Monday, December 23, 2024

ಶಿಡ್ಲಘಟ್ಟ ಅಭಿವೃದ್ಧಿ ಪಥದತ್ತ ಹೋಗುತ್ತೆ : ಅಣ್ಣಾ ಮಲೈ ವಿಶ್ವಾಸ

ಬೆಂಗಳೂರು : ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಮತ್ತು ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಕೆ. ಅಣ್ಣಾ ಮಲೈ ಅವರು ಇಂದು ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಡಿಜಿಟಲ್ ಮೀಟ್ ಅಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರು ಅಣ್ಣಾ ಮಲೈ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ, ಅಣ್ಣಾ ಮಲೈ ಅವರು ಡಿಜಿಟಲ್ ಮೀಟ್ ಅಪ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇದೇ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತಾಡಿದ ಅವರು, ಮುಂದಿನ 15 ದಿನ ಎಲ್ಲರು ಒಳ್ಳೆ ಕೆಲಸ ಮಾಡಬೇಕು. ನೀವು ಮಾಡೋ ಕೆಲಸ ನೋಡತಾ ಇದ್ದರೆ ಈ ಬಾರಿ ಶಿಡ್ಲಘಟ್ಟದಲ್ಲಿ ಬಿಜೆಪಿ ಎಂಎಲ್​ಎ(ಶಾಸಕ) ಖಂಡಿತ ಬಂದೆ ಬರುತ್ತದೆ. ಅಭಿವೃದ್ಧಿ ಪಥದತ್ತ ಶಿಡ್ಲಘಟ್ಟ ಹೋಗುತ್ತೆ ಅಂತ ನನಗೆ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ಶಿಡ್ಲಘಟ್ಟದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠ : ‘ಕಮಲ ಹಿಡಿದ’ ನೂರಾರು ಮುಖಂಡರು

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಮಂತ್ರಿಗಳ ಕಾರ್ಯಕ್ರಮಗಳ ಸಂಯೋಜಕ ಎಂ ಎಲ್ ಸಿ ಕೇಶವಪ್ರಸಾದ್, ಮಾಜಿ ಶಾಸಕ ರಾಜಣ್ಣ, ಸಾಮಾಜಿಕ ಮಾಧ್ಯಮ ರಾಜ್ಯ ಸಹ ಸಂಚಾಲಕ ನರೇಂದ್ರ ಸಿಂಹ ಮೂರ್ತಿ, ಮಾಜಿ ಜಿಲ್ಲಾಧ್ಯಕ್ಷ, ಪ್ರಭಾರಿ ಶಿಡ್ಲಘಟ್ಟ ಡಾ. ಜಿ ಮಂಜುನಾಥ್, ಬಿಜೆಪಿ ಯುವ ಮುಖಂಡ ಆನಂದ ಗೌಡ, ತಾಲೂಕು ಮಂಡಲ ಅಧ್ಯಕ್ಷ ಸುರೇಂದ್ರಗೌಡ ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ

ಶಿಡ್ಲಘಟ್ಟ ವಿಧಾನ ಸಭಾ ವ್ಯಾಪ್ತಿಯ ಯೂತ್ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಗಿರಿ.ವಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷದ ತಾಲೂಕು ಕಚೇರಿ ಸೇವಾ ಸೌಧದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಶಿಡ್ಲಘಟ್ಟ ವ್ಯಾಪ್ತಿಯ ತುಮ್ಮನಹಳ್ಳಿ ,ಹಿತ್ತಲ ಹಳ್ಳಿ, ಆನೂರು ವ್ಯಾಪ್ತಿಯ ಗ್ರಾಮಗಳಲ್ಲಿ ನೂರಾರು ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಬಿಜೆಪಿ ಪಕ್ಷ ಸೇರಿದರು.

RELATED ARTICLES

Related Articles

TRENDING ARTICLES