Monday, December 23, 2024

ಟಾಸ್ ಸೋತ ಆರ್​ಸಿಬಿ, ಮೊದಲು ಬ್ಯಾಟಿಂಗ್ : ವಿರಾಟ್ ಕೊಹ್ಲಿ ಗೋಲ್ಡನ್ ಡಕ್

ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಮತ್ತೊಂದು ಹೈವೋಲ್ವೇಜ್ ಮ್ಯಾಚ್ ನಡೆಯುತ್ತಿದ್ದು, ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಸೆಣಸುತ್ತಿವೆ. ಐಪಿಎಲ್ 2023ರ 32ನೇ ಪಂದ್ಯ ಇದಾಗಿದ್ದು, ಕಳೆದ ವರ್ಷ ರಾಜಸ್ಥಾನ ಎರಡು ಬಾರಿ ಆರ್‌ಸಿಬಿಯನ್ನು ಸೋಲಿಸಿತ್ತು.

ಟಾಸ್ ಗೆದ್ದ ರಾಜಸ್ಥಾನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಆರ್ ಸಿಬಿ ಇಂದು ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದ್ದು, ಇಂದು ಸಹ ವಿರಾಟ್ ಕೊಹ್ಲಿ ಅವರೇ ತಂಡವನ್ನು ಮುನ್ನಡೆಸುತ್ತಿದ್ದಾರೆ. ವೇಲ್ಸ್ ಪಾರ್ನೆಲ್ ಬದಲಿಗೆ ಡೇವಿಡ್ ವಿಲ್ಲಿ ತಂಡ ಸೇರಿಸಿಕೊಂಡಿದ್ದಾರೆ. ಡುಪ್ಲೆಸಿಸ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿದ್ದಾರೆ.

ಹಸಿರು ಜೆರ್ಸಿಯಲ್ಲಿ ಆರ್​ಸಿಬಿ

ಐಪಿಎಲ್ 16ನೇ ಆವೃತ್ತಿಯಲ್ಲಿ ಆರ್‌ಸಿಬಿ ಈ ಬಾರಿ ಪಿಂಕ್ ಆರ್ಮಿ ವಿರುದ್ಧ ಹಸಿರು ಜೆರ್ಸಿ ಧರಿಸಲಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಆಟಗಾರರು ತಮ್ಮ ಎಂದಿನ ಕೆಂಪು-ಕಪ್ಪು ಮಿಶ್ರಿತ ಜೆರ್ಸಿ ಬದಲು ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರಣದಿಂದ ಆರ್​ಸಿಬಿ ಈ ಭಿನ್ನ ಹಾದಿ ಹಿಡಿದಿದೆ. ಹಸಿರು ಜೆರ್ಸಿ ವಿಶೇಷತೆಯೆಂದರೆ 100 ಪ್ರತಿಶತ ಮರುಬಳಕೆ ವಸ್ತುಗಳಿಂದ ಇದನ್ನು ತಯಾರಿಸಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ವಿರಾಟ್ ಕೊಹ್ಲಿ (ನಾಯಕ), ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ಕೀಪರ್), ಸುಯಶ್ ಪ್ರಭುದೇಸಾಯಿ, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ವೈಶಾಕ್ ವಿಜಯಕುಮಾರ್.

ಇದನ್ನೂ ಓದಿ : ಬೆಂಗಳೂರಿನಲ್ಲಿ ‘ಕಿಂಗ್’ ಕೊಹ್ಲಿ ‘ದರ್ಬಾರ್ ‘ : ಹೊಸ ದಾಖಲೆ ನಿರ್ಮಾಣ

ರಾಜಸ್ಥಾನ್ ರಾಯಲ್ಸ್ ತಂಡ

ಸಂಜು ಸ್ಯಾಮ್ಸನ್ (ಕೀಪರ್/ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

RELATED ARTICLES

Related Articles

TRENDING ARTICLES