೊಬ್ಬರು ತರಾಟೆ ತೆಗೆದುಕೊಂಡಿದ್ದಾರೆ. ಅವಾಚ್ಯ ಶಬ್ಧಗಳಲ್ಲೇ ‘ಬೋ..ಮಗನೆ, ಸೂ..ಮಗನೆ ಎಲ್ಲೋ ನನ್ನ ದುಡ್ಡು’ ಎಂದು ಧರ್ಮದೇಟು ಕೊಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಹೋಗಿ ಬಳಿಕ ದುಡ್ಡು ಕೊಡದೆ ಯಾಮಾರಿಸಿದ್ದ ಬಿಜೆಪಿ ಮುಖಂಡನಿಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಪಿರಮೇನಹಳ್ಳಿ ಬಿಜೆಪಿ ಮುಖಂಡ ಮಂಜು ಎಂಬುವವರು ಮಹಿಳೆಯರನ್ನು ಬಿಜೆಪಿ ರೋಡ್ ಶೋಗೆ ಕರೆದುಕೊಂಡು ಹೋಗಿದ್ದರು. ಪ್ರಚಾರ ಮುಗಿದ ಬಳಿಕ ದುಡ್ಡು ಕೊಟ್ಟಿರಲಿಲ್ಲ. ನಿನ್ನೆ ಕೈಗೆ ಸಿಗದ ಮುಖಂಡ ಇಂದು ಮಹಿಳೆಯೊಬ್ಬರ ಕೈಗೆ ಸಿಕ್ಕಿದ್ದಾನೆ. ಈ ವೇಳೆ ಆಕ್ರೋಶಗೊಂಡ ಮಹಿಳೆ, ಬಿಜೆಪಿ ಮುಖಂಡನ ಮಾನ ಹರಾಜು ಹಾಕಿದ್ದಾರೆ.

ಇದನ್ನೂ ಓದಿ : ಸಿಎಂ ಆಸೆ ಬಿಚ್ಚಿಟ್ಟ ಮತ್ತೊಬ್ಬ ಬಿಜೆಪಿ ನಾಯಕ

ಎಲ್ಲೋ ನನ್ನ ದುಡ್ಡು, ನುಂಗಿ ನೀರು ಕುಡ್ದಲ್ಲೋ

ಮನೆಯಲ್ಲಿ ಇದ್ದೋಳನ್ನು ಕರೆದುಕೊಂಡು ಹೋದ್ಯಲ್ಲೋ.. ಎಲ್ಲೋ ನನ್ನ ದುಡ್ಡು, ನುಂಗಿ ನೀರು ಕುಡ್ದಲ್ಲೋ..ಥೂ ನಿನ್ನ ಜನ್ಮಕ್ಕೆ ಕಣ್ಣಿಗೆ ಕಾಣಿಸ್ಕೊಳ್ಳಬೇಡ ಹಾಳಾಗಿ ಹೋಗು ಎಂದು ತರಾಟೆ ತೆಗೆದುಕೊಂಡಿದ್ದಾರೆ. ಜೊತೆಗೆ, ಕೈಗೆ ಸಿಕ್ಕ ಕೋಲೊಂದನ್ನು ತೆಗೆದುಕೊಂಡು ಧರ್ಮದೇಟು ಕೊಟ್ಟಿದ್ದಾರೆ.

ಮೂರೂ ಬಿಟ್ಟ ಬಿಜೆಪಿ ಕಳ್ಳ ಮರಿಗಳು

ನಟ ಪ್ರಕಾಶ್ ರಾಜ್ ಅವರು, ಬಿಜೆಪಿ ಮುಖಂಡ ದುಡ್ಡು ಕೊಡದೇ ವಂಚಿಸಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ನಾಚಿಕೆಯಿಲ್ಲದ ಬಿಜೆಪಿಯ ವಂಚಕ ಏಜೆಂಟರು, ಕರ್ನಾಟಕ ಜನರ ಕೈಗೆ ಸಿಕ್ಕಿಬಿದ್ದಿದ್ದಾರೆ. ತರಿ ಕೆರೆ ಏರಿ ಮೇಲೆ ಮೂರೂ ಬಿಟ್ಟ ಬಿಜೆಪಿ ಕಳ್ಳ ಮರಿಗಳು, ಛಿ.. ಛೀ.. ಎಂದು ವ್ಯಂಗ್ಯವಾಡಿದ್ದಾರೆ.

RELATED ARTICLES

Related Articles

TRENDING ARTICLES