Monday, December 23, 2024

ರಾಹುಲ್ ಗಾಂಧಿ ಹೋದಲೆಲ್ಲಾ ಕಾಂಗ್ರೆಸ್ ಕೋತಾ! : ಜಿ.ಎಂ ಸಿದ್ದೇಶ್ವರ್ ವ್ಯಂಗ್ಯ

ದಾವಣಗೆರೆ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರಚಾರ ಕೈಗೊಂಡಿರುವ ಬಗ್ಗೆ ಸಂಸದ ಜಿ.ಎಂ ಸಿದ್ದೇಶ್ವರ್ ವ್ಯಂಗ್ಯವಾಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಹುಲ್ ಗಾಂಧಿ ಹುಬ್ಬಳ್ಳಿಗೆ ಆಗಮನ ಹಾಗೂ ಏಪ್ರಿಲ್ 27ಕ್ಕೆ ಹೊನ್ನಾಳಿ ಕ್ಷೇತ್ರಕ್ಕೆ ಆಗಮನ ಹಿನ್ನೆಲೆ ರಾಗಾ ಐರನ್ ಲೆಗ್ ಇರಬೇಕು ಎಂದು ಕಾಲೆಳೆದಿದ್ದಾರೆ.

ರಾಹುಲ್ ಬಂದಲೆಲ್ಲಾ ಸೋಲು, ಇದು ಇತಿಹಾಸ ನಿರ್ಮಾಣ ಆಗಿದೆ. ರಾಹುಲ್ ಗಾಂಧಿ ಕಾಲಿಟ್ಟ ಕಡೆ ಕಾಂಗ್ರೆಸ್ ಸೋತಿದೆ. ಹೊನ್ನಾಳಿಗೆ ಅವರು ಬಂದು ಹೋದರೆ ನಮಗೆ ಮತ್ತಷ್ಟು ಅನುಕೂಲ. ದಯಮಾಡಿ ರಾಹುಲ್ ಗಾಂಧಿ ಅವರನ್ನು ದಾವಣಗೆರೆಯ ಎಲ್ಲ ಕ್ಷೇತ್ರಗಳಲ್ಲೂ ಸುತ್ತಾಡಿಸಿ. ಎಂಟು ಕ್ಷೇತ್ರದಲ್ಲಿ ಗೆಲ್ಲಲು ಅನುಕೂಲ ಆಗಲಿದೆ ಎಂದು ಲೇವಡಿ ಮಾಡಿದ್ದಾರೆ.

ಸಿದ್ರಾಮಯ್ಯಗೆ ತಿಳುವಳಿಕೆ ಕಮ್ಮಿ

ಲಿಂಗಾಯಿತ ಸಿಎಂ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯರಿಗೆ ತಿಳುವಳಿಕೆ ಇಲ್ಲ. ಏನೇನು ಮಾತನಾಡುತ್ತಾರೆ. ಲಿಂಗಾಯಿತರದ್ದು ಬಹಳ ಜನಸಂಖ್ಯೆ ಇದೆ. ರಾಜ್ಯದಲ್ಲಿ ಹೆಚ್ಚು ಜನ ಇದ್ದಾರೆ. ಲಿಂಗಾಯಿತರೇ ಸಿಎಂ ಆಗಲೆಂದು ಬಹಳ  ಜನ ಬಯಸಿದ್ದಾರೆ. ಬಹಳ ವರ್ಷಗಳಿಂದ ಆಗಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸಾಯೋ ಸಮಯದಲ್ಲೂ ಎಲೆಕ್ಷನ್ ಗೆ ನಿಲ್ಲಬೇಕಾ? : ಮುನಿಸ್ವಾಮಿ ವಿವಾದಾತ್ಮಕ ಹೇಳಿಕೆ

ನಾವು ಲಿಂಗಾಯಿತ ಸಿಎಂ ಅಂತ ಹೇಳಿದ್ದೇವೆ. ಜನರ ಅಪೇಕ್ಷೆಯೂ ಇದೆ, ಲಿಂಗಾಯಿತರು ಸಿಎಂ ಆಗುತ್ತಾರೆ. ಕಾಂಗ್ರೆಸ್ ಲಿಂಗಾಯಿತ ಸಿಎಂ ಘೋಷಣೆ ಮಾಡಲಿ. ದಮ್ ಇದ್ದರೆ ಲಿಂಗಾಯಿತರು ಸಿಎಂ ಎಂದು ಘೋಷಣೆ ಮಾಡಲಿ ಎಂದು ಜಿ.ಎಂ ಸಿದ್ದೇಶ್ವರ್ ಸವಾಲ್ ಹಾಕಿದ್ದಾರೆ.

ಇನ್ನೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಾವಣಗೆರೆಗೆ ಬರ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಮುಂದೆ ದಿನಾಂಕ ನಿಗದಿ ಮಾಡುತ್ತೇವೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES